ಸೊಸೈಟಿ ಮೂಲಕ ಜೊಲ್ಲೆಯವರಿಂದ ಉತ್ತಮ ಕಾರ್ಯ: ಎಂ.ಪಿ.ರಾಜು

KannadaprabhaNewsNetwork |  
Published : Mar 09, 2025, 01:45 AM IST
ಹೊನ್ನಾಳಿ ಫೋಟೋ 8ಎಚ್.ಎಲ್.ಐ2. ಪಟ್ಟಣದ ಶ್ರೀಬೀರೇಶ್ವರ ಕೋ. ಆಪ್. ಕ್ರೆಡಿಟ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ನೂತನ ಸಲಹಾ ಸಮಿತಿ ಅಧ್ಯಕ್ಷ ಎಂ.ಪಿ.ರಾಜು ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಅಣ್ಣಾ ಸಾಹೇಬ್ ಜೊಲ್ಲೆ ನಮ್ಮ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ ತಮ್ಮ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಶಾಖೆಗಳನ್ನು ತೆರೆದಿದ್ದು ರಾಜ್ಯದುದ್ದಗಲಕ್ಕೂ ಅತ್ಯುತ್ತಮ ಸೇವೆ ನೀಡುತ್ತ ಬಂದಿದ್ದಾರೆ ಎಂದು ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ನೂತನ ಸಲಹಾ ಸಮಿತಿ ಅಧ್ಯಕ್ಷ ಬಿಜೆಪಿ ಮುಖಂಡ ಎಂ.ಪಿ.ರಾಜು ಹೇಳಿದರು.

ಬೀರೇಶ್ವರ ಸೊಸೈಟಿಯ ಶಾಖಾ ಸಲಹಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅಣ್ಣಾ ಸಾಹೇಬ್ ಜೊಲ್ಲೆ ನಮ್ಮ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ ತಮ್ಮ ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಶಾಖೆಗಳನ್ನು ತೆರೆದಿದ್ದು ರಾಜ್ಯದುದ್ದಗಲಕ್ಕೂ ಅತ್ಯುತ್ತಮ ಸೇವೆ ನೀಡುತ್ತ ಬಂದಿದ್ದಾರೆ ಎಂದು ಶ್ರೀ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ನೂತನ ಸಲಹಾ ಸಮಿತಿ ಅಧ್ಯಕ್ಷ ಬಿಜೆಪಿ ಮುಖಂಡ ಎಂ.ಪಿ.ರಾಜು ಹೇಳಿದರು.

ಶನಿವಾರ ಪಟ್ಟಣದಲ್ಲಿರುವ ಶ್ರೀ ಬೀರೇಶ್ವರ ಕೋ ಆಪ್ ಕ್ರೆ ಸೊಸೈಟಿಯ ನೂತನ ಶಾಖಾ ಸಲಹಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಸೊಸೈಟಿ ವ್ಯವಸ್ಥಾಪಕ ಪ್ರಕಾಶ್‌ನಾಯ್ಕ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡಾ ಈ ಸೊಸೈಟಿಯ ನಿರ್ದೇಶಕರಾಗಿದ್ದು ಉತ್ತಮ ಸಾಧನೆ ತೋರಿದ್ದಾರೆ ಎಂದ ಅವರು, ಇಲ್ಲಿನ ಸೊಸೈಟಿ ನೌಕರರು ಹಾಗೂ ಪಿಗ್ಮಿ ಸಂಗ್ರಹಕಾರರು ಗ್ರಾಹಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ವ್ಯವಹಾರ ನಡೆಸಬೇಕು, ಹಣದ ಅವ್ಯವಹಾರವನ್ನು ಮಾಡಬಾರದು. ಸಿಬ್ಬಂದಿಗಳು ನೇರವಾಗಿ ಗ್ರಾಹಕರಿಗೆ ಸಂಪರ್ಕ ಇರುವುದರಿಂದ ಅದರ ಮೇಲೆ ಸೊಸೈಟಿಯ ಸಾಧನೆ ನಿಂತಿರುತ್ತದೆ ಎಂದರು

ಸಲಹಾ ಸಮಿತಿ ಸದಸ್ಯ, ಔಷಧಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರೇಯ ಎಲ್. ವೈಶ್ಯರ್ ಮಾತನಾಡಿ, ಈ ಸೊಸೈಟಿಯ ಏಳ್ಗೆಗೆ ಸೊಸೈಟಿ ಸದಸ್ಯರು ಕೈ ಜೋಡಿಸಬೇಕು. ಹೆಚ್ಚು ಠೇವಣಿ ಸಂಗ್ರಹ ಮಾಡಬೇಕು. ಸಾಲ ನೀಡಿ ನಿಗದಿತ ವೇಳೆಯಲ್ಲಿ ಸಾಲ ವಾಪಸಾತಿ ಮಾಡಿಕೊಳ್ಳಬೇಕು ಎಂದ ಅವರು, ಹೊನ್ನಾಳಿ ಜನತೆಗೆ ತಮ್ಮ ಶಾಖೆಯನ್ನು ತೆರೆದ ಜೊಲ್ಲೆ ದಂಪತಿಗೆ ಧನ್ಯವಾದ ಹೇಳಬೇಕಾಗಿದೆ ಎಂದರು.

ಕ್ಲಿಷ್ಟಕರವಾದ ಈ ಪರಿಸ್ಥಿತಿಯಲ್ಲಿ ಸರಳವಾಗಿ, ಸುಲಭವಾಗಿ ಮತ್ತು ಕಾನೂನುಬದ್ಧವಾಗಿ ಸಾಲ ಕೊಡುವ ಮೂಲಕ ಉತ್ತಮ ಸೇವೆ ನೀಡಲಿ ಎಂದು ಹಾರೈಸಿದರು.

ಸೊಸೈಟಿಯ ವ್ಯವಸ್ಥಾಪಕ ಪ್ರಕಾಶ್‌ನಾಯ್ಕ ಮಾತನಾಡಿ, 2023 ರಲ್ಲಿ ಹೊನ್ನಾಳಿಯಲ್ಲಿ ಪ್ರಾರಂಭವಾದ ಈ ಶಾಖೆ 200 ಜನ ಸದಸ್ಯರನ್ನು ಹೊಂದಿದೆ.1.64 ಕೋಟಿ ರು.ಠೇವಣಿ ಸಂಗ್ರಹಿಸಿ 35 ಲಕ್ಷ ರು. ಸಾಲವನ್ನು ನೀಡಿದೆ ಎಂದರು.

ನೂತನ ಸದಸ್ಯರಾದ ಎಚ್.ಎಂ.ರುದ್ರೇಶ, ಎಚ್.ಪಿ. ಶ್ರೀಹರಿ, ಪಿ.ಎಂ. ಪರಮೇಶ್ವರಪ್ಪ, ಎ.ಪಿ. ಗಂಗಾಧರ, ಎಚ್.ಬಿ. ಕಾರ್ತೀಕ ಉಪಸ್ಥಿತರಿದ್ದರು. ಸಿಬ್ಬಂದಿ ಮಾರುತಿ, ಪಾಟೀಲ್, ಉಮೇಶ್, ಗಿರೀಶ್ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶ್ರೀಬೀರೇಶ್ವರ ಕೋ. ಆಪ್. ಕ್ರೆಡಿಟ್ ಸೊಸೈಟಿ ಸಂಸ್ಥಾಪಕರಾದ ಅಣ್ಣಾಸಾಹೆಬ್ ಶಂಕರ್‌ ಜೊಲ್ಲೆ ಅವರ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''