ಕನ್ನಡಪ್ರಭ ವಾರ್ತೆ ಕೋಲಾರಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಕೋಲಾರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಮಿತ್‌ಶಾ ಹೇಳಿಕೆ ತೀವ್ರವಾಗಿ ಖಂಡಿಸಿ ಸಚಿವರನ್ನು ವಜಾಗೊಳಿಸಿ ಭಾರತ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯದ ಘೋಷಣೆಗಳು ಕೂಗುತ್ತಿದ್ದರು. ಕೋಲಾರ ಕೆಎಸ್‌ಆರ್‌ಟಿಸಿ ಡಿಪೋ ಎದುರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು
ನಗರದಲ್ಲಿ ವಾಹನ ಸಂಚಾರ ಸ್ತಬ್ಧದಲಿತ ಪರ ಸಂಘಟನೆಗಳು, ರೈತ ಸಂಘ, ವಿದ್ಯಾರ್ಥಿ ಸಂಘಟನೆ, ಕಾರ್ಮಿಕ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಬಳಿ ಸಂಘಟಿತರಾಗಿ ಯಾವುದೇ ವಾಹನಗಳು ಹೊರಬಾರದಂತೆ ತಡೆ ಹಿಡಿದ ಪ್ರತಿಭಟನಾಕಾರರು, ಬಸ್ ಡಿಪೋನಿಂದ ಬಸ್‌ಗಳು ಹೊರಗೆ ಬಿಡದಂತೆ ಎಚ್ಚರಿಕೆ ನೀಡಿದರು. ನಗರದಲ್ಲಿ ಯಾವುದೇ ಆಟೋ, ಟಿಪ್ಪರ್, ಟೆಂಪೊಗಳು ಬಸ್‌ಗಳು ರಸ್ತೆಗೆ ಇಳಿಯಲಿಲ್ಲ, ಬಹುತೇಕ ಅಂಗಡಿ ಮುಂಗಟ್ಟು, ಹೋಟೆಲ್‌ಗಳು ಬಂದ್ ಆಗಿದ್ದವು.
ಪೊಲೀಸ್ ಬಿಗಿ ಬಂದೋ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ವಾಹನಗಳು ನಗರದ ಎಲ್ಲ ರಸ್ತೆಗಳಲ್ಲಿ ಸಂಚರಿಸುತ್ತಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡುವಂತೆ ಪ್ರತಿಭಟನಕಾರರ ಗುಂಪುಗಳಿಗೆ ಸೂಚಿಸುತ್ತಿದ್ದರು. ಪ್ರತಿಭಟನಾಕಾರರು ದ್ವಿಚಕ್ರವಾಹನಗಳಲ್ಲಿ ನಗರದಲ್ಲಿ ಸಂಚರಿಸಿ ಅಲ್ಲಲ್ಲಿ ತೆರೆದಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಿದರು.
ಬಸ್ ಸಿಗದೆ ವಿಶೇಷಚೇತನರು, ಹೂ ವ್ಯಾಪಾರಿಗಳು ಪರದಾಡುವಂತಾಯಿತು. ಬಸ್ ಇಲ್ಲದೆ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ನಿಂತು ಕಾಯುತ್ತಿರುವ ವ್ಯಕ್ತಿ ಮಹಿಳೆಯರು, ವಿದ್ಯಾರ್ಥಿಗಳಿಗೂ ಇದೇ ಪರಿಸ್ಥಿತಿ ಎದುರಾಯಿತು. ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿದ ಪ್ರತಿಭಟನಾಕಾರರು ಬಸ್ ನಿಲ್ದಾಣ ಖಾಲಿ, ಖಾಲಿಯಾಗಿತ್ತು, ಆಟೋಗಳಿಲ್ಲ, ಶಾಲೆಗಳಿಲ್ಲದೆ ವಿದ್ಯಾರ್ಥಿಗಳು ವಾಪಸಾಗಬೇಕಾಯಿತು. ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಸ್ವಯಂ ಪ್ರೇರಿತ ಬಂದ್