ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟ, ಇ-ಫಾರ್ಮಸಿಗಳ ಭಾರಿ ರಿಯಾಯಿತಿ ಪದ್ಧತಿ ವಿರೋಧಿಸಿ ಅಖಿಲಭಾರತ ಕೆಮಿಸ್ಟ್ ಮತ್ತು ಡಗ್ಗಿಸ್ಟ್ ಸಂಸ್ಥೆ ಕರೆ ನೀಡಿರುವ ಬಂದ್‌ಗೆ ನಗರದಲ್ಲಿ ಮುಖ್ಯ ಮೆಡಿಕಲ್ ಸ್ಟೋರ್ಸ್ ಗಳು ಮುಚ್ಚುವುದರ ಮೂಲಕ ಔಷಧಿ ವ್ಯಾಪಾರಿಗಳ ಮಾರಾಟ ಸಂಘದ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸಂಘಕ್ಕೆ ಬೆಂಬಲ
ಕನ್ನಡಪ್ರಭ ವಾರ್ತೆ, ಮಾಲೂರು
ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟ, ಇ-ಫಾರ್ಮಸಿಗಳ ಭಾರಿ ರಿಯಾಯಿತಿ ಪದ್ಧತಿ ವಿರೋಧಿಸಿ ಅಖಿಲಭಾರತ ಕೆಮಿಸ್ಟ್ ಮತ್ತು ಡಗ್ಗಿಸ್ಟ್ ಸಂಸ್ಥೆ ಕರೆನೀಡಿರುವ ಬಂದ್‌ಗೆ ತಾಲೂಕು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಮೆಡಿಕಲ್ ಸ್ಟೋರ್ಸ್ ಬಹುತೇಕ ಬಂದ್ ಮಾಡಿ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದವು. ಇದರಿಂದ ಪಟ್ಟಣದಲ್ಲಿ ಅಗತ್ಯ ಔಷದಿಗಳು ಸಿಗದೇ ಸಾರ್ವಜನಿಕರು ಪರದಾಡಿದರು.ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟ, ಇ-ಫಾರ್ಮಸಿಗಳ ಭಾರಿ ರಿಯಾಯಿತಿ ಪದ್ಧತಿ ವಿರೋಧಿಸಿ ಅಖಿಲಭಾರತ ಕೆಮಿಸ್ಟ್ ಮತ್ತು ಡಗ್ಗಿಸ್ಟ್ ಸಂಸ್ಥೆ ಕರೆ ನೀಡಿರುವ ಬಂದ್‌ಗೆ ನಗರದಲ್ಲಿ ಮುಖ್ಯ ಮೆಡಿಕಲ್ ಸ್ಟೋರ್ಸ್ ಗಳು ಮುಚ್ಚುವುದರ ಮೂಲಕ ಔಷಧಿ ವ್ಯಾಪಾರಿಗಳ ಮಾರಾಟ ಸಂಘದ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸಂಘಕ್ಕೆ ಬೆಂಬಲ ನೀಡಿದ್ದವು. ಮೆಡಿಕಲ್-ಫಾರ್ಮಸಿ ಕಾರ್ಯಾಚರಣೆಗೆ ಅನುಮತಿ ನೀಡುವ ೨೦೧೮ರ ಜಿಎಸ್‌ಆರ್ ೮೧೭(ಇ)ಅಧಿಸೂಚನೆ ಹಿಂಪಡೆಯಬೇಕು. ಕೋವಿಡ್-೧೯ ಅವಧಿಯಲ್ಲಿ ಮನೆಬಾಗಿಲಿಗೆ ಔಷಧಿ ತಲುಪಿಸಲು ಅನುಮತಿ ನೀಡಿದ್ದ ಜಿಎಸ್‌ಆರ್ ೨೨೦(೨)ಆದೇಶ ರದ್ದುಗೊಳಿಸಬೇಕು. ಕಾರ್ಪೊರೇಟ್ ಸಂಸ್ಥೆಗಳ ಭಾರಿ ರಿಯಾಯಿತಿ ದರ ಸಮರಕ್ಕೆ ಬ್ರೇಕ್ ಹಾಕಿ, ಎಲ್ಲ ವ್ಯಾಪಾರಿಗಳಿಗೂ ಸಮಾನ ಮುಕ್ತ ಮಾರುಕಟ್ಟೆ ಕಲ್ಪಿಸಬೇಕು. ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ಹಿಂಜರಿಯುವುದಿಲ್ಲ ಎಂದು ಔಷಧಿ ವ್ಯಾಪಾರಸ್ಥರು ಎಚ್ಚರಿಸಿದ್ದಾರೆ. ನಗರದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಚಿಕಿತ್ಸೆಗಳಿಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಬಂದ ಸಾರ್ವಜನಿಕರು ಮೆಡಿಕಲ್ ಸ್ಟೋರ್ ಬಂದ್ ಮಾಡಿದ್ದರಿಂದ ಅಗತ್ಯವಿರುವ ಔಷಧಿಗಳು ಸಿಗದೇ ಮೆಡಿಕಲ್ ಶಾಪ್ ಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.