ಕನ್ನಡಪ್ರಭ ವಾರ್ತೆ ಪಾವಗಡ
ಈ ಕುರಿತು ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಮಹಿಳೆ ಗಂಗಮ್ಮ ಮಾತನಾಡಿ, ಶೈಲಾಪುರ ಗ್ರಾಮದ ವಾಸಿಯಾದ ನಾನು ಗರ್ಭಕೋಶದ ಸಮಸ್ಯೆಯಿಂದ ಕಳೆದ 2023ರ ಡಿಸೆಂಬರ್ 12ರಂದು ಪಾವಗಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಈ ವೇಳೆ ಹೆರಿಗೆ ವಿಭಾಗದ ವೈದ್ಯೆ ಡಾ.ಪೂಜಾ ನನ್ನನ್ನು ಪರೀಕ್ಷಿಸಿದ್ದು, ತೀವ್ರ ಸಮಸ್ಯೆಯಿದೆ. ಕೂಡಲೇ ಗರ್ಭಕೋಶದ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ.
ವೈದ್ಯೆಯ ಸಲಹೆ ಮೇರೆಗೆ ಒಪ್ಪಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಾಯಿತು. ಈ ವೇಳೆ ಬಡವರೆಂದು ಉದಾಸೀನತೆ ತೋರಿ ಶಸ್ತ್ರಚಿಕಿತ್ಸೆಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಮೂತ್ರಪಿಂಡದಲ್ಲಿ ಸಮಸ್ಯೆ ಉಲ್ಬಣವಾಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ತೀವ್ರ ನೋವು ಕಾಣಿಸಿಕೊಂಡಿತ್ತು,ಮರುದಿನ ಸರ್ಕಾರಿ ಆಸ್ಪತ್ರೆಯ ಪರೀಕ್ಷಿಸಿದ್ದ ಡಾ.ಪೂಜಾರವರನ್ನು ಭೇಟಿಯಾಗಿ ಹೊಟ್ಟೆನೋವಿನ ಸಮಸ್ಯೆಯ ಬಗ್ಗೆ ವಿವರಿಸಲಾಯಿತು. ಮತ್ತೆ ಪರೀಕ್ಷಿಸಿದ ಡಾ,ಪೂಜಾ, ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಅಪಾಯವಿದೆ ಎಂದು ಸೂಚಿಸಿ, ಸಲಹೆ ನೀಡಿದ ಮೇರೆಗೆ ತುರ್ತುವಾಹನದಲ್ಲಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದೆ.
ತಾಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮೀನಗುಂಟೆನಹಳ್ಳಿ ನರಸಿಂಹಪ್ಪ ಮಾತನಾಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ.ಪೂಜಾರ ನಿರ್ಲಕ್ಷ್ಯದಿಂದ ಬಡ ಮಹಿಳೆಯೊಬ್ಬರ ಗರ್ಭಕೋಶದ ಶಸ್ತ್ರಚಿಕಿತ್ಸೆ ಯಶಸ್ಸು ಕಾಣದೇ ಪದೇ ಪದೇ ಮೂತ್ರಪಿಂಡದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸ್ಥಿತಿ ಎದುರಾಗಿದೆ. ಈಗ ತೊಂದರೆಯಲ್ಲಿರುವ ಆಕೆಯನ್ನು ರಕ್ಷಿಸುವವರು ಯಾರು ಎಂದು ಪ್ರಶ್ನಿಸಿದರು.
ತಾಲೂಕು ಜೆಡಿಎಸ್ ರೈತ ಘಟಕದ ಅದ್ಯಕ್ಷ ಗಂಗಾಧರ್ ನಾಯ್ಡು ಮಾತನಾಡಿ, ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಶಸ್ತ್ರ ಚಿಕಿತ್ಸೆ ನಿರ್ವಹಿಸುವ ವೇಳೆ ರೋಗಿಯ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವೈದ್ಯರ ನಿರ್ಲಕ್ಷ್ಯದಿಂದ ಈ ಬಡ ಮಹಿಳೆಯ ಪ್ರಾಣಕ್ಕೆ ಅಪಾಯ ಬಂದೊದಗಿದೆ, ಇವರ ಅಳಲು ಕೇಳುವವರು ಯಾರು? ಇದಕ್ಕೆಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರೇ ಹೊಣೆಗಾರರಾಗಲಿದ್ದಾರೆಂದು ಅವರು ಆರೋಪಿಸಿದ್ದಾರೆ.ದಲಿತ ಮುಖಂಡ ಬ್ಯಾಡನೂರು ಉಗ್ರಪ್ಪ, ತಿಮ್ಮಯ್ಯ ಮತ್ತಿತರ ಮುಖಂಡರಿದ್ದರು.
-------------------