ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಉತ್ತರಿ ಮಳೆ ಉತ್ತಮವಾಗಿ ಸುರಿದಿರುವುದರಿಂದ ರೈತರು ಹಿಂಗಾರು ಬಿತ್ತನೆ ಕಾರ್ಯಕ್ಕೆ ಕೈ ಗೊಂಡಿದ್ದಾರೆ. ಮುಂಗಾರು ಸಂಪೂರ್ಣ ಮಳೆ ಇಲ್ಲದೆ ಬರಗಾಲ ಸೃಷ್ಟಿಯಾಗಿ ತೀವ್ರ ಕಂಗಲಾಗಿದ್ದ ರೈತ, ಕಳೆದ ತಿಂಗಳು ಉತ್ತಮ ಮಳೆ ಸುರಿದಿರುವುದರಿಂದ ಹಿಂಗಾರು ಮಳೆಯಾಗುವ ನಿರೀಕ್ಷೆಯಲ್ಲಿದ್ದು,
ಕನ್ನಡಪ್ರಭ ವಾರ್ತೆ ಕವಿತಾಳ
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ಉತ್ತರಿ ಮಳೆ ಉತ್ತಮವಾಗಿ ಸುರಿದಿರುವುದರಿಂದ ರೈತರು ಹಿಂಗಾರು ಬಿತ್ತನೆ ಕಾರ್ಯಕ್ಕೆ ಕೈ ಗೊಂಡಿದ್ದಾರೆ. ಮುಂಗಾರು ಸಂಪೂರ್ಣ ಮಳೆ ಇಲ್ಲದೆ ಬರಗಾಲ ಸೃಷ್ಟಿಯಾಗಿ ತೀವ್ರ ಕಂಗಲಾಗಿದ್ದ ರೈತ, ಕಳೆದ ತಿಂಗಳು ಉತ್ತಮ ಮಳೆ ಸುರಿದಿರುವುದರಿಂದ ಹಿಂಗಾರು ಮಳೆಯಾಗುವ ನಿರೀಕ್ಷೆಯಲ್ಲಿದ್ದು, ರೈತರು ಜೋಳ, ಕಡಲೆ, ಸೂರ್ಯಕಾಂತಿ, ಕುಸುಬೆ ಬಿಜಾ ಸೇರಿದಂತೆ ಇನ್ನಿತರ ಬೆಳೆ ಬಿತ್ತಲು ಕಾರ್ಯ ಚಟುವಟಿಕೆ ಕೈಗೊಂಡಿದ್ದಾರೆ. ಕೆಲ ರೈತರು ಮಳೆ ಬರುವ ನಿರೀಕ್ಷೆಯೊಂದಿಗೆ ಹಿಂಗಾರು ಬಿತ್ತನೆಗೆ ಹೊಲ ಹದಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲ ರೈತರು ಬಿತ್ತನೆ ಪೂರ್ವ ಕೆಲಸವನ್ನು ಮಾಡುತ್ತಿದ್ದಾರೆ.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದು, ತೀವ್ರ ಬರಗಾಲ ಸೃಷ್ಟಿಯಾಗಿರುವುದರಿಂದ ರೈತರು ತೆಲೆ ಮೇಲೆ ಕೈ ಇಟ್ಟುಕೊಂಡು ಕುಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಎಲ್ಲವನ್ನೂ ಕಂಡೂ ಕಾಣದಂತೆ ಕುಳಿತು ಪ್ರತಿ ರೈತನಿಗೆ ಕೇವಲ ₹2500 ಸಾವಿರ ಬರ ಘೋಷಣೆ ಮಾಡಿದ್ದು ಮೂಗಿಗೆ ತುಪ್ಪ ಸವರಿದಂತೆ ಮಾಡಿ ರೈತರ ಬೆನ್ನಿಗೆ ಬರೆ ಎಳೆದಂತಾಗಿದೆ.
ಜಮೀನಿನಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ₹2500 ಸಾವಿರ ಒಂದು ದಿನದ ಖರ್ಚಿಗೂ ಆಗುವುದಿಲ್ಲ. ರೈತರ ಹಿತದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ಕೂಡಲೇ ಪ್ರತಿ ರೈತನಿಗೆ ₹50 ಸಾವಿರ ಬರ ಘೋಷಣೆ ಮಾಡಬೇಕು ಎನ್ನುತ್ತಾರೆ ರೈತರಾದ ಮೌನೇಶ ಹಿರೇಕುರಬರು,
ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿರುವದರಿಂದ ತೊಗರಿ ಮತ್ತು ಹತ್ತಿ ಹಾಕಲಾಗಿತ್ತು ಸಂಪೂರ್ಣ ಬೆಳೆ ನಷ್ಟ ಆಗಿರುವುದರಿಂದ ಅದನ್ನು ತೆಗೆದು, ಹಿಂಗಾರು ಮಳೆ ಬರುವ ನಿರೀಕ್ಷೆಯೊಂದಿಗೆ ಜೋಳ ಮತ್ತು ಕಡಲೆ ಬಿತ್ತನೆ ಮಾಡುತ್ತಿದ್ದೇವೆ ಎಂದು ರೈತ ಆದಪ್ಪ ಹೀರಾ ಅಸಮಾಧಾನ ವ್ಯಕ್ಯಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.