ಸಂಸದರಿಂದ ಹೂ ಬೆಳೆಗಾರರಿಗೆ ಸಂತಸದ ಸುದ್ದಿ!

KannadaprabhaNewsNetwork |  
Published : Jun 03, 2026, 02:00 AM IST
ಸಿಕೆಬಿ-5ರಾಷ್ಟ್ರೀಯ ಪುಷ್ಪೋದ್ಯಮ ಮಂಡಳಿ ವಿಧೇಯಕ, 2024 (ಖಾಸಗಿ ಸದಸ್ಯರ ವಿಧೇಯಕ)ವನ್ನು ಲೋಕಸಭೆಯಲ್ಲಿ ಪರಿಗಣಿಸಲು ಭಾರತದ ರಾಷ್ಟ್ರಪತಿಗಳು ಸಂವಿಧಾನದ 117(3)ನೇ ವಿಧಿಯ ಅಡಿಯಲ್ಲಿ ಶಿಫಾರಸು ಮಾಡಿರುವುದನ್ನು ಸಂಸದ ಡಾ.ಕೆ.ಸುಧಾಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದು | Kannada Prabha

ಸಾರಾಂಶ

ಪುಷ್ಪ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ರೈತರಿಗೆ ರಾಷ್ಟ್ರ ಮಟ್ಟದಲ್ಲಿ ಒಂದು ಸಾಂಸ್ಥಿಕ ಬೆಂಬಲ ಒದಗಿಸುವ, ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವ, ಮೌಲ್ಯವರ್ಧಿತ ಉತ್ಪನ್ನಗಳಿಗೆ ಅವಕಾಶ ಕಲ್ಪಿಸುವ ಹಾಗೂ ಮಾರುಕಟ್ಟೆ ವಿಸ್ತರಿಸಿ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ನಾನು ಡಿಸೆಂಬರ್ 2025ರಲ್ಲಿ ಈ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದೆ.

ರಾಷ್ಟ್ರೀಯ ಪುಷ್ಪೋದ್ಯಮ ಮಂಡಳಿ ವಿಧೇಯಕ ಮಂಡಿಸಲು ರಾಷ್ಟ್ರಪತಿಗಳ ಶಿಫಾರಸು

(ಸುಧಾಕರ್‌ ಮಗ್‌ಶಾಟ್‌)

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದ ಡಿಸೆಂಬರ್‌ನಲ್ಲಿ ನಡೆದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನಾನು ಮಂಡಿಸಿದ್ದ ರಾಷ್ಟ್ರೀಯ ಪುಷ್ಪೋದ್ಯಮ ಮಂಡಳಿ ವಿಧೇಯಕ, 2024 (ಖಾಸಗಿ ಸದಸ್ಯರ ವಿಧೇಯಕ)ವನ್ನು ಲೋಕಸಭೆಯಲ್ಲಿ ಪರಿಗಣಿಸಲು ಭಾರತದ ರಾಷ್ಟ್ರಪತಿಗಳು ಸಂವಿಧಾನದ 117(3)ನೇ ವಿಧಿಯ ಅಡಿಯಲ್ಲಿ ಶಿಫಾರಸು ಮಾಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಪುಷ್ಪ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ರೈತರಿಗೆ ರಾಷ್ಟ್ರ ಮಟ್ಟದಲ್ಲಿ ಒಂದು ಸಾಂಸ್ಥಿಕ ಬೆಂಬಲ ಒದಗಿಸುವ, ಸಂಶೋಧನೆ ಮತ್ತು ನಾವೀನ್ಯತೆಗೆ ಉತ್ತೇಜನ ನೀಡುವ, ಮೌಲ್ಯವರ್ಧಿತ ಉತ್ಪನ್ನಗಳಿಗೆ ಅವಕಾಶ ಕಲ್ಪಿಸುವ ಹಾಗೂ ಮಾರುಕಟ್ಟೆ ವಿಸ್ತರಿಸಿ ರಫ್ತು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ನಾನು ಡಿಸೆಂಬರ್ 2025ರಲ್ಲಿ ಈ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದ್ದೆ.

ನಮ್ಮ ಚಿಕ್ಕಬಳ್ಳಾಪುರ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ರೈತರು ತಮ್ಮ ಜೀವನೋಪಾಯಕ್ಕಾಗಿ ಪುಷ್ಪೋದ್ಯಮವನ್ನು ಅವಲಂಬಿಸಿದ್ದಾರೆ. ನಮ್ಮ ರೈತರ ಆದಾಯ ಹೆಚ್ಚಿಸಲು ಸಾಕಷ್ಟು ಅವಕಾಶಗಳಿರುವ ಈ ಪುಷ್ಪೋದ್ಯಮ ಕ್ಷೇತ್ರದ ಸವಾಲುಗಳು ಪರಿಹರಿಸಿ ಮತ್ತು ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ರಾಷ್ಟ್ರೀಯ ಮಟ್ಟದ ಒಂದು ಮಂಡಳಿಯ ಕೊರತೆ ಬಹುಕಾಲದಿಂದ ಇದೆ.

ಈ ವಿಧೇಯಕವನ್ನು ಲೋಕಸಭೆಯಲ್ಲಿ ಪರಿಗಣಿಸಲು ದೊರೆತಿರುವ ಈ ಶಿಫಾರಸ್ಸು, ರಾಷ್ಟ್ರೀಯ ಕೃಷಿ ಮಂಡಳಿ ಸ್ಥಾಪಿಸುವ ನಮ್ಮ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ಭಾರತದ ಪುಷ್ಪೋದ್ಯಮ ಕ್ಷೇತ್ರದ ಮಹತ್ವ ಹಾಗೂ ಅದನ್ನು ಅವಲಂಬಿಸಿರುವ ರೈತರ ಕೊಡುಗೆಗೆ ಕೇಂದ್ರ ಸರ್ಕಾರದಿಂದ ದೊರೆತಿರುವ ಮಾನ್ಯತೆಯ ಪ್ರತೀಕವಾಗಿದೆ.

ರಾಷ್ಟ್ರೀಯ ಪುಷ್ಪ ಮಂಡಳಿ ಸ್ಥಾಪಿಸುವ ನನ್ನ ದೃಷ್ಟಿಕೋನಕ್ಕೆ ಬೆಂಬಲ ನೀಡಿದ ಗೌರವಾನ್ವಿತ ರಾಷ್ಟ್ರಪತಿಗಳಿಗೆ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರಿಗೆ ಮತ್ತು ಕೇಂದ್ರ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯು ಈ ವಿಧೇಯಕವನ್ನು ಪರಿಗಣಿಸಿ, ಸುದೀರ್ಘವಾಗಿ ಚರ್ಚಿಸಿ, ದೇಶದ ಲಕ್ಷಾಂತರ ಹೂವು ಬೆಳೆಗಾರರ ಹಿತದೃಷ್ಟಿಯಿಂದ ಈ ಮಸೂದೆಯನ್ನು ಅಂಗೀಕರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸಿಕೆಬಿ-5 ಸಂಸದ ಡಾ.ಕೆ.ಸುಧಾಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಲವಾದರೂ ಹಾವೇರಿ ಜಿಲ್ಲೆಗೆ ಸಿಗುತ್ತಾ ಮಂತ್ರಿ ಸ್ಥಾನ?
ಬಳ್ಳಾರಿಯಲ್ಲಿ ಗುಡುಗು-ಸಿಡಿಲು ಸಮೇತ ಮಳೆನೂರಕ್ಕೂ ಅಧಿಕ ಮರಗಳು ಧರೆಗೆ