ಕಾರ್ಖಾನೆಗೆ ಬೆಂಕಿ : ಲಕ್ಷಾಂತಕ ರು ನಷ್ಟ

KannadaprabhaNewsNetwork |  
Published : May 24, 2026, 01:15 AM IST
ಫೋಟೋ  | Kannada Prabha

ಸಾರಾಂಶ

ಕಾರ್ಖಾನೆಯಲ್ಲಿ ಹಾಸಿಗೆ ಮತ್ತು ಸೋಫಗೆ ಬಳಸುವ ಫೋಮ್

ಮೈಸೂರು

ಫೋಮ್ ತಯಾರಿಕಾ ಕೈಗಾರಿಕೆಗೆ ಬೆಂಕಿ ಬಿದ್ದ ಪರಿಣಾಮ 50 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ.

ಕಡಕೊಳ ಕೈಗಾರಿಕಾ ಪ್ರದೇಶದಲ್ಲಿನ ವೀರಶ್ರೀ ಮತ್ತು ಕಾಯ್‌ ಜಾ ಇಂಡಸ್ಟ್ರೀಸ್‌ ನಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ.ಕಾರ್ಖಾನೆಯಲ್ಲಿ ಹಾಸಿಗೆ ಮತ್ತು ಸೋಫಗೆ ಬಳಸುವ ಫೋಮ್ ತಯಾರಿಸಲಾಗುತ್ತಿದ್ದು, ಶನಿವಾರ ಸಂಜೆ 4 ಗಂಟೆಯ ಹೊತ್ತಿಗೆ ಶಾರ್ಟ್ ಸರ್ಕಿಟ್‌ ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಜ್ವಾಲೆ ಎಲ್ಲೆಡೆ ಆವರಿಸಿದೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಂಜನಗೂಡಿನ ಎರಡು ಅಗ್ನಿ ಶಾಮಕ ವಾಹನ ಸೇರಿದಂತೆ ಮೈಸೂರಿನ ಒಟ್ಟು ಐದು ವಾಹನಗಳು ಮತ್ತು ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯಾಚರಣೆ ನಡೆಸುವ ಮೂಲಕ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದರು ಎಂದು ಜಿಲ್ಲಾ ಅಗ್ನಿ ಶಾಮಕಾಧಿಕಾರಿ ಕೆ.ಪಿ. ಗುರುರಾಜ್ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50 ಮಿಲಿಯನ್ ಸಸಿಗಳ ನೆಡುವ ಅಭಿಯಾನ
ನಿಯಮ ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ಕ್ರಮ