ನಾಗರ ಪಂಚಮಿ: ಹೂ, ಎಳನೀರು, ಬಾಳೆಹಣ್ಣಿಗೆ ಉತ್ತಮ ಬೇಡಿಕೆ

KannadaprabhaNewsNetwork |  
Published : Aug 09, 2024, 12:46 AM IST
ಎಳನೀರು | Kannada Prabha

ಸಾರಾಂಶ

ತುಳು ನಾಡಿನಲ್ಲಿ ಹಬ್ಬಗಳ ಸರತಿ ಸಾಲು ಬರುತ್ತಿದೆ. ಪಂಚಮಿ ಹಬ್ಬಕ್ಕೆ ಹೂ ಹಣ್ಣಿಗೆ ಉತ್ತಮ ಬೇಡಿಕೆ ಇದೆ.

ರಾಂ ಅಜೆಕಾರು ಕನ್ನಡಪ್ರಭ ವಾರ್ತೆ ಕಾರ್ಕಳ

ಆಷಾಢ ಬಳಿಕ ತುಳುನಾಡಿನಲ್ಲಿ ಹಬ್ಬಗಳ ಸರತಿ ಸಾಲಾಗಿ ಬರುತ್ತಿದೆ. ಇಂದು ನಾಗರ ಪಂಚಮಿಯಾದ ಕಾರಣ ಈ ಭಾರಿ ಹೂವಿಗೆ ಎಳನೀರು ಬಾಳೆಹಣ್ಣುಗಳಿಗೂ ಉತ್ತಮ ಬೇಡಿಕೆ ಬಂದಿದ್ದ ಕಾರಣ ವ್ಯಾಪಾರಿಗಳ ಮುಖದಲ್ಲಿ ಸಂತಸ ತಂದಿದೆ.

ಉಡುಪಿ, ದ. ಕ. ವ್ಯಾಪ್ತಿಯಲ್ಲಿ ಹೂವಿನ ವ್ಯಾಪಾರದಿಂದ ಜೀವನ ನಿರ್ವಹಣೆ ಮಾಡುವ ಅನೇಕ ಕುಟುಂಬಗಳಿವೆ. ಮಳೆಗಾಲದಲ್ಲಿ ಹೂವಿನ ಬೇಡಿಕೆ ಕಡಿಮೆ ಇದ್ದರಿಂದ ದರ ಕುಸಿತ ಸಹಜವಾಗಿದ್ದು, ಈ ಬಾರಿಯ ಹೂವಿನ ಬೆಲೆ ಹೆಚ್ಚಳದಿಂದ ಹೂ ಬೆಳೆ ಬೆಳೆಯುವ ರೈತರ ಮೊಗದಲ್ಲಿ ಸಂತಸ ಉಂಟುಮಾಡಿದೆ.

ಕಾರ್ಕಳ ಹೆಬ್ರಿ ಉಡುಪಿ ಹೂವಿನ ಮಾರುಕಟ್ಟೆಗಳಲ್ಲಿ ಸೇವೆಂತಿಗೆ, ಕಾಕಡ, ಮೊಳವೊಂದಕ್ಕೆ ಐವತ್ತು ರು. ವರೆಗೆ ಮಾರಾಟವಾಗುತ್ತಿದೆ. ಶಂಕರಪುರ ಮಲ್ಲಿಗೆ (ಉಡುಪಿ ಮಲ್ಲಿಗೆ) ( 2100 ) ಇಂದು ಅಟ್ಟೆಗೆ 2, 500 - 3000 ರು. ವರೆಗೆ ಮಾರಾಟವಾಗುತ್ತಿದೆ .

ಈ ಬಾರಿ ಸೇವಂತಿಗೆ ಕುಚ್ಚಿ ಯೊಂದಕ್ಕೆ 1500-2000 ರು. ವರೆಗೆ ಮಾರಾಟವಾಗಿದ್ದು ಈ ಬಾರಿ ಕೊಂಚ ಇಳಿಕೆ ಯಾಗಿದ್ದು ಮಾರು ಒಂದಕ್ಕೆ 200 ರಿಂದ 250 ದರಕ್ಕೆ ಮಾರಾಟವಾಗುತ್ತಿದೆ. ಹಿಂಗಾರ ಗಾತ್ರಕ್ಕೆ ತಕ್ಕಂತೆ ಒಂದಕ್ಕೆ 200 ರಿಂದ 300 ವರೆಗೆ ದರವಿದೆ. ಕೇದಗೆ ಕಟ್ಟು ಒಂದಕ್ಕೆ 250ರಿಂದ 400 ವರೆಗೆ ಮಾರಾಟ ವಾಗುತ್ತಿದೆ. ಕಾಕಡ 900 ರಿಂದ 1300 ವರೆಗೆ ಮಾರಾಟವಾಗುತ್ತಿದ್ದು ದರವು ಯಥಾಸ್ಥಿತಿ ಕಾಯ್ದು ಕೊಂಡಿದೆ.

ಕುಸಿದ ಶಂಕರ ಪುರ ಮಲ್ಲಿಗೆ ಕೃಷಿ : ಕಳೆದ ಒಂದು ತಿಂಗಳಿನ ಸುರಿಯುತ್ತಿರುವ ಮಳೆಯಿಂದ ಮಲ್ಲಿಗೆ ಹೂವಿನ ಬೆಳೆ ಕುಸಿತವಾಗಿದೆ. ಎಲೆಚುಕ್ಕಿ ರೋಗವು ಬಾಧಿಸಿ ಗಿಡಗಳ ಚಿಗುರು ಕೆಂಪಾಗಿ ಬೆಳವಣಿಗೆಗೆ ಕುಂಠಿತ ಗೊಳಿಸುತ್ತದೆ. ಇದರಿಂದಾಗಿ ಹೂವಿನ ಮೊಗ್ಗಿನ‌‌ ಬೆಳವಣಿಗೆ ಕಡಿಮೆಯಾಗುತ್ತದೆ ಎನ್ನುತ್ತಾರೆ ಹೂವಿನ ಬೆಳೆಗಾರ ರೇಶ್ಮಾ ಮೆನೆಜಸ್ ‌ಮಟ್ಟಾರ್ ಶಿರ್ವಾ

ಎಳನೀರು ಬಾಳೆಹಣ್ಣನ್ನ ಬೆಲೆ ಏರಿಕೆ: ನಾಗರ ಪಂಚಮಿ ಸಂದರ್ಭ ಎಳನೀರು ಹಾಗೂ ಬಾಳೆಹಣ್ಣುಗಳ ಬೆಲೆ ಏರಿಕೆ ಕಂಡಿದೆ. ಈ ಬಾರಿ ಕಾರ್ಕಳ ಹಾಗೂ ಉಡುಪಿಗಳಲ್ಲಿ ಎಳನೀರು ಒಂದಕ್ಕೆ 50- 100 ರು. ವರೆಗೆ ಮಾರಾಟವಾಗಿದೆ. ಬಾಳೆಹಣ್ಣು ಸ್ಥಳೀಯ ಮೈಸೂರು ಕೆಜಿ ಗೆ 70- 100 ರು. ವಿದೆ. ಹಾಗೂ ಉತ್ತಮ ಜಾತೀಯ ಬಾಳೆಹಣ್ಣು ಗಳಿಗೆ ಗಾತ್ರಕ್ಕೆ ತಕ್ಕಂತೆ ಕೆ.ಜಿ. ಯೊಂದಕ್ಕೆ 100- 300 ರು. ವರೆಗೆ ದರವಿದೆ.

ಪಾವಗಡ, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗ, ಮೈಸೂರು ಕಡೆಗಳಲ್ಲಿ ಹೂವುಗಳನ್ನು ತರಿಸುತ್ತಿದ್ದೇವೆ. ಹೂವಿನ ಬೆಲೆ ಏರಿಕೆ ಕಂಡಿದೆ. ಉಡುಪಿ ಮಲ್ಲಿಗೆ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ 2500-3000 ರು. ವರೆಗೆ ಮಾರಾಟವಾಗುತ್ತಿದೆ ಎಂದು ಎಣ್ಣೆಹೊಳೆ ಹೂ ವ್ಯಾಪಾರಸ್ಥ ಸಂತೋಷ್ ನಾಯ್ಕ್ ಹೇಳಿದರು.

ಹಬ್ಬಗಳು ಸರತಿ ಸಾಲಿನಲ್ಲಿ ಬರುತ್ತಿದ್ದು, ನಾಗರ ಪಂಚಮಿಗೆ ತನು ತರ್ಪಣಕ್ಕಾಗಿ ಹೂವು ಮುಖ್ಯವಾಗಿದೆ.‌ ಬೆಲೆ ಏರಿಕೆಯು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ತೆಳ್ಳಾರು ರಕ್ಷಿತಾ ಶಾಶ್ವತ್ ಪೂಜಾರಿ ತಿಳಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?