ಕೆಚ್ಚಲು ಕೊಯ್ಯುವ ಚಿತ್ರವೇ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ : ಮಾಜಿ ಸಂಸದ ಪ್ರತಾಪ ಸಿಂಹ ಗೇಲಿ

KannadaprabhaNewsNetwork |  
Published : Jan 17, 2025, 01:45 AM ISTUpdated : Jan 17, 2025, 10:59 AM IST
3 | Kannada Prabha

ಸಾರಾಂಶ

ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ. ಅವನ ರಕ್ಷಣೆಗೆ ನಿಂತವರ ಮೆದುಳಿನಲ್ಲಿ ಮಾನಸಿಕ ಅಸ್ವಸ್ಥೆ ಇದೆ

 ಮೈಸೂರು : ಸಿದ್ದರಾಮಯ್ಯ ಅವರನ್ನು ಬಲವಂತದಿಂದ ಅಧಿಕಾರದಿಂದ ಕೆಳಗೆ ಇಳಿಸಿದರೆ ಸಿದ್ದರಾಮಯ್ಯ ಕಾಂಗ್ರೆಸ್ ಇಬ್ಭಾಗ ಮಾಡುತ್ತಾರೆ. ಆಗ ಹಸುವಿನ ಕೆಚ್ಚಲು ಕೊಯ್ಯುವ ಸಾಬಿಯ ಚಿತ್ರವನ್ನೇ ಪಕ್ಷದ ಚಿಹ್ನೆ ಮಾಡಿಕೊಳ್ಳುತ್ತಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಗೇಲಿ ಮಾಡಿದರು.

ನಗರದ ಜಲದರ್ಶಿನಿ ಆವರಣದಲ್ಲಿ ಗುರುವಾರ ಗೋಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಜಿ. ಪರಮೇಶ್ವರ್ ಅವರು ಈ ರಾಜ್ಯದ ಅಸಹಾಯಕ ಗೃಹ ಸಚಿವ. ಹಸುವಿನ ಕೆಚ್ಚಲು ಕೊಯ್ದವನು ಮಾನಸಿಕ ಅಸ್ವಸ್ಥ ಅಲ್ಲ. ಅವನ ರಕ್ಷಣೆಗೆ ನಿಂತವರ ಮೆದುಳಿನಲ್ಲಿ ಮಾನಸಿಕ ಅಸ್ವಸ್ಥೆ ಇದೆ ಎಂದು ಕಿಡಿಕಾರಿದರು.

ಹಿಂದೂಗಳ ಭಾವನೆ ಕೆರಳಿಸಲು ಮಾಡಿರುವ ಕೃತ್ಯ ಇದು. ತಾಲಿಬಾನ್ ಆಡಳಿತದ ಲಕ್ಷಣ ಇದು. ದರಿದ್ರ ಕಾಂಗ್ರೆಸ್ ಮೊದಲು ತೊಲಗಬೇಕು. ಹಸುವಿನ ಕೆಚ್ಚಲು ಕೊಯ್ದ ಸಾಬಣ್ಣ ಮಾನಸಿಕ ಅಸ್ವಸ್ತ ಅಲ್ಲ. ಒಬ್ಬ ಹಲಾಲ್ ಕೋರ್ ಸಾಬಿ ಎಂದು ಅವರು ಕಟುವಾಗಿ ಟೀಕಿಸಿದರು.

ಜಮೀರ್ ಅವರೇ ಮೂರು ಹಸು ಖರೀದಿ ಮಾಡಿ ಕೊಟ್ಟ ಕೂಡಲೇ ಎಲ್ಲಾ ಮುಗಿದು ಹೋಯ್ತಾ? ಇವರು ಮನೆಯವರನ್ನು ಕೊಚ್ಚಿ ಅಮೇಲೆ ಪರಿಹಾರ ಕೊಟ್ಟರೆ ಸುಮ್ಮನೆ ಇರುತ್ತಾರಾ ಎಂದು ಪ್ರಶ್ನಿಸಿದ ಅವರು, ನಂಜನಗೂಡಿನಲ್ಲಿ ಗೋಮಾಂಸ ಭಕ್ಷಕರು ಹಸು ಕದಿಯಲು ಬಂದು ಗೋವಿನ ಬಾಲ ಕಟ್ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಗೋ ಪೂಜೆ

ಮೂರು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತರು ಪಶುಸಂಗೋಪನ ಸಚಿವ ಕೆ. ವೆಂಕಟೇಶ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳಿದ್ದಾಗ ಗೈರು ಹಾಜರಾಗಿದ್ದ ಮಾಜಿ ಸಂಸದ ಪ್ರತಾಪ ಸಿಂಹ ಅವರು, ಗುರುವಾರ ತಮ್ಮ ಬೆಂಬಲಿಗರ ಜತೆಗೂಡಿ ಗೋಪೂಜೆ ನೆರವೇರಿಸಿದರು. ಈ ವೇಳೆ ಮುಖಂಡರಾದ ಮೈ.ವಿ. ರವಿಶಂಕರ್, ಪರಮೇಶ್ ಗೌಡ ಮೊದಲಾದವರು ಇದ್ದರು.

PREV