ಮದ್ಯದ ದರ ಏರಿಕೆ ನಿರ್ಧಾರಕ್ಕೆ ಸರ್ಕಾರ ಬ್ರೇಕ್‌

KannadaprabhaNewsNetwork |  
Published : Jun 30, 2024, 12:50 AM IST
ಮದ್ಯ  | Kannada Prabha

ಸಾರಾಂಶ

ಮದ್ಯದ ದರ ಏರಿಕೆ ನಿರ್ಧಾರಕ್ಕೆ ಸರ್ಕಾರ ಹಿಂದೇಟು ಹಾಕಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ‘ಪ್ಯಾಕೇಟ್ ಹಾಲು’ ದರ ಹಾಗೂ ಪ್ರಮಾಣ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಈಗ ‘ಆಲ್ಕೋಹಾಲು’ ದರ ಹೆಚ್ಚಳಕ್ಕೆ ಬ್ರೇಕ್‌ ಹಾಕಿದೆ. ಜು.1 ರಿಂದಲೇ ಮದ್ಯದ ದರಗಳನ್ನು ಪರಿಷ್ಕರಿಸಲು ಮುಂದಾಗಿದ್ದ ಅದು, ಇದೀಗ 1 ತಿಂಗಳ ಮಟ್ಟಿಗೆ ‘ವಿಳಂಬ’ ಧೋರಣೆ ಅನುಸರಿಸಲು ಮುಂದಾಗಿದೆ. ಇದರಿಂದಾಗಿ ಕಡಿಮೆ ದರದ ಮದ್ಯಗಳ ಬೆಲೆ ಹೆಚ್ಚಳ 1 ತಿಂಗಳು ತಡವಾಗಲಿದೆ.

ಜು.1 ರಿಂದ ಅನ್ವಯವಾಗುವಂತೆ ಮದ್ಯದ ದರ ಪರಿಷ್ಕರಣೆ ನಡೆಸಲಾಗುವುದು ಎಂದು ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ತಿಂಗಳ ಮಟ್ಟಿಗೆ ದರ ಪರಿಷ್ಕರಣೆ ಮಾಡದೆ, ಯಥಾಸ್ಥಿತಿ ಮುಂದುವರೆಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ಆ.1 ರಿಂದ ಪರಿಷ್ಕೃತ ದರಗಳು ಜಾರಿಯಾಗಲಿವೆ.

ಅಬಕಾರಿ ಇಲಾಖೆಯಲ್ಲಿ ರಾಜಸ್ವ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನೆರೆ ಹೊರೆಯ ರಾಜ್ಯಗಳ ಮದ್ಯದ ದರಕ್ಕೆ ಹೋಲಿಸಿ ನಮ್ಮಲ್ಲೂ ದರ ಪರಿಷ್ಕರಣೆ’ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದರು. ಅಕ್ಕಪಕ್ಕದ ರಾಜ್ಯಗಳಲ್ಲಿ ‘ಬಡವ’ರು ಸೇವಿಸುವ ಮದ್ಯದ ದರಗಳು ಅಧಿಕವಾಗಿವೆ. ಆದರೆ ದುಬಾರಿ ಬೆಲೆಯ ಮದ್ಯಗಳ ದರ ಕರ್ನಾಟಕಕ್ಕಿಂತಲೂ ಸ್ವಲ್ಪ ಕಡಿಮೆಯಿದೆ. ಆದ್ದರಿಂದ ಸರಾಸರಿಗೆ ಅನುಗುಣವಾಗಿ ಮದ್ಯದ ದರ ಪರಿಷ್ಕರಣೆ ನಡೆಸಲು ಸರ್ಕಾರ ಮುಂದಾಗಿತ್ತು.

ರಾಜ್ಯದಲ್ಲಿ ಕಡಿಮೆ ದರದ ಮದ್ಯದ ಮಾರಾಟ ಪ್ರಮಾಣ ಹೆಚ್ಚಾಗಿರುವುದರಿಂದ ಈ ಮದ್ಯದ ದರ ಸ್ವಲ್ಪ ಹೆಚ್ಚಳವಾದರೂ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳೂ ನೂರಾರು ಕೋಟಿ ರು. ಆದಾಯ ‘ಹರಿದು’ ಬರುತ್ತದೆ. ಈ ಹಿನ್ನೆಲೆಯಲ್ಲೇ ನೆರೆಹೊರೆಯ ರಾಜ್ಯಗಳ ಸರಾಸರಿಯಂತೆ ಮದ್ಯದ ದರ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ