ದೇವರ ಸೇವೆಯಿಂದ ಪುಣ್ಯ ಫಲಗಳು ಲಭ್ಯ: ಕೆ.ಎನ್.ರುದ್ರಪ್ಪಗೌಡ

KannadaprabhaNewsNetwork |  
Published : Apr 21, 2025, 12:48 AM IST
೨೦ಬಿಹೆಚ್‌ಆರ್ ೧: ಬಾಳೆಹೊನ್ನೂರು ಸಮೀಪದ ಮುದುಗುಣಿ ಶಿವಗಂಗಾ ಮಠದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ಮುದುಗುಣಿ ಬಸ್ ನಿಲ್ದಾಣದ ಸಮೀಪದಲ್ಲಿ ರೂ.೬ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.  | Kannada Prabha

ಸಾರಾಂಶ

ಬಾಳೆಹೊನ್ನೂರು, ಸಮೀಪದ ಮುದುಗುಣಿ ಶಿವಗಂಗಾ ಮಠದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ಮುದುಗುಣಿ ಬಸ್ ನಿಲ್ದಾಣದ ಸಮೀಪದಲ್ಲಿ ₹6 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

- ಸಿದ್ದೇಶ್ವರ ಸ್ವಾಮಿ ಮಹಾದ್ವಾರದ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಮೀಪದ ಮುದುಗುಣಿ ಶಿವಗಂಗಾ ಮಠದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ಮುದುಗುಣಿ ಬಸ್ ನಿಲ್ದಾಣದ ಸಮೀಪದಲ್ಲಿ ₹6 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.ಮಹಾದ್ವಾರದ ದಾನಿ, ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪಗೌಡ (ಮರಿಗೌಡ) ದ್ವಾರ ಉದ್ಘಾಟಿಸಿ ಮಾತನಾಡಿ, ಸಿದ್ದೇಶ್ವರ ಸ್ವಾಮಿ ದೇವಾಲಯದ ಭಕ್ತರು, ಗ್ರಾಮಸ್ಥರ ಆಶಯದಂತೆ ನಮ್ಮ ಕುಟುಂಬದಿಂದ ನೂತನ ಮಹಾದ್ವಾರ ನಿರ್ಮಿಸಿಕೊಡಲಾಗಿದ್ದು, ಇದು ನಮ್ಮ ಕುಟುಂಬಕ್ಕೆ ಅತ್ಯಂತ ಆತ್ಮತೃಪ್ತಿ ತಂದಿದೆ ಎಂದು ಹೇಳಿದರು.

ದೇವರ ಸೇವೆ ಮಾಡುವುದರಿಂದ ಜೀವನದಲ್ಲಿ ಹಲವು ಪುಣ್ಯ ಫಲಗಳು ದೊರೆಯಲಿದ್ದು, ನಮ್ಮ ಪಾಪ ಕರ್ಮಗಳು ಕಳೆದು ಜೀವನದಲ್ಲಿ ಒಳ್ಳೆಯ ದಿನಗಳು ಲಭ್ಯವಾಗಲಿದೆ. ಮುದುಗುಣಿ ಸಿದ್ದೇಶ್ವರ ಸ್ವಾಮಿ ದೇವಸ್ಥಾನ ಅತ್ಯಂತ ಪುರಾತನ ದೇವಾಲಯ ವಾಗಿದ್ದು, ಸಿದ್ದೇಶ್ವರಸ್ವಾಮಿ ಪವಾಡಗಳು ಹಲವಾರು ಇವೆ. ನಂಬಿದ ಭಕ್ತರಿಗೆ ಸಿದ್ದೇಶ್ವರಸ್ವಾಮಿ ಆಶಾಕಿರಣ ವಾಗಿದ್ದಾರೆ ಎಂದರು.

ದೇವಾಲಯ ಸಮಿತಿ ಕಾರ್ಯದರ್ಶಿ ಸಿ.ವಿ.ಸುನೀಲ್ ಮಾತನಾಡಿ, ಕೊಳಲೆಯ ಶಾರದಾ ರುದ್ರಪ್ಪಗೌಡ ಕುಟುಂಬ ದವರು ಸಿದ್ದೇಶ್ವರ ಸ್ವಾಮಿ ದೇವಾಲಯದ ಭಕ್ತರ ಆಶಯದಂತೆ ₹೬ ಲಕ್ಷ ವೆಚ್ಚದಲ್ಲಿ ಅತ್ಯಂತ ಸುಂದರ, ವಿಶೇಷ ಚಿತ್ತಾರವುಳ್ಳ ಸ್ವಾಗತ ಮಹಾದ್ವಾರ ನಿರ್ಮಿಸಿಕೊಟ್ಟಿದ್ದಾರೆ ಎಂದು ನುಡಿದರು.ದೇವಾಲಯದ ಮೇಲಿನ ಅವರ ಕುಟುಂಬದ ಕಾಳಜಿಯಿಂದ ಅತ್ಯಂತ ದೊಡ್ಡ ಮೊತ್ತದಲ್ಲಿ ಮಹಾದ್ವಾರ ನಿರ್ಮಿಸಿಕೊಟ್ಟಿದ್ದು, ಅದರ ಸಮರ್ಪಕ ನಿರ್ವಹಣೆ ಗ್ರಾಮದ ಭಕ್ತರದ್ದಾಗಿದೆ. ದೇವಾಲಯದಲ್ಲಿ ಭಾನುವಾರದಿಂದ ವಾರ್ಷಿಕ ಸುಗ್ಗಿಹಬ್ಬದ ಕಾರ್ಯಕ್ರಮಗಳು ಚಾಲನೆಗೊಂಡಿದ್ದು, ಸೋಮವಾರ ರಾತ್ರಿ 1 ಗಂಟೆಗೆ ಹಲಗೆ ವಾದ್ಯದ ಸ್ಪರ್ಧೆ, ಮಂಗಳವಾರ ಶ್ರೀಸ್ವಾಮಿಯ ಕೆಂಡಾರ್ಚನೆ ಕಾರ್ಯಕ್ರಮ ಅತ್ಯಂತ ಶ್ರದ್ಧಾ, ಭಕ್ತಿಯಿಂದ ನಡೆಯಲಿದೆ ಎಂದು ತಿಳಿಸಿದರು.ಗುತ್ತಿಗೆದಾರ ಸುಧಾಕರ್, ರಂಭಾಪುರಿ ಪೀಠದ ಅರ್ಚಕರಾದ ಬಸವರಾಜ ಶಾಸ್ತ್ರಿ ಶಿವಪ್ರಕಾಶ್ ಶಾಸ್ತ್ರಿ , ಗಿರೀಶ್ ಮಹಾ ದೇವಯ್ಯ, ಗ್ರಾಮದ ಪ್ರಮುಖರಾದ ಕೆ.ಆರ್.ದೀಪಕ್ ಮರಿಗೌಡ, ಕೆ.ಎನ್.ರಾಮಸ್ವಾಮಿ, ಎಂ.ಡಿ.ಶಿವರಾಮ್, ಎಂ.ಆರ್. ಜಗದೀಶ್, ಸದಾಶಿವ ಆಚಾರ್ಯ, ಟಿ.ಎಂ.ಉಮೇಶ್ ಕಲ್ಮಕ್ಕಿ, ಎಂ.ಎಸ್.ಅರುಣೇಶ್, ಕೆ.ಟಿ.ಗೋವಿಂದೇಗೌಡ, ಟಿ.ಎಂ. ನಾಗೇಶ್, ಪ್ರಕಾಶ್ ಮುದುಗುಣಿ, ಅವಿನಾಶ್, ಚರಣ್, ಎ.ಆರ್.ಸುರೇಂದ್ರ, ಇಬ್ರಾಹಿಂ ಶಾಫಿ, ಸುಧೀರ್ ಮತ್ತಿತರರು ಹಾಜರಿದ್ದರು.೨೦ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಮುದುಗುಣಿ ಬಸ್ ನಿಲ್ದಾಣದ ಸಮೀಪದಲ್ಲಿ₹೬ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಸಿದ್ದೇಶ್ವರ ಸ್ವಾಮಿ ಮಹಾದ್ವಾರವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಕೆ.ಎನ್.ರುದ್ರಪ್ಪಗೌಡ, ಸಿ.ವಿ.ಸುನೀಲ್, ಸುಧಾಕರ್, ಕೆ.ಎನ್.ರಾಮಸ್ವಾಮಿ, ಎಂ.ಡಿ.ಶಿವರಾಮ್, ಗಿರೀಶ್ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ