ಹೊನ್ನಾವರ: ತಾಲೂಕಿನ ಕರ್ಕಿ ಹೆಗಡೆಹಿತ್ತಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಶನಿವಾರ ಅದ್ಧೂರಿಯಾಗಿ ನಡೆಯಿತು.ಶಾಲೆಯಲ್ಲಿ ಅಳವಡಿಸಿದ ಸ್ಮಾರ್ಟ್ ಕ್ಲಾಸ್, ವೀರಮಣಿ ಯುವಕ ಸಂಘದವರು ನಿರ್ಮಿಸಿಕೊಟ್ಟ ಮಹಾದ್ವಾರ, ಕಂಕೋಡಿಯ ಮುಕ್ರಿ ಸಮಾಜದವರು ನಿರ್ಮಿಸಿಕೊಟ್ಟ ಧ್ವಜಸ್ತಂಭವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣ ಇಲಾಖೆಯ ಜತೆ ಊರಿನವರ ಪರಿಶ್ರಮದಿಂದ ಹೆಗಡೆಹಿತ್ತಲ ಶಾಲೆಯು ಅಭಿವೃದ್ಧಿ ಕಾಣುತ್ತಿದೆ. ಶಾಲೆಯ ಅಭಿವೃದ್ಧಿಗೆ ಸ್ಪಂದಿಸುತ್ತೇನೆ ಎಂದರು.ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಾದ ಸೀಮಾ ಹಬ್ಬು, ಭವಾನಿ ನಾಯ್ಕ, ಆಶಾ ನಾಯ್ಕ, ಶೈಲಾ ಗೌಡ, ಭಾರತಿ ಭಟ್ಟ, ವಿಜಯಾ ಮೂಡ್ಕಣಿ, ನಾಗಜ್ಯೋತಿ ಹೆಬ್ಬಾರ, ಸರೋಜಿನಿ ಗುನಗಾ ಹಾಗೂ ಸ್ಥಳದಾನಿಗಳಾದ ಮಹಾಲಕ್ಷ್ಮೀ ನಾಯ್ಕ, ಮಂಜುನಾಥ ನಾಯ್ಕ ಅವರನ್ನು ಸನ್ಮಾನಿಸಲಾಯಿತು.ಗ್ರಾಪಂ ಅಧ್ಯಕ್ಷೆ ವೀಣಾ ಶೇಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯ ಹರಿಶ್ಚಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನೋದ ನಾಯ್ಕ, ಸದಸ್ಯರಾದ ಸುಮತಿ ನಾಯ್ಕ, ನಾಗರಾಜ ನಾಯ್ಕ, ಕಲ್ಪನಾ ನರೊನ್ಹಾ, ಸುಮಿತ್ರಾ ಮೇಸ್ತ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ನಾಯ್ಕ, ಬಿಆರ್‌ಸಿ ಸಮನ್ವಯಾಧಿಕಾರಿ ವಿನಾಯಕ ಅವಧಾನಿ, ಸಿಆರ್‌ಪಿ ಸಚ್ಚಿದಾನಂದ ಭಟ್ಟ, ಪ್ರಚಾರ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ, ಗಣೇಶ ಮುಕ್ರಿ, ಚಂದ್ರಕಾಂತ ನಾಯ್ಕ ಸದಸ್ಯರು ಇದ್ದರು.ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶಂಕರ ನಾಯ್ಕ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಆರ್.ಕೆ. ಮುಕ್ರಿ ವರದಿ ವಾಚಿಸಿದರು. ಬಿಐಆರ್‌ಟಿ ರಾಮಚಂದ್ರ ಹಳದೀಪುರ ವಂದಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ನಿರ್ವಹಿಸಿದರು.ಸಂವಿಧಾನ ಓದು ಅಭಿಯಾನ ಸ್ಪರ್ಧೆಯಲ್ಲಿ ಬಹುಮಾನ
ಹಳಿಯಾಳ: ಸಂವಿಧಾನ ಓದು ಕರ್ನಾಟಕ ಅಭಿಯಾನ ಮತ್ತು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನ ವತಿಯಿಂದ ಆಯೋಜಿಸಿದ ರಾಜ್ಯಮಟ್ಟದ ಸಂವಿಧಾನ ಓದು ಪ್ರಬಂಧ ಸ್ಪರ್ಧೆಯಲ್ಲಿ ಹಳಿಯಾಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ಕಿರಣ ದುಮಾಳಿ ಹಾಗೂ ಸಹನಾ ನಾಯಕ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಧಾನಕರ ಬಹುಮಾನ ನೀಡಿ ಗೌರವಿಸಿದರು.ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮಾರುತಿ ಚಿಬುಲಕರ, ಉದಯ ಸುತಾರ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ವಿಠ್ಠಲ ಕಿತ್ತೂರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ತರಬೇತು ಹೊಂದಿದ್ದರು.ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದೆಲ್ಲೆಡೆ ಕಾಲೇಜಿನ 390 ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಗೀತಾ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.