ಉತ್ತಮ ಮಳೆ,ಬೆಳೆಯಿಂದ ದಸರಾ ಸಂಭ್ರಮಕ್ಕೆ ಕಳೆ

KannadaprabhaNewsNetwork |  
Published : Oct 07, 2024, 01:37 AM IST
ಗದಗ ನಮ್ಮೂರು ದಸರಾ ಕಾರ್ಯಕ್ರಮದಲ್ಲಿ ಸಚಿವ ಡಾ. ಎಚ್.ಕೆ.ಪಾಟೀಲ ಭಾಗವಹಿಸಿದರು. | Kannada Prabha

ಸಾರಾಂಶ

ಪ್ರತಿ ವರ್ಷ ದಸರಾ ಹಬ್ಬವನ್ನು ಎಸ್.ಎಸ್.ಕೆ ಸಮಾಜ ಬಾಂಧವರು ಅತ್ಯಂತ ಅದ್ಧೂರಿಯಾಗಿ ಗದಗ ನಗರದಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ

ಗದಗ: ಪ್ರಸಕ್ತ ವರ್ಷ ನಾಡಿನಲ್ಲಿ ಉತ್ತಮ ಮಳೆಯಿಂದ ಎಲ್ಲ ಜಲಾಶಯಗಳು ತುಂಬಿದ್ದು, ಜನತೆ ಸುಖ, ಶಾಂತಿ ನೆಮ್ಮದಿಯೊಂದಿಗೆ ದಸರಾ ಹಬ್ಬವನ್ನು ಸಂತಸ ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.

ನಗರದ ಹಳೆ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತಮ ಮಳೆಯಿಂದ ದಾಗಿ ರೈತರ ಬೆಳೆ ಚೆನ್ನಾಗಿದೆ. ಈ ಬಾರಿ ಅತ್ಯಂತ ಕ್ಷೇಮವಾದ ವರ್ಷವಾಗಿರುವುದರಿಂದ ಎಲ್ಲರ ಬದುಕು ಹಸನಾಗಿದೆ. ಇದೇ ರೀತಿ ತಾಯಿ ಜಗದಂಬಾ ದೇವಿ ಎಲ್ಲರಿಗೂ ಸುಖ-ಶಾಂತಿ ನೀಡಲಿ ಎಂದರು.

ಯುವ ಮುಖಂಡ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಪ್ರತಿ ವರ್ಷ ದಸರಾ ಹಬ್ಬವನ್ನು ಎಸ್.ಎಸ್.ಕೆ ಸಮಾಜ ಬಾಂಧವರು ಅತ್ಯಂತ ಅದ್ಧೂರಿಯಾಗಿ ಗದಗ ನಗರದಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ. ದಸರಾ ಒಳ್ಳೆಯ ಕೆಲಸಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಜೀವನ ಪಾವನಗೊಳಿಸುಂತೆ ದೇವಿಯಲ್ಲಿ ಪ್ರಾರ್ಥನೆ ಮಾಡುವ ಹಬ್ಬವಾಗಿದೆ ಎಂದರು.

ಅಧ್ಯಕ್ಷತೆ ಎಸ್.ಎಸ್.ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಭಾಂಡಗೆ ವಹಿಸಿದ್ದರು. ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಪಂಚ ಕಮೀಟಿಯ ಉಪಾಧ್ಯಕ್ಷ ರಾಜು ಬದಿ, ರವಿ ಶಿದ್ಲಿಂಗ, ದಸರಾ ಕಮೀಟಿಯ ಚೇರಮನ್‌ ವಿಷ್ಣುಸಾ ಶಿದ್ಲಿಂಗ, ಸದಸ್ಯರಾದ ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಬಲರಾಮ ಬಸವಾ, ಮಾರುತಿ ಪವಾರ, ಶ್ರೀನಿವಾಸ ಭಾಂಡಗೆ, ಪರಶುರಾಮಸಾ ಬದಿ, ಗಣಪತಸಾ ಜಿತೂರಿ, ವಿನೋದ ಭಾಂಡಗೆ, ಪ್ರಕಾಶ ಬಾಕಳೆ, ಗಂಗಾಧರ ಹಬೀಬ, ಅನಿಲ್ ಖಟವಟೆ, ಅಂಬಾಸಾ ಖಟವಟೆ, ಪ್ರಭು ಬುರಬುರೆ, ವಿಶ್ವನಾಥ ಸೂಳಂಕಿ, ಸಾಗರ ಪವಾರ, ಸತೀಶ ದೇವಳೆ, ಶ್ರೀಕಾಂತ ಬಾಕಳೆ, ಮೋಹನಸಾ ಪವಾರ, ನಾಗರಾಜ ಖೋಡೆ, ಮಾಧು ಬದಿ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಎನ್.ಆರ್. ಖಟವಟೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಮೋತಿಲಾಲಸಾ ಪೂಜಾರಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ