ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ವಾಸವಿ ವಿದ್ಯಾಶಾಲೆಯಲ್ಲಿ ಸುಮಾರು ೩೫೦ ಮಕ್ಕಳು ಹಾಗೂ ಪೋಷಕರ ಆರೋಗ್ಯ ತಪಾಸಣಾ ಕಾರ್ಯ ನಡೆಸಿ ಮಾತನಾಡಿದರು. ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರಗಳ ಸೇವನೆ ಮಾಡಬೇಕು, ಮೊಬೈಲ್ ಗೀಳನ್ನು ಮಕ್ಕಳು ಬಿಡಬೇಕು. ಬೆಳಕಿನಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವಿರಲಿ, ಕಣ್ಣಿಗೆ ಹೆಚ್ಚು ಆಯಾಸ ನೀಡಬಾರದು. ಸಿಹಿ ಪದಾರ್ಥಗಳ ಸೇವನೆಯ ಮೇಲೆ ಮಿತಿ ಇರಲಿ, ಕಣ್ಣು ಸೂಕ್ಷ್ಮವಾದ ಅಂಗವಾಗಿದ್ದು, ಹೆಚ್ಚು ಜಾಗ್ರತೆ ಅಗತ್ಯ ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಆದಿಶೇಷ ಕುಮಾರ್ ಮಕ್ಕಳ ಸಂಗಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮಾತನಾಡಿ, ಮಕ್ಕಳೇ ಸಮಾಜದ ಬೆಳಕು. ಆರೋಗ್ಯವಂತ ಮಕ್ಕಳಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಮಕ್ಕಳು ಹಾಗೂ ಪೋಷಕರು ಉಚಿತ ಆರೋಗ್ಯದ ಪ್ರಯೋಜನ ಪಡೆಯಬೇಕೆಂದರು. ವಿದ್ಯಾರ್ಥಿಗಳು ವೈದ್ಯರ ಬಳಿ ತಲೆನೋವು, ಬೆವರುವಿಕೆ, ಹಲ್ಲು ನೋವು, ಕಣ್ಣಿನಲ್ಲಿ ನೀರು ಸುರಿಯುವುದು ಇನ್ನಿತರ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಮುಖ್ಯ ಶಿಕ್ಷಕ ರಮೇಶ್‌ಗೌಡ, ವೆಂಕಟೇಶ್ವರ ಮೋಟಾರ್ಸ್ ಮಾಲೀಕ ಅಂಕಂ ಸಂಜೀವ್, ಶಿಕ್ಷಕಿ ರೂಪ ಮುಂತಾದವರಿದ್ದರು.