ಗೋಳಿಹೊಳೆ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯ ಸಿದ್ಧತೆ

KannadaprabhaNewsNetwork |  
Published : Apr 29, 2026, 03:45 AM IST
ಬೈಂದೂರು ತಾಲೂಕಿನ ಗೋಳಿಹೊಳೆಯಲ್ಲಿ  ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯ ಮಹೋತ್ಸವಕ್ಕೆ ಪೂರ್ವಸಿದ್ಧತೆ ಸಭೆ ನಡೆಯಿತು | Kannada Prabha

ಸಾರಾಂಶ

ಬೈಂದೂರು ಕ್ಷೇತ್ರದ ಗೋಳಿಹೊಳೆಯಲ್ಲಿ ಕನ್ಯಾಡಿ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ 48 ದಿನಗಳ ಚಾತುರ್ಮಾಸ್ಯ ವ್ರತಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜು. 28ರಿಂದ ಆರಂಭವಾಗಲಿರುವ ಈ ಅನುಷ್ಠಾನಕ್ಕೆ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆಯು ಗೋಳಿಹೊಳೆಯಲ್ಲಿ ನಡೆಯಿತು.

ಬೈಂದೂರು: ಬೈಂದೂರು ಕ್ಷೇತ್ರದ ಗೋಳಿಹೊಳೆಯಲ್ಲಿ ಕನ್ಯಾಡಿ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ 48 ದಿನಗಳ ಚಾತುರ್ಮಾಸ್ಯ ವ್ರತಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಜು. 28ರಿಂದ ಆರಂಭವಾಗಲಿರುವ ಈ ಅನುಷ್ಠಾನಕ್ಕೆ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆಯು ಗೋಳಿಹೊಳೆಯಲ್ಲಿ ನಡೆಯಿತು.

ರಾಜ್ಯದ ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸರ್ವ ಜನರ ಹಿತೈಷಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ‘‘ಯಾರು ಈ ಪುಣ್ಯ ಕಾರ್ಯದಲ್ಲಿ ಮನಸಾರೆ ಪಾಲ್ಗೊಳ್ಳುತ್ತಾರೋ, ಅವರಿಗೆ ಜೀವನದಲ್ಲಿ ಯಶಸ್ಸು ಮತ್ತು ಶಾಂತಿ ಲಭಿಸುವುದು ನಿಶ್ಚಿತ. ಈ ಚಾತುರ್ಮಾಸ್ಯವು ಬೈಂದೂರು ಕ್ಷೇತ್ರದ ಏಳಿಗೆಯ ಪಥದಲ್ಲಿ ಒಂದು ಮೈಲಿಗಲ್ಲಾಗಲಿದೆ” ಎಂದು ಹೇಳಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಜಿಪಂ ಮಾಜಿ ಸದಸ್ಯ ರಾಜು ಪೂಜಾರಿ, ಬೈಂದೂರು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ, ಚಾತುರ್ಮಾಸ್ಯ ಸಂಚಾಲಕ ಶಿವರಾಜ್ ಪೂಜಾರಿ, ಪ್ರಮುಖರಾದ ಕೆ.ಆರ್. ನಾಯ್ಕ್, ಶೇಖರ್ ಪೂಜಾರಿ, ಅಶೋಕ್ ಪೂಜಾರಿ ಬೀಜಾಡಿ, ನರಸಿಂಹ ಪೂಜಾರಿ ಪಡುಕೋಣೆ, ಗಣೇಶ್ ಪೂಜಾರಿ ಕೆಂಚನೂರು, ಸಂತೋಷ್ ಪೂಜಾರಿ ಕರ್ಕುಂಜೆ, ಗೋವಿಂದ್ ಪೂಜಾರಿ, ಕಂಬಳ ಸಮಿತಿ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದು, ಈ ಧಾರ್ಮಿಕ ಸಂಕಲ್ಪಕ್ಕೆ ಸಾಕ್ಷಿಯಾದರು.

48 ದಿನ ನಿತ್ಯೋತ್ಸವ: ಈ ಚಾತುರ್ಮಾಸ ಸಂದರ್ಭದಲ್ಲಿ ಪ್ರತಿ ದಿನ ಧಾರ್ಮಿಕ ವಿಧಿ ವಿಧಾನಗಳು, ವಿಶೇಷ ಪೂಜೆಗಳು ನೆರವೇರಲಿವೆ. ಜಿಲ್ಲೆಯ ಕಲೆಗಳಾದ ಯಕ್ಷಗಾನ, ವೈವಿಧ್ಯಮಯ ಭಜನಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಸಭೆಗಳು ಮೇಳೈಸಲಿವೆ. ಕುಂಭಮೇಳದ ಪಾವಿತ್ರ್ಯವನ್ನು ಸ್ಮರಿಸುವಂತೆ ನಡೆಯಲಿರುವ ಈ 48 ದಿನಗಳ ಕಾಲಾವಧಿಯಲ್ಲಿ, ಪ್ರತಿದಿನ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜನಮಾನಸದಲ್ಲಿ ಧಾರ್ಮಿಕ ಭಾವನೆಗಳನ್ನು ಜಾಗೃತ ಗೊಳಿಸಿ, ಕ್ಷೇತ್ರದ ಏಳಿಗೆಗೆ ಸಾಕ್ಷಿಯಾಗಲಿರುವ ಈ ಪುಣ್ಯ ಮಹೋತ್ಸವಕ್ಕೆ ಇಡೀ ಜಿಲ್ಲೆಯ ಜನತೆಯ ಧಾರ್ಮಿಕ ಹಬ್ಬವಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವೇರಿ ನೀರು ವಾಸ್ತವಾಂಶ ಸಂಂಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ರಿಟ್‌: ಎಚ್‌.ಕೆ.ರಾಮು
ವಿಕಸಿತ ಭಾರತ ಭವಿಷ್ಯ ರೂಪಿಸುವ ದೃಢ ಸಂಕಲ್ಪ: ನಿರ್ಮಲಾ ಸೀತಾರಾಮನ್