ಪೌಷ್ಠಿಕ ಆಹಾರ ಸೇವನೆಯಿಂದ ಸದೃಢ ಆರೋಗ್ಯ

KannadaprabhaNewsNetwork |  
Published : Oct 30, 2024, 12:37 AM IST
ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಜನರ ರಕ್ತದ ಗುಂಪು ತಪಾಸಣೆ ನಡೆಸಿ ಚೀಟಿ ವಿತರಿಸಲಾಯಿತು. | Kannada Prabha

ಸಾರಾಂಶ

ಹಸಿರು ಕಾಯಿಪಲ್ಲೆಗಳು ಮೊಳಕೆ ಕಾಳುಗಳು, ತಪ್ಪಲು ಪಲ್ಲೆಗಳು ಆರೋಗ್ಯಕ್ಕೆ ಪೂರಕವಾಗಿವೆ

ಗದಗ: ಪೌಷ್ಠಿಕ ಆಹಾರ ಸೇವನೆಯಿಂದ ಸದೃಢ ಆರೋಗ್ಯ ಪಡೆಯಬಹುದು. ಮಕ್ಕಳು ಹಿತಮಿತ ಆಹಾರ ಸೇವನೆ, ಸರಿಯಾದ ಆರೋಗ್ಯ ಕ್ರಮ ಅನುಸರಿಸಬೇಕೆಂದು ಡಾ. ರಾಮಚಂದ್ರ ಹಂಸನೂರ ಹೇಳಿದರು.

ನಗರದ ಸಿ.ಎಸ್. ಪಾಟೀಲ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಭಾವಸಾರ ವಿಜನ್‌ದಿಂದ ಜರುಗಿದ ಆರೋಗ್ಯ ಜಾಗೃತಿ ಹಾಗೂ ವಿದ್ಯಾರ್ಥಿಗಳಿಗೆ ರಕ್ತದ ಗುಂಪು ಗುರುತಿಸುವಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುರುಕಲು ತಿಂಡಿಗಳು, ತಂಪು ಪಾನೀಯ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ. ಇದರ ಬದಲಾಗಿ ಮಕ್ಕಳು ಸತ್ವಯುತವಾದ ಆಹಾರ ಸೇವನೆ,ನಿರ್ಧಿಷ್ಟ ವ್ಯಾಯಾಮ ರೂಢಿಸಿಕೊಳ್ಳಬೇಕು ಎಂದರು.

ರಕ್ತ ತಪಾಸಿಗ ಡಾ.ದತ್ತಾತ್ರೇಯ ವೈಕುಂಠೆ ಮಾತನಾಡಿ, ಹಸಿರು ಕಾಯಿಪಲ್ಲೆಗಳು ಮೊಳಕೆ ಕಾಳುಗಳು, ತಪ್ಪಲು ಪಲ್ಲೆಗಳು ಆರೋಗ್ಯಕ್ಕೆ ಪೂರಕವಾಗಿವೆ. ಊಟ ಮಾಡುವಾಗ ಮಕ್ಕಳು ತರಕಾರಿ ಸೇವಿಸುವದನ್ನು ರೂಢಿಸಿಕೊಳ್ಳಬೇಕು ಎಂದರು.

ಈ ವೇಳೆ ಭಾವಸಾರ ವಿಜನ್‌ದ ಆರ್.ಎಸ್. ತ್ರಿಮಲ್ಲೇ, ಜಯಶ್ರೀ ತ್ರಿಮಲ್ಲೆ, ಕೆ.ಎಸ್.ಬೇಲೇರಿ, ಕೆ.ಬಿ.ಬಾಗೇವಾಡಿ, ವಿ.ಎಚ್. ಪಾಟೀಲ, ಉಮಾ ದಾನೇಶ್ವರಮಠ, ಎಂ.ಎಸ್. ಪಾಟೀಲ, ವಿಜಯಲಕ್ಷ್ಮೀ ಪೂಜಾರ, ವಿ.ವಿ. ಪಾಟೀಲ, ನೀಲಾ ಪಲ್ಲೇದ, ಶಾರದಾ ವಡ್ಡಿನ, ಗೀತಾ ದಾನೇಶ್ವರಮಠ, ಬಸಮ್ಮ ಅರಳಿಕಟ್ಟಿ, ಸಾವಿತ್ರಿ ಕಾತರಕಿ, ಕಸ್ತೂರಿ ಕಟ್ಟಿಮನಿ ಲಕ್ಷ್ಮವ್ವ ನಾಯಕ ಇದ್ದರು. ಎಚ್.ಪಿ. ಹಿರೇಮಠ ಸ್ವಾಗತಿಸಿದರು. ಎಸ್.ಎಂ. ತಳವಾರ ನಿರೂಪಿಸಿದರು. ಜಿ.ಸಿ. ಪಾಟೀಲ ವಂದಿಸಿದರು. ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ