ಮೊದಲ ದಿನವೇ ಇ.ಖಾತಾ ಆಂದೋಲನಕ್ಕೆ ಉತ್ತಮ ಸ್ಪಂದನೆ

KannadaprabhaNewsNetwork |  
Published : Jul 24, 2025, 12:50 AM IST
23ಕೆಆರ್ ಎಂಎನ್ 7.ಜೆಪಿಜಿರಾಮನಗರ ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡಿನ ವಿಜಯನಗರದಲ್ಲಿ ನಡೆದ ಎ ಮತ್ತು ಬಿ ಖಾತಾ ವಿತರಣಾ ಆಂದೋಲನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿರವರು ಸ್ವತ್ತಿನ ಮಾಲೀಕರಿಗೆ ಖಾತೆ ವಿತರಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಮನೆ ಮನೆಗೆ ಎ ಮತ್ತು ಬಿ ಖಾತಾ ವಿತರಣಾ ಆಂದೋಲನಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ‌ ಸ್ಪಂದನೆ ವ್ಯಕ್ತವಾಯಿತು.

ರಾಮನಗರ: ಮನೆ ಮನೆಗೆ ಎ ಮತ್ತು ಬಿ ಖಾತಾ ವಿತರಣಾ ಆಂದೋಲನಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ‌ ಸ್ಪಂದನೆ ವ್ಯಕ್ತವಾಯಿತು.

ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡಿನ ವಿಜಯನಗರದಲ್ಲಿ ಆರಂಭವಾದ ಆಂದೋಲನಕ್ಕೆ ಜನರು ದಾಖಲಾತಿಗಳೊಂದಿಗೆ ಹಾಜರಾಗಿ ಸ್ಥಳದಲ್ಲಿಯೇ ಜನರು ಖಾತಾ ಪಡೆದುಕೊಂಡರು.

ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಸ್ವತ್ತಿನ ಆಸ್ತಿ ಅವರ ಹಕ್ಕಾಗಿದೆ. ಇ ಖಾತಾ ವಿಷಯವಾಗಿ ನಗರಸಭೆಗೆ ಅಲೆಯುವ ಬದಲು ಅವರಿರುವ ಸ್ಥಳಕ್ಕೆ ನಗರಸಭೆ ಆಡಳಿತ ಮತ್ತು ಅಧಿಕಾರಿಗಳೊಂದಿಗೆ ತೆರಳಿ ಖಾತಾಗಳನ್ನು ಸೃಜಿಸಿಕೊಡುವ ವಿನೂತನ ಕಾರ್ಯಕ್ರಮದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು‌. ಇದರಿಂದ ರಾಮನಗರ ನಗರಸಭೆಯನ್ನು ಖಾತಾ ಮುಕ್ತವನ್ನಾಗಿ ಮಾಡಲು ನೆರವಾಗಲಿದೆ ಎಂದರು.

ಈ ವೇಳೆ ನಗರಸಭಾ ಉಪಾಧ್ಯಕ್ಷೆ ಆಯಿಷಾಬಾನು, ಸದಸ್ಯರಾದ ಶಿವಸ್ವಾಮಿ, ವಿಜಯಕುಮಾರಿ, ಪವಿತ್ರ, ಜಯಲಕ್ಷ್ಮಮ್ಮ, ಸೋಮಶೇಖರ್, ನಾಗಮ್ಮ, ಗೋವಿಂದರಾಜು, ಪೌರಾಯುಕ್ತ ಡಾ.ಜಯಣ್ಣ, ವ್ಯವಸ್ಥಾಪಕರಾದ ರೇಖಾ, ಆರ್.ಐ ಕಿರಣ್, ಅಧಿಕಾರಿಗಳಾದ ನಾಗರಾಜು, ವೇದಾ, ನಟರಾಜುಗೌಡ, ನಂಜುಂಡ ಇತರರಿದ್ದರು.23ಕೆಆರ್ ಎಂಎನ್ 7.ಜೆಪಿಜಿ

ರಾಮನಗರ ನಗರಸಭೆ ವ್ಯಾಪ್ತಿಯ ಒಂದನೇ ವಾರ್ಡಿನ ವಿಜಯನಗರದಲ್ಲಿ ನಡೆದ ಎ ಮತ್ತು ಬಿ ಖಾತಾ ವಿತರಣಾ ಆಂದೋಲನದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಖಾತೆ ವಿತರಣೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ
ಬೆಳಗಾವಿ ಜಿಲ್ಲೆ ವಿಭಜನೆ ಇರಾದೆ ಸಿಎಂಗಿದೆ