ನಾಳೆಯಿಂದ ರಂಗರಾವ ಮಹಾರಾಜರ ಸುವರ್ಣ ಮಹೋತ್ಸವ

KannadaprabhaNewsNetwork |  
Published : Jan 05, 2025, 01:33 AM IST
ನಗರದಲ್ಲಿ ಜನೆವರಿ 6ರಿಂದ ರಂಗರಾವ ಮಹಾರಾಜರ ಸುವರ್ಣ ಮಹೋತ್ಸವ | Kannada Prabha

ಸಾರಾಂಶ

ಜ.6 ರಿಂದ 8 ರವರೆಗೆ ಮೂರು ದಿನಗಳ ಕಾಲ ನಗರದ ಮುರಾಣಕೇರಿಯಲ್ಲಿನ ಈಶ್ವರಲಿಂಗ ದೇವಸ್ಥಾನದ ಹತ್ತಿರವಿರುವ ರಂಗರಾವ ಮಹಾರಾಜರ ನಿವಾಸದಲ್ಲಿ ಸದ್ಗುರು ಸಮರ್ಥ ರಂಗರಾವ ಮಹಾರಾಜರ ಸಪ್ತಾಹ 50ನೇ ವರ್ಷದ ಪುಣ್ಯತಿಥಿ ಸಪ್ತಾಹದ ಸುವರ್ಣ ಮಹೋತ್ಸವ ನಡೆಯಲಿದೆ ಎಂದು ಶಂಕರಾನಂದ ಅನಂತಪುರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜ.6 ರಿಂದ 8 ರವರೆಗೆ ಮೂರು ದಿನಗಳ ಕಾಲ ನಗರದ ಮುರಾಣಕೇರಿಯಲ್ಲಿನ ಈಶ್ವರಲಿಂಗ ದೇವಸ್ಥಾನದ ಹತ್ತಿರವಿರುವ ರಂಗರಾವ ಮಹಾರಾಜರ ನಿವಾಸದಲ್ಲಿ ಸದ್ಗುರು ಸಮರ್ಥ ರಂಗರಾವ ಮಹಾರಾಜರ ಸಪ್ತಾಹ 50ನೇ ವರ್ಷದ ಪುಣ್ಯತಿಥಿ ಸಪ್ತಾಹದ ಸುವರ್ಣ ಮಹೋತ್ಸವ ನಡೆಯಲಿದೆ ಎಂದು ಶಂಕರಾನಂದ ಅನಂತಪುರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುರಾಣಕೇರಿ ಸಹೋದರ ನಿವಾಸಿಗಳಾದ ಈರಣ್ಣ ಪತ್ತಾರ, ಆನಂದ ಪತ್ತಾರ, ಅಶೋಕ ಪತ್ತಾರ, ಇವರ ಕುಟುಂಬಸ್ಥರು, ವಿಶ್ವಕರ್ಮ ಸಮಾಜದವರು ಹಾಗೂ ಗಲ್ಲಿಯ ಜನರೆಲ್ಲ ಸೇರಿ ಹಲವು ದಶಕಗಳಿಂದ ರಂಗರಾವ ಮಹಾರಾಜರ ಪುಣ್ಯತಿಥಿಯ ಅಂಗವಾಗಿ ಸಪ್ತಾಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು.ಜ.6 ರಂದು ಬೆಳಗ್ಗೆ 7.30ಕ್ಕೆ ರುದ್ರಾಭಿಷೇಕ ಪೂಜೆ, ಬಳಿಕ ಅಂಬಾಭವಾನಿ ದೇವಸ್ಥಾನದಿಂದ ರಂಗರಾವ ಮಹಾರಾಜರ ನಿವಾಸದವರೆಗೆ 501 ಕುಂಭಮೇಳ ಮತು ಸಕಲ ವಾದ್ಯಘೋಷಗಳೊಂದಿಗೆ ಮಹಾರಾಜರ ಬೆಳ್ಳಿ ಮೂರ್ತಿ ದಿಂಡಿಯಾತ್ರೆ ನಡೆಯಲಿದೆ. ಶಹಾಪುರದ ವಿಶ್ವಕರ್ಮ ಏಕದಂಡಗಿಮಠದ ಕಾಳಹಸ್ತೆಂದ್ರ ಮಹಾಸ್ವಾಮಿಗಳಿಂದ ಆಶೀರ್ವಚನ, ನಂತರದಲ್ಲಿ ಸಾಂಪ್ರಾದಾಯಿಕ ಭಜನೆ, ಮಹಾಪ್ರಸಾದ ನಡೆಯಲಿದೆ. ಜ.7ರಂದು ಬೆಳಗ್ಗೆ 5.30ಕ್ಕೆ ಕಾಕಡಾರತಿ, ರುದ್ರಾಭಿಷೇಕ, ಮಧ್ಯಾಹ್ನ ಪ್ರವಚನ ಹಾಗೂ ಪ್ರಸಾದ. ಸಾಯಂಕಾಲ ಪ್ರವಚನ ನಂತರ ಮಹಾಪ್ರಸಾದ ನಡೆಯಲಿದೆ. ಜ.8ರಂದು ಬೆಳಗ್ಗೆ 5.30ಕ್ಕೆ ಕಾಕಡಾರತಿ, ರುದ್ರಾಭಿಷೇಕ, ಅರೇಮಾದನಹಳ್ಳಿಯ ಅನಂತ ಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳ ಇವರಿಂದ ಆಶೀರ್ವಚನ, ಶ್ರೀಮದ್ ದಾಸಬೋಧ ಪೂಜೆ, ಪುಷ್ಪವೃಷ್ಟಿ ಹಾಗೂ ಜ್ಞಾನೇಶ್ವರ ಮಹಾರಾಜರ ವೀಣಾ ಪೂಜೆ, ಸಂಪ್ರಾದಾಯಿಕ ಮುಂಜಾನೆಯ ಭಜನೆ, ಪಲ್ಲಕ್ಕಿ ಸೇವೆ. ಮಹಾಪ್ರಸಾದದೊಂದಿಗೆ ಸಪ್ತಾಹ ಕಾರ್ಯಕ್ರಮಗಳು ಮಂಗಲವಾಗುವುದು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಮಹೇಶ ಮನ್ವಾಚಾರಿ, ಈರಣ್ಣ ಪತ್ತಾರ, ಎಂ.ಕೆ.ಪತ್ತಾರ, ಭೀಮರಾವ ಪತ್ತಾರ, ಪ್ರಮೋದ ಬಡಿಗೇರ‌ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ