ಗೋಲ್ಡ್ ಮ್ಯಾನ್‌ಗೆ ಒಲಿದ ಇಂಟರ್ ನ್ಯಾಶನಲ್ ಗೋಲ್ಡ್ ಅವಾರ್ಡ್

KannadaprabhaNewsNetwork |  
Published : Aug 20, 2025, 02:00 AM IST
19ಸುಭಾಶ್‌ | Kannada Prabha

ಸಾರಾಂಶ

ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿರುವ ಈ ಸ್ಪರ್ಧೆಯು ಪ್ರತಿಷ್ಟಿತ ಎಫ್.ಐ.ಎ.ಪಿ ಮಾನ್ಯತೆಯನ್ನು ಪಡೆದಿರುತ್ತದೆ. ಸುಭಾಶ್ ಕಾಮತ್ ಅವರು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು ಅವರಿಂದ ಛಾಯಾಗ್ರಹಣ ಕಲಿತು, ಉದ್ಯಮದ ಜೊತೆಜೊತೆಗೆ ಹವ್ಯಾಸವನ್ನು ಬೆಳೆಸುತ್ತಾ ಈ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿಯ ಚಿನ್ನಾಭರಣ ಉದ್ಯಮಿ ಸುಭಾಶ್ ಎಂ. ಕಾಮತ್ ಅವರು ಕೀನ್ಯಾದ ಮಸೈಮಾರಾದಲ್ಲಿ ಸೆರೆಹಿಡಿದಿರುವ ‘ಹಂಗರ್ ವರ್ಸಸ್ ಹೋಪ್’ ಎಂಬ ಛಾಯಾಚಿತ್ರಕ್ಕೆ ಓರಾ ಡಿ ಫ್ರೇಮ್ ಸರ್ಕ್ಯುಟ್ ಆಯೋಜಿಸಿದ ಛಾಯಾಚಿತ್ರ ಸ್ಪರ್ಧೆಯ ವನ್ಯಜೀವಿ ವಿಭಾಗದಲ್ಲಿ ಕ್ಲಬ್ ಗೋಲ್ಡ್ ಅವಾರ್ಡ್‌ ಲಭಿಸಿದೆ.ಸುಮಾರು ಐವತ್ತಕ್ಕೂ ಹೆಚ್ಚು ದೇಶಗಳ ಛಾಯಾಗ್ರಾಹಕರು ಭಾಗವಹಿಸಿರುವ ಈ ಸ್ಪರ್ಧೆಯು ಪ್ರತಿಷ್ಟಿತ ಎಫ್.ಐ.ಎ.ಪಿ ಮಾನ್ಯತೆಯನ್ನು ಪಡೆದಿರುತ್ತದೆ. ಸುಭಾಶ್ ಕಾಮತ್ ಅವರು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು ಅವರಿಂದ ಛಾಯಾಗ್ರಹಣ ಕಲಿತು, ಉದ್ಯಮದ ಜೊತೆಜೊತೆಗೆ ಹವ್ಯಾಸವನ್ನು ಬೆಳೆಸುತ್ತಾ ಈ ಸಾಧನೆ ಮಾಡಿದ್ದಾರೆ.ವನ್ಯಜೀವಿ ಛಾಯಾಗ್ರಹಣವು ನೈಸರ್ಗಿಕ ಆವಾಸಸ್ಥಾನಗಳಲ್ಲಿ ವನ್ಯ ಜೀವಿಗಳ ಛಾಯಾಚಿತ್ರವನ್ನು ಸೆರೆಹಿಡಿಯುವ ಛಾಯಾಗ್ರಹಣದ ಒಂದು ಪ್ರಸಿದ್ಧ ವಿಭಾಗ. ಇದು ಅದೆಷ್ಟು ಆಸಕ್ತಿದಾಯಕ ಕಲೆಯೋ ಅಷ್ಟೇ ಸವಾಲಿನ ಹವ್ಯಾಸವೂ ಹೌದು‌. ಒಂದು ಚಿತ್ರದ ಹಿಂದೆ ಛಾಯಾಗ್ರಾಹಕನ ಅನೇಕ ದಿನಗಳ ಕಾಯುವಿಕೆ, ತಾಳ್ಮೆ, ಪ್ರಾಣಿ, ಪಕ್ಷಿ, ಕಾಡು, ಗಿಡಗಳ ಮಾಹಿತಿಯೊಂದಿಗೆ ಸುತ್ತಲಿನ ಪರಿಸರದ ಬಗ್ಗೆ ವಿಶೇಷ ಅರಿವು ಅತ್ಯಂತ ಅಗತ್ಯ. ಸುಭಾಶ್‌ ಕಾಮತ್ ಓರ್ವ ಯಶಸ್ವಿ ಉದ್ಯಮಿ. ಆದರೆ ಅಲ್ಲೇ ಅವರು ನಿಲ್ಲದೆ ಹವ್ಯಾಸಕ್ಕೆಂದು ಛಾಯಾಗ್ರಹಣ ಕಲಿತು, ವನ್ಯಜೀವಿ ಛಾಯಾಗ್ರಹಣದ ಆಳ ಅಗಲಗಳನ್ನು ಕಲಿಯುತ್ತಾ ಆ ವಿಭಾಗದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ