ಕಡೂರು ಪಟ್ಟಣದ ಸಂಘದ ಕಚೇರಿ ಆವರಣದಲ್ಲಿ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ
ಪರಸ್ಪರ ಎಂಬ ತತ್ವದಡಿ ಸಹಕಾರ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದ್ದು ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘ ಆರಂಭವಾದ ಕಡಿಮೆ ಅವಧಿಯಲ್ಲೇ ಎ ಗ್ರೇಡ್ ಪಡೆಯುವ ಮೂಲಕ ಉತ್ತಮ ಲಾಭಗಳಿಸಿದೆ ಎಂದು ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಜಿ.ಜಯಣ್ಣ ತಿಳಿಸಿದರು.
ಕಡೂರು ಪಟ್ಟಣದ ಸಂಘದ ಕಚೇರಿ ಆವರಣದಲ್ಲಿ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇವಲ ಮೂರು ವರ್ಷ ಪೂರ್ಣಗೊಳಿಸಿರುವ ಸಹಕಾರ ಸಂಘ ನಿರ್ದೇಶಕರ ಸಲಹೆ, ಸದಸ್ಯರು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುತ್ತಿರುವುದರಿಂದ ಸಂಘ ಎ ಗ್ರೇಡ್ ಪಡೆದು ಉತ್ತಮ ಸಾಧನೆ ಮಾಡಿದೆ.870 ಸದಸ್ಯರನ್ನು ಈಗಾಗಲೇ ಹೊಂದಿದ್ದು ₹ 62 ಲಕ್ಷ ಠೇವಣಿ, ₹29 ಲಕ್ಷ ಷೇರು ಬಂಡವಾಳ ಹೊಂದಿದೆ. ಸುಮಾರು ₹ 74 ಲಕ್ಷ ಸಾಲವನ್ನು ನೀಡಿ ವಾರ್ಷಿಕವಾಗಿ ₹86 ಸಾವಿರ ಲಾಭ ಗಳಿಸಿದೆ. ಷೇರುದಾರರಿಗೆ ಮುಂದಿನ ವರ್ಷದಿಂದ ಡಿವಿಡೆಂಟ್ ನೀಡಲಾಗುವುದು ಎಂದರು.
ಶ್ರೀ ಬೀರಲಿಂಗೇಶ್ವರ ಸಹಕಾರ ಸಂಘದ ನಿರ್ದೇಶಕರಾದ ಟಿ.ಪರಮೇಶ್ವರಪ್ಪ, ನಲ್ಲೂರಿ ಮಂಜುನಾಥ್, ಹಾಲಪ್ಪ, ಕುಮಾರ್, ಯೋಗೀಶ್
ಕಡೂರು ಪಟ್ಟಣದ ಶ್ರೀ ಬೀರಲಿಂಗೇಶ್ವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾ ಸಭೆ ನಡೆಯಿತು. ಅಧ್ಯಕ್ಷ ಜಿ.ಜಯಣ್ಣ ಮತ್ತು ನಿರ್ದೇಶಕರುಗಳು ಪಾಲ್ಗೊಂಡಿದ್ದರು.