ಬಡವರು, ಕಾರ್ಮಿಕರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಗೋಪಿಕುಮಾರ್: ಟಿ.ವಿ.ಶಿವಶಂಕರಪ್ಪ

KannadaprabhaNewsNetwork |  
Published : Apr 03, 2026, 01:15 AM IST
ಮಾಜಿ ಪುರಸಭಾಧ್ಯಕ್ಷರು  ಟಿ.ಜೆ.ಗೋಪಿಕುಮಾರ್ ಅವರ ಹುಟ್ಟು ಹಬ್ಬ ಆಚರಣೆ | Kannada Prabha

ಸಾರಾಂಶ

ತರೀಕೆರೆಪುರಸಭಾ ಮಾಜಿ ಅಧ್ಯಕ್ಷ ಟಿ.ಜಿ.ಗೋಪಿಕುಮಾರ್ ಬಾಲ್ಯದಿಂದಲೂ ಬಡವರು, ಕಾರ್ಮಿಕರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಸಹಕಾರಿ ರತ್ನಪುರಸ್ಕೃತ ಟಿ.ವಿ.ಶಿವಶಂಕರಪ್ಪ ಹೇಳಿದ್ದಾರೆ.

ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಹುಟ್ಟುಹಬ್ಬ ಆಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪುರಸಭಾ ಮಾಜಿ ಅಧ್ಯಕ್ಷ ಟಿ.ಜಿ.ಗೋಪಿಕುಮಾರ್ ಬಾಲ್ಯದಿಂದಲೂ ಬಡವರು, ಕಾರ್ಮಿಕರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದು ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಸಹಕಾರಿ ರತ್ನ

ಪುರಸ್ಕೃತ ಟಿ.ವಿ.ಶಿವಶಂಕರಪ್ಪ ಹೇಳಿದ್ದಾರೆ.ತರೀಕೆರೆ ಆಟೋ ಚಾಲಕರು ಮತ್ತು ಮಾಲೀಕರು ಸಂಘ, ಸರ್ವಧರ್ಮ ಸಮನ್ವಯ ಬಳಗದಿಂದ ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದ ಬಳಿ ನಡೆದ ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.ಟಿ.ಜಿ.ಗೋಪಿಕುಮಾರ್ ನಮ್ಮ ಸಮೀಪ ಬಂಧುಗಳಾಗಿದ್ದು, ಅವರ ತಂದೆ ಟಿ.ಎಲ್.ಜ್ಞಾನದೇವರಾವ್ ತಮಗೆ ರಾಜಕೀಯ ಸಾಮಾಜಿಕವಾಗಿ ಬಹಳ ಹತ್ತಿರದವರು. ಅವರ ಅಂಚೆ ಕುಟಂಬ ಸಮಾಜಸೇವೆಗೆ ಖ್ಯಾತಿ ಪಡೆದಿದೆ. ತಂದೆಯವರಂತೆ ಟಿ.ಜಿ.ಗೋಪಿಕುಮಾರ್ ಸರಳ ವ್ಯಕ್ತಿ. ದೇವರು ಅವರಿಗೆ ಆರೋಗ್ಯ ಸಂಪತ್ತು ಮತ್ತು ದೀರ್ಘಾಯುಷ್ಯ ಕರುಣಿಸಲಿ ಎಂದು ಶುಭ ಕೋರಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ ಗೋಪಿಕುಮಾರ್ ನನ್ನ ಬಾಲ್ಯ ಗೆಳೆಯರು, ಚಿಕ್ಕಂದಿ ನಿಂದಲೂ ಅವರ ಮುಗ್ದ ಸ್ವಭಾವ ಮತ್ತು ಸರಳತೆ ನನಗೆ ಅತ್ಯಂತ ಇಷ್ಟವಾದ ಗುಣ. ಟಿ.ಎಲ್.ಜ್ಞಾನದೇವರಾವ್ ಅವರ ಅಂಚೆ ಕುಟುಂಬ ತರೀಕೆರೆ ವಿಧಾನಸಭಾ ಕ್ಷೇತ್ರಲ್ಲಿ ಸಾಕಷ್ಟು ಸೇವಾ ಮನೋಭಾವದಿಂದ ಶ್ರಮಿಸುತ್ತಿದೆ. ಅಹಿಂದ ವರ್ಗದ ವರೊಡನೆ ಅವಿನಾಭಾವ ಸಂಭಂದ ಹೊಂದಿದ್ದಾರೆ ಎಂದ ಅವರು, ಜನ್ಮ ದಿನದ ಶುಭಾಷಯ ಕೋರಿದರು.ಸಾಹಿತಿ ಮನಸುಳಿ ಮೋಹನ್ ಕುಮಾರ್ ಶುಭಾಷಯ ಕೋರಿ ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಇಂತಹ ಸಮಾಜ ಸೇವಕರು ಮುಂದೆ ಬರಬೇಕು. ಇಂತಹವರಿಗೆ ಸಾಕಷ್ಟು ಅವಕಾಶ ಸಿಗಬೇಕು, ಭವಿಷ್ಯದಲ್ಲಿ ಅವರಿಗೆ ರಾಜಕೀಯ ಸಾಮಾಜಿಕ ಅವಕಾಶ ಹೆಚ್ಚು ದೊರೆಯವಂತಾಗಲಿ ಎಂದು ಆಶಿಸಿದರು.ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಮತ್ತು ತಮಗೆ ಜನ್ಮ ದಿನದ ಶುಭಕೋರಿ ಆಶೀರ್ವದಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್, ಮುಖಂಡರಾದ ದೋರನಾಳು ಲಿಂಗಮೂರ್ತಿ, ಪುರಸಭಾ ಮಾಜಿ ಉಪಾದ್ಯಕ್ಷ ಟಿ.ಎಲ್.ಕೃಷ್ಣಮೂರ್ತಿ (ಕಿಟ್ಟಯ್ಯ) ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಟಿ.ಎನ್.ಜಗದೀಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್, ವಕೀಲ ಇರ್ಫಾನ್ ಅಹಮದ್ ಬೇಗ್, ಪುರಸಭಾ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ಪತ್ರಕರ್ತ ಎಸ್.ಕೆ.ಸ್ವಾಮಿ ಮತ್ತಿತರರು ಮಾತನಾಡಿದರು. ಪುರಸಭೆ ಸದಸ್ಯರಾದ ಚೇತನ್ ಕರ್ಕು, ಕುಮಾರಪ್ಪ, ಟಿ.ಎಚ್.ಸತ್ಯನಾರಾಯಣ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಆರ್.ನಾಗರಾಜ್, ಸುರೇಶ್, ಜಯ್ಯಣ್ಣ, ಟಿ.ಎಚ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

2ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ನಡೆದ ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಜನ್ಮ ದಿನಾಚರಣೆ ಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಟಿ.ವಿ.ಶಿವಶಂಕರಪ್ಪ, ನಗರ ಕಾಂಗ್ರೆಸ್ ಅದ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ