ಪೌರ ಕಾರ್ಮಿಕರಿಗೆ ಗೋಪಾಲಸ್ವಾಮಿ ವಸ್ತ್ರ ವಿತರಣೆ

KannadaprabhaNewsNetwork |  
Published : Aug 31, 2025, 01:08 AM IST
30ಎಚ್ಎಸ್ಎನ್13 :  | Kannada Prabha

ಸಾರಾಂಶ

ರಾಜ್ಯದಲ್ಲಿನ ಪೌರಕಾರ್ಮಿಕರು ಬದುಕಿನ ಬವಣೆ ಅರಿತು ಅವರನ್ನು ಖಾಯಂ ಮಾಡಿದಲ್ಲದೆ ಸಮಾನ ವೇತನ ಜಾರಿಗೆ ತರುವ ಮೂಲಕ ಪೌರಕಾರ್ಮಿಕರಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ೧೦೭ ಪೌರಕಾರ್ಮಿಕರಿಗೆ ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ವಸ್ತ್ರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ೧೦೭ ಪೌರಕಾರ್ಮಿಕರಿಗೆ ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ವಸ್ತ್ರ ವಿತರಿಸಿದರು.

ರಾಜ್ಯದಲ್ಲಿನ ಪೌರಕಾರ್ಮಿಕರು ಬದುಕಿನ ಬವಣೆ ಅರಿತು ಅವರನ್ನು ಖಾಯಂ ಮಾಡಿದಲ್ಲದೆ ಸಮಾನ ವೇತನ ಜಾರಿಗೆ ತರುವ ಮೂಲಕ ಪೌರಕಾರ್ಮಿಕರಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಮುಖ್ಯವಾಗಿದೆ ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗೌರಿ ಗಣೇಶ ಚತುರ್ಥಿಯ ಅಂಗವಾಗಿ ಒಟ್ಟು ೧೦೭ ಮಂದಿ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಮಾಡಿ ಅವರು ಮಾತನಾಡಿ, ಪೌರಕಾರ್ಮಿಕರಿಗೆ ಮಾಸಿಗ ೭.೫ ಸಾವಿರ ಇದ್ದ ವೇತನವನ್ನು ೧೩.೫ ಸಾವಿರಕ್ಕೆ ಏರಿಸಿದಲ್ಲದೆ ನಾಲ್ಕು ವರ್ಷ ಗುತ್ತಿಗೆ ಆಧಾರದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮೇಲೆ ಕೆಲಸ ಮಾಡಿದವರನ್ನು ಕಾಯಂ ಮಾಡಿದ ಸರ್ಕಾರಕ್ಕೆ ಸಲ್ಲುತ್ತದೆ ಎಂದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಪುರಸಭೆಯಲ್ಲಿ ೨೭ ಮಂದಿ ಖಾಯಂ ನೌಕರರಾದರು ಇವರಿಗೆ ಮಾಸಿಕ ೩೪ ಸಾವಿರ ವೇತನ ದೊರೆಯುತ್ತಿದೆ. ಇನ್ನು ಗುತ್ತಿಗೆ ಅದಾರದವರಿಗೆ ಪೌರಕಾರ್ಮಿಕರಾಗಿ ಸೇವೆ ಮಾಡುವವರಿಗೆ ಮಾಸಿಕ ೧೮ ಸಾವಿರ ವೇತನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ನಗರವನ್ನು ಸ್ವಚ್ಛವಾಗಿಡಲು ಪ್ರತಿ ನಿತ್ಯವೂ ಮುಂಜಾನೆ ೫ ಗಂಟೆಯಿಂದ ಶ್ರಮಿಸುತ್ತಿರುವ ಕಾರ್ಮಿಕರ ಸಮಸ್ಯೆ ಆಲಿಸುವುದು ಜನಪ್ರತಿನಿಧಿಗಳ ಕರ್ತವ್ಯ, ಯಾವುದೇ ಸಮಸ್ಯೆ ಇದ್ದರೂ ಖುದ್ದು ಭೇಟಿ ಮಾಡಬಹುದು. ರಾಜ್ಯದಲ್ಲಿ ಈಗಲೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರ ಇದೆ ಪೌರಕಾರ್ಮಿಕರ ವೇತನ ಹೆಚ್ಚಿಸಲು ತಾವು ಮನವಿ ಮಾಡಿದರೆ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲೆಯ ಇತರ ತಾಲೂಕಿಗೆ ಹೋಲಿಸಿದರೆ ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿ ಸ್ವಚ್ಛವಾಗಿ ಇರುವುದು ನಿಮ್ಮ ಸೇವೆಯಿಂದ. ಸಾಕಷ್ಟು ಪಟ್ಟಣಗಳಲ್ಲಿ ಕಸದ ರಾಶಿ ಇರುತ್ತದೆ. ಆದರೆ ಪುರಸಭೆ ವ್ಯಾಪ್ತಿಯ ೨೩ ವಾಡ್ ೯ಗಳಲ್ಲಿ ಕಸದ ಸಮಸ್ಯೆ ಆಗದಂತೆ ನಿತ್ಯವೂ ಶ್ರಮಿಸುತ್ತಿದ್ದೀರ. ಇನ್ನು ನಿಮ್ಮ ಸೇವೆಯ ವೇಳೆಯಲ್ಲಿ ಸರ್ಕಾರ ನೀಡುವ ಪರಿಕರಗಳನ್ನು ಬಳಕೆ ಮಾಡುವುದು ಸೂಕ್ತ ಇದರಿಂದ ಸುರಕ್ಷತೆ ಹೊಂದಿ ಆನೇಕ ರೋಗಗಳಿಂದ ದೂರ ಉಳಿಯಬಹುದಾಗಿದೆ ಎಂದು ಕಿವಿಮಾತು ಹೇಳಿದರು.ಪೌರಕಾರ್ಮಿಕರು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಆರೋಗ್ಯವಾಗಿದ್ದರೆ ನಿಮ್ಮ ಸಂಪಾದನೆ ಹಣ ಉಳಿತಾಯವಾಗಲಿದೆ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾದರೆ ನಗರದ ಸೌಂದರ್ಯ ಹಾಳಾಗುವುದಲ್ಲದೆ ನಿಮ್ಮ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗಲಿದೆ. ಪ್ರತಿ ಆರು ತಿಂಗಳಿಗೆ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಇಲ್ಲವೆ ನಾವು ವರ್ಷಕ್ಕೆ ಒಮ್ಮೆ ನಡೆಸುವ ಉಚಿತ ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಳ್ಳುವುದು ಸೂಕ್ತ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಮಂಜೇಗೌಡ ಮಾತನಾಡಿ, ತುಳಿತಕ್ಕೆ ಒಳಗಾದವರಿಗೆ ಸಹಕಾರ ನೀಡುವುದು ನಮ್ಮ ಧರ್ಮ. ಈ ನಿಟ್ಟಿನಲ್ಲಿ ಜಿಲ್ಲೆ ಸಂಸದ ಶ್ರೇಯಸ್ ಎಂ. ಪಟೇಲ್ ಹಾಗೂ ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಪೌರಕಾರ್ಮಿಕರ ಸಮಸ್ಯೆ ಆಲಿಸುವುದರೊಂದಿಗೆ ಹಬ್ಬಕ್ಕೆ ವಸ್ತ್ರವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಹಬ್ಬದ ದಿವಸ ಹೊಸ ಬಟ್ಟೆ ತೊಡುವುದು ವಾಡಿಕೆ ಈ ನಿಟ್ಟಿನಲ್ಲಿ ವಸ್ತ್ರ ವಿತರಣೆ ಮಾಡಿದ್ದಾರೆ ಎಂದರು.

ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಅಣತಿಆನಂದ್, ಪುರಸಭಾ ಸದಸ್ಯರಾದ ಪ್ರಕಾಶ್, ಸುಜಾತ, ಆದರ್ಶ, ರವಿ, ಪ್ರೇಮಕುಮಾರ್, ನಿರ್ದೇಶಕ ರೋಹಿತ್, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಬಾಬು, ಕಾಂಗ್ರೆಸ್ ಮುಖಂಡರಾದ ಜಗದೀಶ್, ಗಿರೀಶ್, ಲವಣ್ಣ, ಯುವರಾಜ್, ವಿನೋದ್‌ಮಖಾನ್ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ