ಉತ್ತಮ ವಿಚಾರವುಳ್ಳ ನೀಲಿ ಹೊತ್ತಿಗೆ ಕಾದಂಬರಿ

KannadaprabhaNewsNetwork |  
Published : Jun 10, 2025, 09:24 AM IST
ಪೋಟೊ8ಕೆಎಸಟಿ1: ಕುಷ್ಟಗಿ ಪಟ್ಟಣದ ಬಸವ ಭವನದಲ್ಲಿ ಮೌನೇಶ ನವಲಹಳ್ಳಿಯ ನೀಲಿ ಹೊತ್ತಿಗೆ ಕಾದಂಬರಿಯನ್ನು ಡಾ.ಜಾಜಿ ದೇವೆಂದ್ರಪ್ಪ ಅವರು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಮೌನೇಶ ನೀಲಿ ಹೊತ್ತಿಗೆ ಕಾದಂಬರಿಯ ಮೂಲಕ ಸಮಾಜದಲ್ಲಿ ನಡೆಯುವ ಮೌಢ್ಯ, ಅಕ್ರಮ ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತುತಪಡಿಸಿದ್ದು, ಸಿನಿಮೀಯ ಶೈಲಿಯಲ್ಲಿ ಉತ್ತಮ ಕಾದಂಬರಿ ಬರೆದಿದ್ದಾರೆ.

ಕುಷ್ಟಗಿ:

ಪಟ್ಟಣದ ಬಸವ ಭವನದಲ್ಲಿ ಮೌನೇಶ ನವಲಹಳ್ಳಿಯ ನೀಲಿ ಹೊತ್ತಿಗೆ ಕಾದಂಬರಿಯನ್ನು ಪ್ರಾಚಾರ್ಯ ಡಾ. ಜಾಜಿ ದೇವೆಂದ್ರಪ್ಪ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಮೌನೇಶ ನೀಲಿ ಹೊತ್ತಿಗೆ ಕಾದಂಬರಿಯ ಮೂಲಕ ಸಮಾಜದಲ್ಲಿ ನಡೆಯುವ ಮೌಢ್ಯ, ಅಕ್ರಮ ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತುತಪಡಿಸಿದ್ದು, ಸಿನಿಮೀಯ ಶೈಲಿಯಲ್ಲಿ ಉತ್ತಮ ಕಾದಂಬರಿ ಬರೆದಿದ್ದಾರೆ ಎಂದರು.

ಅಕ್ಷರ ಸಂಗಾತದ ಸಂಪಾದಕ ಡಾ. ಟಿ.ಎಸ್. ಗೊರವರ ಮಾತನಾಡಿ, ಮೌನೇಶ ತಮ್ಮ ಕುಲಕಸುಬಿನ ಜತೆಗೆ ಕಾದಂಬರಿ ಬರೆಯಲು ಮುಂದಾಗಿದ್ದು ಶ್ಲಾಘನೀಯ ಕಾರ್ಯವಾಗಿದೆ. ಆಧುನಿಕ ಜಂಜಾಟದಲ್ಲಿ ಕೆಲವರು ಮಾತ್ರ ಬರವಣಿಗೆಯತ್ತ ಗಮನ ಕೊಡುತ್ತಿದ್ದು ಅಂತಹವರಲ್ಲಿ ಮೌನೇಶ ಒಬ್ಬರಾಗಿದ್ದಾರೆ ಎಂದರು.

ನೀಲಿ ಹೊತ್ತಿಗೆ ಕಾದಂಬರಿಯನ್ನು ಶ್ರೀಕಾಂತ ಬೆಟಗೇರಿ, ಮಹಾಂತೇಶ ಹಿರೇಕುರುಬರ, ದೇವರಾಜ ವಿಶ್ವಕರ್ಮ, ಶಿವನಗೌಡ ಪಾಟೀಲ, ಮಹೇಶ ಹಡಪದ, ಶರಣು ತೆಮ್ಮಿನಾಳ ಸೇರಿದಂತೆ ಅನೇಕರು ಅವಲೋಕನ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ವಹಿಸಿದ್ದರು. ಈ ವೇಳೆ ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ್‌ ಕುಷ್ಟಗಿ, ಎಸ್.ಜಿ. ಕಡೆಮನಿ, ಶರಣಪ್ಪ ನೀಡಶೇಸಿ, ಡಾ. ಜೀವನಸಾಬ್‌ ಬಿನ್ನಾಳ, ಶರಣಪ್ಪ ವಡಗೇರಿ, ರವೀಂದ್ರ ಬಾಕಳೆ, ಹನುಮೇಶ ಗುಮಗೇರಿ, ಉಮೇಶ ಹಿರೇಮಠ, ಶೇಖರಗೌಡ ಸರನಾಡಗೌಡ್ರ, ಅಮರೇಗೌಡ ಜಾಲಿಹಾಳ, ನಟರಾಜ ಸೋನಾರ, ಶರಣಪ್ಪ ಲೈನದ್ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ