ನಡಿಗೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು: ರಮೇಶ ಸ್ವಾಮಿಗಳು

KannadaprabhaNewsNetwork |  
Published : Dec 04, 2024, 12:31 AM IST
ಪೊಟೋ ಪೈಲ್ ನೇಮ್ ೩ಎಸ್‌ಜಿವಿ೩ ತಾಲೂಕಿನ ಶಾಡಂಬಿ ಗ್ರಾಮದಲ್ಲಿ ಟೀಮ್ ಪ್ಯಾಬುಲಸ್ ಫೈವ್ ಪೌಂಡೇಶನ್ ಶಾಡಂಬಿ ಮತ್ತು ಜಯಪ್ರಿಯ ಮೆಡಿಕಲ್ ಪೌಂಡೇಶನ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಸಾನಿಧ್ಯ ವನ್ನು ಲಕ್ಷ್ಮೇಶ್ವರ ಜ್ಞಾನಾಶ್ರಮದ ರಮೇಶ ಮಹಾಸ್ವಾಮಿಗಳು ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು೩ಎಸ್‌ಜಿವಿ೩-೧ತಾಲೂಕಿನ ಶಾಡಂಬಿ ಗ್ರಾಮದಲ್ಲಿ ಟೀಮ್ ಪ್ಯಾಬುಲಸ್ ಫೈವ್ ಪೌಂಡೇಶನ್ ಶಾಡಂಬಿ ಮತ್ತು ಜಯಪ್ರಿಯ ಮೆಡಿಕಲ್ ಪೌಂಡೇಶನ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಪಾಲ್ಗೋಂಡ ಸಾರ್ವಜನಿಕರು | Kannada Prabha

ಸಾರಾಂಶ

ಹೈಟೆಕ್ ವಾಹನಗಳ ಬಳಕೆಯಿಂದಲೇ ನಾವು ಹೈಟೆಕ್ ರೋಗಾದಿಗಳಿಗೆ ಒಳಗಾಗುತ್ತಿದ್ದೇವೆ. ನಡೆದು ಹೋಗುವಷ್ಟು ದಾರಿಗೆ ವಾಹನಗಳನ್ನು ಬಳಕೆ ಮಾಡುತ್ತಿದ್ದೇವೆ. ಆ ಮನಸ್ಥಿತಿಯಿಂದ ಹೊರಬಂದು ಕಾಲ್ನಡಿಗೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಲಕ್ಷ್ಮೇಶ್ವರ ಜ್ಞಾನಾಶ್ರಮದ ರಮೇಶ ಸ್ವಾಮಿಗಳು ಹೇಳಿದರು.

ಶಿಗ್ಗಾಂವಿ: ಹೈಟೆಕ್ ವಾಹನಗಳ ಬಳಕೆಯಿಂದಲೇ ನಾವು ಹೈಟೆಕ್ ರೋಗಾದಿಗಳಿಗೆ ಒಳಗಾಗುತ್ತಿದ್ದೇವೆ. ನಡೆದು ಹೋಗುವಷ್ಟು ದಾರಿಗೆ ವಾಹನಗಳನ್ನು ಬಳಕೆ ಮಾಡುತ್ತಿದ್ದೇವೆ. ಆ ಮನಸ್ಥಿತಿಯಿಂದ ಹೊರಬಂದು ಕಾಲ್ನಡಿಗೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಲಕ್ಷ್ಮೇಶ್ವರ ಜ್ಞಾನಾಶ್ರಮದ ರಮೇಶ ಸ್ವಾಮಿಗಳು ಹೇಳಿದರು.ತಾಲೂಕಿನ ಶಾಡಂಬಿ ಗ್ರಾಮದಲ್ಲಿ ಟೀಮ್ ಪ್ಯಾಬುಲಸ್ ಫೈವ್ ಫೌಂಡೇಶನ್ ಶಾಡಂಬಿ ಮತ್ತು ಜಯಪ್ರಿಯ ಮೆಡಿಕಲ್ ಫೌಂಡೇಶನ್ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಮಾಡಿದರು.ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಹಾಗೂ ಟೀಮ್ ಪ್ಯಾಬುಲಸ್ ಫೈವ್ ಫೌಂಡೇಶನ್ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯವಾಗಿದೆ. ಈ ರೀತಿಯ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಯುವಕರ ಕಾರ್ಯ ಮಹತ್ವದ್ದಾಗಿದೆ ಎಂದರು.ಗ್ರಾಮದ ಮುಖಂಡರಾದ ಪರಶುರಾಮ ಕಾಳಿ ಪ್ರಾಸ್ತಾವಿಕವಾಗಿ ಮಾತಾನಾಡಿ, ಗ್ರಾಮದ ಯುವಕರ ಟೀಮ್ ಪ್ಯಾಬುಲಸ್ ಫೈವ್ ಫೌಂಡೇಶನ್ ಈ ಭಾಗದಲ್ಲಿ ಹಲವಾರು ಜನಹಿತ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಅದರಂತೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಮನೆ ಬಾಗಿಲಿಗೆ ತಲುಪಿಸಲು ವಿನೂತನ ಪ್ರಯತ್ನ ಮಾಡಿರುವುದು ಗ್ರಾಮೀಣ ಜನರಿಗೆ ಬಹಳ ಅನುಕೂಲವಾಗಿದೆ. ಇದು ಅತ್ಯಂತ ಖುಷಿಯ ವಿಚಾರವಾಗಿದೆ ಎಂದರು.ಮಾಜಿ ತಾಲೂಕು ಪಂಚಾಯತ್ ಸದಸ್ಯ ಈಶ್ವರಗೌಡ ಪಾಟೀಲ, ಕುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಡಿ.ಆರ್. ಬೊಮ್ಮನಳ್ಳಿ, ಲಕ್ಷ್ಮಣ ಬೆಂಡಲಗಟ್ಟಿ, ಸುಮಂತಗೌಡ ಪಾಟೀಲ ಮಾತನಾಡಿದರು.ಹುಬ್ಬಳ್ಳಿಯ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ. ವೆಂಕಟರಾಮ ಕಟ್ಟಿ, ಕಿವಿ, ಮೂಗು, ಗಂಟಲು ತಜ್ಞ ಡಾ.ಪ್ರಿಯಾ ಕಟ್ಟಿ, ಮಾಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕವಿತಾ ಸೊಲಬಕ್ಕನವರ, ಕುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಆನಂದ ಲಮಾಣಿ, ಟೀಮ್ ಪ್ಯಾಬುಲಸ್ ಫೈವ್ ಫೌಂಡೇಶನ್ ಅಧ್ಯಕ್ಷ ದ್ಯಾಮಣ್ಣ ಕಾಳೆ, ಸದಸ್ಯರಾದ ಚನ್ನಪ್ಪ ಕಿವಡನವರ, ವಿನೋದ ಓಲೇಕಾರ, ಮಹಾತೇಶ ಓಲೇಕಾರ, ಕೋಟೆಪ್ಪ ಸಂಜೀವಣ್ಣವರ, ರುದ್ರಪ್ಪ ಕಿವಡನವರ ಉಪಸ್ಥಿತರಿದ್ದರು. ಮಂಜುನಾಥ ಕಾಳೆ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ