ಸಾಮಾಜಿಕ ಪರಿವರ್ತನೆಗೆ ಉತ್ತಮ ನಾಯಕತ್ವ ಮುಖ್ಯ: ರೇವಣ್ಣ ನಾಯ್ಕ್

KannadaprabhaNewsNetwork |  
Published : Aug 21, 2024, 12:35 AM IST
20ಎಚ್‍ಆರ್‍ಆರ್1:ಹರಿಹರದ ಗಿರಿಯಮ್ಮ ಕಾಲೇಜು ಸಭಾಂಗಣದಲ್ಲಿ ಮಂಗಳವಾರ  ನಡೆದ ದಿ.ದೇವರಾಜ್ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರವಮನ್ನು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಬಿ.ಬಿ. ರೇವಣ್ಣನಾಯ್ಕ್, ಎಸ್.ಪಿ.ಸುಮಲತಾ, ಸುಬ್ರಮಣ್ಯ ಶೆಟ್ಟಿ ಹಾಗೂ ಇತರರು ಇದ್ದರು. | Kannada Prabha

ಸಾರಾಂಶ

ಸಮಾಜದಲ್ಲಿ ಪರಿವರ್ತನೆ ಕಾಣಬೇಕಾದರೆ ಉತ್ತಮ ನಾಯಕತ್ವ ಎನ್ನುವುದು ಬಹಳ ಮುಖ್ಯ. ಅದನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ತನ್ನ ಜೀವಿತಾವಧಿಯಲ್ಲಿ ಸಾಬೀತುಪಡಿಸಿದರು ಎಂದು ಮುಖ್ಯಶಿಕ್ಷಕ ಬಿ.ಬಿ. ರೇವಣ್ಣ ನಾಯ್ಕ್ ಅಭಿಪ್ರಾಯಪಟ್ಟರು.

- ಗಿರಿಯಮ್ಮ ಕಾಲೇಜು ಸಭಾಂಗಣದಲ್ಲಿ ಮಾಜಿ ಸಿಎಂ ದೇವರಾಜ ಅರಸು ಜನ್ಮದಿನಾಚರಣೆ - - - ಕನ್ನಡಪ್ರಭ ವಾರ್ತೆ ಹರಿಹರ

ಸಮಾಜದಲ್ಲಿ ಪರಿವರ್ತನೆ ಕಾಣಬೇಕಾದರೆ ಉತ್ತಮ ನಾಯಕತ್ವ ಎನ್ನುವುದು ಬಹಳ ಮುಖ್ಯ. ಅದನ್ನು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ತನ್ನ ಜೀವಿತಾವಧಿಯಲ್ಲಿ ಸಾಬೀತುಪಡಿಸಿದರು ಎಂದು ಮುಖ್ಯಶಿಕ್ಷಕ ಬಿ.ಬಿ. ರೇವಣ್ಣ ನಾಯ್ಕ್ ಅಭಿಪ್ರಾಯಪಟ್ಟರು.

ನಗರದ ಗಿರಿಯಮ್ಮ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು 109ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಅರಸು ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹಾಗೂ ದ್ವನಿಯಿಲ್ಲದವರ ದ್ವನಿಯಾಗಿ ಹಲವಾರು ಕ್ರಾಂತಿಕಾರಕ ನಿರ್ಧಾರಗಳನ್ನು ಮಾಡುವ ಮೂಲಕ ಸಮಾಜದ ನಿರ್ಮಾಣಕ್ಕೆ ಹೆಚ್ಚು ಒತ್ತನ್ನು ನೀಡಿದರು. ಇದರ ಪರಿಣಾಮ ಇಂದಿಗೂ ಸಹ ಹಲವಾರು ಕುಟುಂಬಗಳು ನೆಮ್ಮದಿ ಜೀವನವನ್ನು ಸಾಗಿಸುತ್ತಿದ್ದಾರೆ. ಪ್ರಗತಿಪರ ಸಾಧನೆಗಳ ಸರದಾರ, ಅಭಿವೃದ್ಧಿಯ ಹೊಸ ಶಖೆಗೆ ನಾಂದಿ ಹಾಡಿದ ಮತ್ತು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿ ಮಂಡಲವನ್ನು ರಚಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಮಾತನಾಡಿ, ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಹರಿಕಾರ ಮತ್ತು ಬಡವರ ಧ್ವನಿಯಾಗಿದ್ದರು. ಸಮಾಜದ ಕೆಳವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ವಿಶಿಷ್ಟ ಮುಖ್ಯಮಂತ್ರಿ ಆಗಿದ್ದರು ಎಂದರು.

ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆ ಗೌರವಾಧ್ಯಕ್ಷ ಎಚ್.ಕೆ. ಕೊಟ್ಟಪ್ಪ ಮಾತನಾಡಿದರು. ವಸತಿ ನಿಲಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ. ಸುಮಲತಾ, ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ಅಸ್ಮಾ ಬಾನು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಮಾಜಿ ಅಧ್ಯಕ್ಷ ಎ.ಕೆ.ಭೂಮೇಶ್, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -20ಎಚ್‍ಆರ್‍ಆರ್1:

ಹರಿಹರದ ಗಿರಿಯಮ್ಮ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಜಿ ಸಿಎಂ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮವನ್ನು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಉದ್ಘಾಟಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ