ನಾಪೋಕ್ಲು: ಗುಡ್‌ ಫ್ರೈಡೆ, ಮೆರವಣಿಗೆ

KannadaprabhaNewsNetwork |  
Published : Apr 01, 2024, 12:53 AM IST
ನಾಪೋಕ್ಲು ಮೇರಿ ಮಾತೆ ದೇವಾಲಯದಲ್ಲಿ ಗುಡ್ ಫ್ರೈಡೆಆಚರಣೆಸಂದರ್ಭ. | Kannada Prabha

ಸಾರಾಂಶ

ಗುಡ್‌ ಫ್ರೈಡೇ ಕ್ರಿಶ್ಚಿಯನ್‌ ಸಮುದಾಯದ ಬಹಳ ಮಹತ್ವದ ದಿನ. ಯೇಸು ಕ್ರಿಸ್ತನನ್ನು ಶಿಲುಬೇಗೇರಿಸಿದ ದಿನ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಗುಡ್ ಫ್ರೈಡೆ ಕ್ರಿಶ್ಚಿಯನ್ ಸಮುದಾಯದ ಬಹಳ ಮಹತ್ವದ ದಿನ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ ಹಾಗೂ ಯೇಸು ತನ್ನನ್ನು ನಂಬಿದವರ ಪಾಪ ವಿಮೋಚನೆ ಗೊಳಿಸಲು ತನ್ನ ಜೀವನವನ್ನು ತ್ಯಾಗ ಮಾಡಿದ ಪವಿತ್ರ ದಿನವೂ ಹೌದು. ನಾಪೋಕ್ಲು ಮೇರಿ ಮಾತೆ ದೇವಾಲಯದ ಕ್ರೈಸ್ತ ಭಕ್ತಾದಿಗಳು ಈ ದಿನದಂದು ಧ್ಯಾನ ಹಾಗೂ ಪ್ರಾರ್ಥನೆಯಿಂದ ಕ್ರಿಸ್ತನ ಕೊನೆಯ ಗಳಿಗೆಯ ಪ್ರಾರ್ಥನಾ ವಿಧಿಯನ್ನು ಮೆರವಣಿಗೆ ಮೂಲಕ ನೆರವೇರಿಸಿದರು.

ಧರ್ಮಗುರುಗಳಾದ ಜ್ಞಾನ ಪ್ರಕಾಶ್ ಮಾತನಾಡಿ, ಈ ಹಬ್ಬವು ಅರ್ಥಗರ್ಭಿತವಾಗಿ ಆಚರಿಸಬೇಕಾದರೆ ನಮಗೋಸ್ಕರ ಪ್ರಾಣ ಕೊಟ್ಟ ಏಸು ಸ್ವಾಮಿಗೆ ನಮ್ಮ ಉಡುಗೊರೆ ಏನು, ನಮ್ಮ ಪ್ರತಿಕ್ರಿಯೆ ಏನು, ಅದನ್ನೇ ಏಸು ಸ್ವಾಮಿ ಹೇಳಿದ್ದು, ಒಬ್ಬರನೊಬ್ಬರು ಪ್ರೀತಿಸಿರಿ ಮತ್ತು ನಮ್ಮ ಸಮಾಜದಲ್ಲಿ ಕುಟುಂಬದಲ್ಲಿ ನಾವು ಒಂದೇ ತಾಯಿ ಮಕ್ಕಳಂತೆ ಯೇಸು ಕ್ರಿಸ್ತರ ಆದರ್ಶಗಳನ್ನು ಪಾಲಿಸಿ ಬದುಕಬೇಕು ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಮನವಿ ಮಾಡಿದರು.

ದೇವಾಲಯದ ಪಾಲನಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಮತ್ತು ಮೇರಿ ಮಾತೆ ಯುವಕ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ