ಪ್ರತ್ಯೇಕ ಶಿರಸಿ ಜಿಲ್ಲೆಗಾಗಿ ಜನರಿಂದ ಉತ್ತಮ ಸ್ಪಂದನೆ

KannadaprabhaNewsNetwork |  
Published : Oct 31, 2024, 12:57 AM IST
ಸಮಾಲೋಚನಾ ಸಭೆಯಲ್ಲಿ ರಮಾನಂದ ನಾಯ್ಕ ಹರಗಿ ಮಾತನಾಡಿದರು. | Kannada Prabha

ಸಾರಾಂಶ

ಶಿರಸಿ ಜಿಲ್ಲೆಯಾಗುವುದರಿಂದ ವೈದ್ಯಕೀಯ ವಿದ್ಯಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವೆ, ಕೃಷಿ, ತೋಟಗಾರಿಕಾ ಸಂಶೋಧನಾ ಪ್ರಯೋಜನ, ಮೂಲ ಸೌಕರ್ಯಗಳು ಹೆಚ್ಚಲಿವೆ ಎಂದು ಹೋರಾಟಗಾರರು ತಿಳಿಸಿದರು.

ಸಿದ್ದಾಪುರ: ಪ್ರತ್ಯೇಕ ಶಿರಸಿ ಜಿಲ್ಲೆಗಾಗಿ ರಿಸೋರ್ಸ್ ಫಾರ್ ಕ್ರಿಯೇಟರ್ ಡೆಮಾಕ್ರಸಿಯಿಂದ ಘಟ್ಟದ ಮೇಲಿನ ತಾಲೂಕುಗಳಾದ್ಯಂತ ಜನಾಭಿಪ್ರಾಯ ಮೂಡಿಸುತ್ತಿದ್ದು, ಜನರಿಂದ ಸಂಘ- ಸಂಸ್ಥೆಗಳಿಂದ ಧನಾತ್ಮಕ ಅಭಿಪ್ರಾಯ ಹೊರಹೊಮ್ಮುತ್ತಿದೆ ಎಂದು ರಮಾನಂದ ನಾಯ್ಕ ಹರಗಿ ತಿಳಿಸಿದರು.

ಪಟ್ಟಣದ ರಾಘವೇಂದ್ರ ಮಠದಲ್ಲಿ ರಿಸೋರ್ಸ್ ಫಾರ್ ಕ್ರಿಯೇಟರ್ ಡೆಮಾಕ್ರಸಿಯಿಂದ ತಾಲೂಕು ಮಟ್ಟದ ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಪ್ರಮುಖರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಸಿದ್ದಾಪುರ ತಾಲೂಕಿನಾದ್ಯಂತ ಇರುವ ಸಂಘ- ಸಂಸ್ಥೆಗಳು, ಸಾಮಾಜಿಕ ಕಾರ್ಯಕತರು, ಸಾಹಿತಿಗಳು, ಜನಸಾಮಾನ್ಯರು ಮಾಧ್ಯಮ ಮತ್ತು ಸೋಶಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿ ಸಲಹೆ, ಸೂಚನೆ ನೀಡಬೇಕೆಂದು ಮನವಿ ಮಾಡಿದರು.

ರಿಸೋರ್ಸ್ ಫಾರ್ ಕ್ರಿಯೇಟರ್ ಡೆಮಾಕ್ರಸಿ ಸಂಚಾಲಕ ಕೃಷ್ಣಮೂರ್ತಿ ಪನ್ನೆ ಶಿರಸಿ ಮಾತನಾಡಿ, ಶಿರಸಿ ಜಿಲ್ಲೆಯಾಗುವುದರಿಂದ ವೈದ್ಯಕೀಯ ವಿದ್ಯಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇವೆ, ಕೃಷಿ, ತೋಟಗಾರಿಕಾ ಸಂಶೋಧನಾ ಪ್ರಯೋಜನ, ಮೂಲ ಸೌಕರ್ಯಗಳು ಹೆಚ್ಚಲಿವೆ. ಹಿಂದುಳಿದ, ಎಸ್ಸಿ ಎಸ್ಟಿ ಸಮುದಾಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಅಧಿಕವಾಗಲಿವೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ಉದ್ಯೋಗ ಸೃಷ್ಟಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಸಕರು ಸರ್ಕಾರದ ಮಟ್ಟದಲ್ಲಿ ಪ್ರಬಲವಾಗಿ ಮಂಡಿಸಲು ಅವರಿಗೆ ಜನ ಅಭಿಪ್ರಾಯ ಮೂಡಿಸುವುದರೊಂದಿಗೆ ಶಕ್ತಿ ತುಂಬಬೇಕು ಎಂದರು.ಸಮಾಲೋಚನ ಸಭೆಯಲ್ಲಿ ಇಟಗಿ ರಾಮೇಶ್ವರ ಸಾವಯವ ರೈತ ಉತ್ಪಾದಕ ಸಂಘದ ಅಧ್ಯಕ್ಷ ಗೋವಿಂದ ರಾಜ ಹೆಗಡೆ ತಾರಗೋಡು, ವಿವಿಧ ಸಂಘ- ಸಂಸ್ಥೆಗಳ ಪ್ರಮುಖರಾದ ಮಹಾಬಲೇಶ್ವರ ಎಂ. ನಾಯ್ಕ ಬೇಡ್ಕಣಿ ಜಯಂತ ಹೆಗಡೆ ಕೆಳಗಿಮನೆ, ಮಂಜುನಾಥ ನಾಯ್ಕ ಸುಂಕತ್ತಿ, ನಾರಾಯಣ ನಾಯ್ಕ ಗಾಳಮಾವು, ಮಹೇಂದ್ರ ನಾಯ್ಕ ಅರಶಿಗೋಡು ಪರಶುರಾಮ ನಾಯ್ಕ ಮೂಗದುರು ಚಂದ್ರಶೇಖರ ನಾಯ್ಕ ಕುಬ್ರಿಗದ್ದೆ ಸಂಕೇತ ಕುಮಾರ ಸುಕಂತಿ ಮುಂತಾದವರು ಮಾತನಾಡಿದರು.

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಯಲ್ಲಾಪುರ: ಶಿರಸಿಯ ಮಾರಿಕಾಂಬಾ ತಾಲೂಕು ಕ್ರೀಡಾಂಗಣದಲ್ಲಿ ಅ. ೨೯ರಂದು ನಡೆದ ೨೦೨೪- ೨೫ನೇ ಸಾಲಿನ ೧೭ ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ, ನವೆಂಬರ್‌ನಲ್ಲಿ ಕೋಲಾರದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ವೈಯಕ್ತಿಕ ವಿಭಾಗದಲ್ಲಿ ನವೀನ್ ನರಸಿಂಹ ಸಿದ್ದಿ ಎತ್ತರ ಜಿಗಿತ ಪ್ರಥಮ ಹಾಗೂ ೫ ಕಿಮೀ ನಡಿಗೆಯಲ್ಲಿ ದ್ವಿತೀಯ, ಸಂಕೇತ ಈಶ್ವರ ನಾಯ್ಕ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು, ಪ್ರೌಢಶಾಲಾ ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ನಾಯ್ಕ ತರಬೇತಿ ನೀಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!