ಮಂಗಳೂರು ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಾಟ ಪತ್ತೆ

KannadaprabhaNewsNetwork | Published : Mar 21, 2024 1:02 AM

ಸಾರಾಂಶ

ಚಿನ್ನವನ್ನು ಪೇಸ್ಟ್‌ ಆಗಿ ಪರಿವರ್ತಿಸಿ ಎರಡು ಲೇಯರ್‌ ಕಂದು ಕಾಗದ ಹಾಳೆಗಳ ನಡುವೆ ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ಸುಮಾರು 6.19 ಲಕ್ಷ ರು. ಮೌಲ್ಯದ 96 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮಂಗಳೂರು: ದುಬೈನಿಂದ ಪ್ರಯಾಣಿಕರೊಬ್ಬರು ಅಕ್ರಮವಾಗ ಸಾಗಿಸುತ್ತಿದ್ದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಭಟ್ಕಳ ಮೂಲದ ಪ್ರಯಾಣಿಕ ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿದ್ದ. ತಪಾಸಣೆ ವೇಳೆ ಆತ ಚಿನ್ನವನ್ನು ಪೇಸ್ಟ್‌ ಆಗಿ ಪರಿವರ್ತಿಸಿ ಎರಡು ಲೇಯರ್‌ ಕಂದು ಕಾಗದ ಹಾಳೆಗಳ ನಡುವೆ ಬಚ್ಚಿಟ್ಟಿರುವುದು ಪತ್ತೆಯಾಗಿತ್ತು. ಸುಮಾರು 6.19 ಲಕ್ಷ ರು. ಮೌಲ್ಯದ 96 ಗ್ರಾಂ ಚಿನ್ನವನ್ನು ವಶಪಡಿಸಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ. ---------- ನೀತಿ ಸಂಹಿತೆ: 3.13 ಲಕ್ಷ ರು. ಮೌಲ್ಯದ ಡ್ರಗ್ಸ್‌, 21 ಲೀ. ಮದ್ಯ ವಶಮಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20ರವರೆಗೆ 12,300 ರು. ಮೌಲ್ಯದ 21.34 ಲೀ. ಮದ್ಯವನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, 3,13,500 ರು. ಮೌಲ್ಯದ 1.65 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾ.20ರವರೆಗೆ ದೂರವಾಣಿ ಮೂಲಕ (1950) 75 ಸಾರ್ವಜನಿಕರಿಂದ ಮಾಹಿತಿ ಕೋರಿಕೆಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್ ಆಪ್ ಮೂಲಕ ಇಲ್ಲಿಯವರೆಗೆ 11 ದೂರುಗಳು ಸ್ವೀಕೃತಗೊಂಡಿದ್ದು, ಎಲ್ಲ ದೂರುಗಳನ್ನು ವಿಲೇವಾರಿ ಮಾಡಲಾಗಿದೆ.ಎನ್.ಜಿ.ಆರ್.ಎಸ್ ಪೋರ್ಟಲ್ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ ) ಮೂಲಕ ಜಿಲ್ಲೆಯಲ್ಲಿ ಒಟ್ಟು 27 ದೂರುಗಳು ಸ್ವೀಕೃತಗೊಂಡಿದ್ದು, 22 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಒಟ್ಟು 8 ಖರ್ಚು ವೆಚ್ಚ ಪರೀವೀಕ್ಷಕರರನ್ನು, 72 ಪ್ಲೈಯಿಂಗ್ ಸ್ವ್ಯಾಡ್ (ಎಫ್.ಎಸ್.ಟಿ), 69 ಎಸ್.ಎಸ್.ಟಿ ತಂಡಗಳು ಮತ್ತು 8 ಅಬಕಾರಿ ತಂಡಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.

Share this article