ಅಭಿರುಚಿಗೆ ತಕ್ಕಂತ ಕ್ರೀಡಾಮನೋಭಾವ ಮುಖ್ಯ: ಡಾ.ಕುಮಾರ

KannadaprabhaNewsNetwork |  
Published : Jan 30, 2025, 12:31 AM IST
೨೯ಕೆಎಂಎನ್‌ಡಿ-೫ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ಫೋಟೋಗಳಿಗೆ ನಾವು ಸರಿಯಾಗಿ ನಿಲ್ಲಲಿಲ್ಲವೆಂದರೆ ಹಾಗೂ ಮುಖದಲ್ಲಿ ನಗು ಮೂಡಿಸದಿದ್ದರೆ ನಮ್ಮನ್ನು ನಗಿಸಿ ಒಳ್ಳೆಯ ಫೋಟೋ ತೆಗೆಯುವುದೆಂದರೆ ಸ್ಮೈಲ್ ಪ್ಲೀಸ್ ಎಂದು ಹೇಳುವ ಪ್ರತಿಯೊಬ್ಬ ಛಾಯಾಗ್ರಾಹಕರಲ್ಲೂ ನಗು ತುಂಬಿರಬೇಕು ಎಂದು ಆಶಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಚಾಲನೆ ನೀಡಿದರು.

ಪಿಚ್‌ನಲ್ಲಿ ಬ್ಯಾಟ್ ಹಿಡಿದು ಆಟ ಆಡುವುದರೊಂದಿಗೆ ಪಂದ್ಯಾವಳಿ ಉದ್ಘಾಟಿಸಿದ ಅವರು, ಛಾಯಾಗ್ರಾಹಕರೆಂದರೆ ಕ್ಯಾಮೆರಾ ಹಿಡಿದು ಕಾರ್ಯಕ್ರಮಗಳಲ್ಲಿ ಫೋಟೋ ತೆಗೆಯುವುದಲ್ಲ. ಅವರ ಅಭಿರುಚಿಗೆ ತಕ್ಕಂತಹ ಕ್ರೀಡಾ ಮನೋಭಾವವೂ ಇರಬೇಕು. ಯಾರು ಸೋಲುತ್ತಾರೋ, ಗೆಲ್ಲುತ್ತಾರೋ, ಮುಖ್ಯವಲ್ಲ ಪ್ರತಿಯೊಬ್ಬರೂ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.

ಫೋಟೋಗಳಿಗೆ ನಾವು ಸರಿಯಾಗಿ ನಿಲ್ಲಲಿಲ್ಲವೆಂದರೆ ಹಾಗೂ ಮುಖದಲ್ಲಿ ನಗು ಮೂಡಿಸದಿದ್ದರೆ ನಮ್ಮನ್ನು ನಗಿಸಿ ಒಳ್ಳೆಯ ಫೋಟೋ ತೆಗೆಯುವುದೆಂದರೆ ಸ್ಮೈಲ್ ಪ್ಲೀಸ್ ಎಂದು ಹೇಳುವ ಪ್ರತಿಯೊಬ್ಬ ಛಾಯಾಗ್ರಾಹಕರಲ್ಲೂ ನಗು ತುಂಬಿರಬೇಕು ಎಂದು ಆಶಿಸಿದರು.

ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲದಂಡಿ ಮಾತನಾಡಿ, ಪ್ರತಿ ಹಳ್ಳಿ ಹಳ್ಳಿಗಳಲ್ಲೂ, ಗಲ್ಲಿ ಗಲ್ಲಿಗಳಲ್ಲೂ ಯುವಕರು ಕ್ರಿಕೆಟ್ ಆಟವನ್ನು ಪ್ರೀತಿಯಿಂದ ಆಡುತ್ತಿದ್ದಾರೆ. ಹಾಗಾಗಿ ಈ ಕ್ರೀಡೆ ನಮ್ಮ ದೇಶದಲ್ಲಿ ಬಹಳ ಜನಪ್ರಿಯತೆ ಗಳಿಸಿದೆ ಎಂದರು.

ಶಾಸಕ ಪಿ. ರವಿಕುಮಾರ್ ಅವರು ತಂಡವನ್ನು ಪರಿಚಯಿಸಿಕೊಂಡು ಶುಭ ಕೋರಿದರು. ಇದೇ ವೇಳೆ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಸಮಾಜ ಸೇವಕ ಮಂಜು, ನಗರಸಭಾ ಸದಸ್ಯ ಶಿವಪ್ರಕಾಶ್, ಮಾಂಡವ್ಯ ವೃತ್ತಿಪರ ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ವಿನೋದ್ ಎಸ್.ಗೌಡ, ಉಪಾಧ್ಯಕ್ಷ ಕಾರ್ತಿಕ್‌ಗೌಡ, ಸಲಹೆಗಾರರಾದ ಸುರೇಶ್, ಸಬ್ನಳ್ಳಿ ರಾಜು, ಪ್ರಧಾನ ಕಾರ್ಯದರ್ಶಿ ಕೆ.ರುಬಿನ್ ಕೆ, ಖಜಾಂಚಿ ನಿರಂಜನ್, ಸಹ ಕಾರ್ಯದರ್ಶಿ ಅಂಕೇಗೌಡ, ಸಂಘಟನಾ ಕಾರ್ಯದರ್ಶಿ ಜಿ.ಆರ್.ಮಹೇಶ್. ಕ್ರೀಡಾ ಕಾರ್ಯದರ್ಶಿ ಶಿವಶಂಕರ್, ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಎಸ್.ಮಹೇಶ್ ನಿರ್ದೇಶಕರಾದ ದಿನೇಶ್‌ಕುಮಾರ್, ಎಚ್.ಜೆ.ಜಗದೀಶ್, ಬಿ.ಉಮೇಶ್. ಮುತ್ತುರಾಜ್, ಲಕ್ಷ್ಮಣ್ ಪಟೇಲ್, ಹಾಗೂ ಕೊಡಗು, ಚಾಮರಾಜನಗರ, ಹಾಸನ, ಮಂಡ್ಯ , ಚನ್ನಪಟ್ಟಣ, ಜಿಲ್ಲೆಯ ಛಾಯಾಚಿತ್ರಗ್ರಾಹಕ ಕ್ರೀಡಾ ಅಭಿಮಾನಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!