ಕರ್ನಾಟಕ ರಾಜ್ಯದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯ ಕೆಲವೇ ವರ್ಷಗಳಲ್ಲಿ ಭಾರತ ದೇಶದ ಅತಿದೊಡ್ಡ ಸ್ವರ್ಣದೇಗುಲ ಆಗಲಿದೆ ಎಂದು ಬೆಂಗಳೂರಿನ ಆರ್ಯು ಆಶ್ರಮದ ಡಾ.ವಿಶ್ವಸಂತೋಷ ಗುರೂಜೀ ಭವಿಷ್ಯ ನುಡಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕರ್ನಾಟಕ ರಾಜ್ಯದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯ ಕೆಲವೇ ವರ್ಷಗಳಲ್ಲಿ ಭಾರತ ದೇಶದ ಅತಿದೊಡ್ಡ ಸ್ವರ್ಣದೇಗುಲ ಆಗಲಿದೆ ಎಂದು ಬೆಂಗಳೂರಿನ ಆರ್ಯು ಆಶ್ರಮದ ಡಾ.ವಿಶ್ವಸಂತೋಷ ಗುರೂಜೀ ಭವಿಷ್ಯ ನುಡಿದರು.ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಏರ್ಪಡಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಭಾರತ ದೇಶದ ಏಕೈಕ ಬಂಗಾರದ ಲಕ್ಷ್ಮೀ ದೇವಾಲಯ ಅದು ತಮಿಳುನಾಡು ರಾಜ್ಯದಲ್ಲಿದೆ. ಮುಂದೆ ನಮ್ಮ ರಾಜ್ಯದ ಗೊರವನಹಳ್ಳಿ ಕ್ಷೇತ್ರ ಸಹ ಬಂಗಾರದ ಕ್ಷೇತ್ರ ಆಗಲಿದೆ. ಬಂಗಾರ ಎಂದರೆ ಕನಕ ಎಂದರ್ಥ. ಕನಕ ಎಂದರೆ ಮಹಾಲಕ್ಷ್ಮೀ ಎಂಬುದೇ ನಮ್ಮೇಲ್ಲರ ನಂಬಿಕೆ. ಕಮಲಮ್ಮ ತಾಯಿಯ ಭಕ್ತರ ನಂಬಿಕೆ ಎಂದಿಗೂ ಸುಳ್ಳಾಗಲ ಬಿಡುವುದಿಲ್ಲ ಅದು ನಿಜವಾಗಲಿದೆ ಎಂದು ತಿಳಿಸಿದರು.ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಅಧ್ಯಕ್ಷ ವಾಸುದೇವ ಮಾತನಾಡಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ೧೯೮೮ರಲ್ಲಿ ಜಾರಿಗೆ ಬಂದಿದೆ. ಇಂದು ಮಹಾಲಕ್ಷ್ಮೀ ಪುಣ್ಯಕ್ಷೇತ್ರವು ಆಕಾಶದ ಎತ್ತರಕ್ಕೆ ಬೆಳೆದು ನಿಂತಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ೩ದಿನವು ಶ್ರೀಕ್ಷೇತ್ರದಲ್ಲಿ ಹಬ್ಬದ ವಾತವರಣ ಇರಲಿದೆ ಎಂದು ಹೇಳಿದರು.ಗೊರವನಹಳ್ಳಿ ಶ್ರೀಕ್ಷೇತ್ರದ ಗಾಯಕಿ ಶ್ರೀಲಕ್ಷ್ಮೀಪ್ರಸಾದ್ ಮಾತನಾಡಿ, ಕಮಲಮ್ಮ ನೆಲೆಸಿ ಬೆಳೆಸಿದ ಶ್ರೀಕ್ಷೇತ್ರವು ಇಂದು ರಾಜ್ಯ ಸೇರಿದಂತೆ ದೇಶದಲ್ಲೇ ಪ್ರಖ್ಯಾತ ಪಡೆದಿದೆ. ಮಹಾಲಕ್ಷ್ಮೀ ದರ್ಶನ ಪಡೆಯುವ ಪ್ರತಿಯೊಬ್ಬರು ಅಜ್ಜಿಯ ಬೃಂದಾವನಕ್ಕೆ ಭೇಟಿ ನೀಡಿ ದರ್ಶನ ಪಡೆಯುವುದು ವಾಡಿಕೆ. ವರಮಹಾಲಕ್ಷ್ಮೀ ಹಬ್ಬದ ದೇವಿಯ ದರ್ಶನ ಪಡೆಯುವ ಎಲ್ಲರಿಗೂ ಶುಭವಾಗಲಿ ಎಂದರು.ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಟ್ರಸ್ಟ್ ಕಾರ್ಯದರ್ಶಿ ಮುರುಳಿಕೃಷ್ಣ, ಖಜಾಂಚಿ ಜಗದೀಶ್, ಧರ್ಮದರ್ಶಿ ಡಾ.ಲಕ್ಷ್ಮೀಕಾಂತ, ನಟರಾಜು, ಶ್ರೀಪ್ರಸಾದ್, ರವಿರಾಜೇ ಅರಸ್, ಮಂಜುನಾಥ, ಓಂಕಾರೇಶ್, ಚಿಕ್ಕನರಸಯ್ಯ, ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ನಾಗರಾಜು, ವಿಶೇಷ ಅಧಿಕಾರಿ ಕೇಶವಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಯ್ಯ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.