ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಫಲಿತಾಂಶ ಪ್ರಕಟ

KannadaprabhaNewsNetwork | Published : Oct 29, 2024 1:01 AM

ಸಾರಾಂಶ

ಶ್ರೀರಂಗಪಟ್ಟಣ ತಾಲೂಕು ಮಟ್ಟದ ಸುಮಾರು 29 ಇಲಾಖೆಯಿಂದ 33 ಮಂದಿ ನಿರ್ದೇಶಕರ ಆಯ್ಕೆಗೆ ಚುನಾವಣೆ ಘೋಷಣೆಯಾಗಿ ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ನ್ಯಾಯಾಲಯ ಇಲಾಖೆಗಳ ನಿರ್ದೇಶಕರ ಆಯ್ಕೆಗೆ ಹೊರತು ಪಡಿಸಿ ಉಳಿದಂತೆ ಎಲ್ಲಾ ಇಲಾಖೆಯಿಂದ ಈಗಾಗಲೇ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಗುರುಭವನ ಸರ್ಕಾರಿ ಪ್ರಾಥಮಿಕ ಶಾಲೆಯ ತರಗತಿ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.

ಶ್ರೀರಂಗಪಟ್ಟಣ ತಾಲೂಕು ಮಟ್ಟದ ಸುಮಾರು 29 ಇಲಾಖೆಯಿಂದ 33 ಮಂದಿ ನಿರ್ದೇಶಕರ ಆಯ್ಕೆಗೆ ಚುನಾವಣೆ ಘೋಷಣೆಯಾಗಿ ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ನ್ಯಾಯಾಲಯ ಇಲಾಖೆಗಳ ನಿರ್ದೇಶಕರ ಆಯ್ಕೆಗೆ ಹೊರತು ಪಡಿಸಿ ಉಳಿದಂತೆ ಎಲ್ಲಾ ಇಲಾಖೆಯಿಂದ ಈಗಾಗಲೇ ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದರು.

ಅದರೂ, ಸರ್ಕಾರಿ ನೌಕರರಾಗಿದ್ದರೂ ಚುನಾವಣೆ ಮಾತ್ರ ರಾಜಕೀಯ ವ್ಯಕ್ತಿಗಳಂತೆ ಎರಡು ಪಕ್ಷಗಳಂತೆ ಜಿದ್ದಾಜಿದ್ದಿನಿಂದ ಚುನಾವಣೆ ನಡೆದು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು.

ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರಾಥಮಿಕ ಶಿಕ್ಷಕರ ವಿಭಾಗದಲ್ಲಿ ಬೆಳಗೊಳ ಹಿರಿಯ ಪ್ರಾಥಮಿಕ ಶಾಲೆಯ ಚಂದ್ರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಅರಕೆರೆ ಕೆಪಿಎಸ್ ಶಾಲಾ ಶಿಕ್ಷಕ ಡಿ.ಎನ್ ಲೋಕೇಶ್ ಹಾಗೂ ಕೆಆರ್‌ ಸಾಗರದ ಪ್ರಾಥಮಿಕ ಶಾಲಾ ಶಿಕ್ಷಕರ ಮಹೇಶ್, ನ್ಯಾಯಾಂಗ ಇಲಾಖೆಯಿಂದ ಪ್ರವೀಣ್ ಕುಮಾರ್ ಎಚ್.ಎಸ್ ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರ ವತಿಯಿಂದ ನಗುವನಹಳ್ಳಿ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಸುರೇಶ್.ಸಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಜಯ್ ಕುಮಾರ್ ತಿಳಿಸಿದರು.

ಉಳಿದಂತೆ ಪ್ರೌಢಶಾಲಾ ವಿಭಾಗದಿಂದ ಶ್ರೀನಿವಾಸ್ ಹಾಗೂ ಮಂಚೇಗೌಡ, ತಾಂತ್ರಿಕ ಶಿಕ್ಷಣದಿಂದ ತಿಮ್ಮೇಗೌಡ, ಲೋಕೋಪಯೋಗಿ ಇಲಾಖೆಯಿಂದ ಮುದ್ದೇಗೌಡ, ಜಿಲ್ಲಾ ಪಂಚಾಯ್ತಿ ನಾರಾಯಣ, ಭೂಮಾಪನ ಇಲಾಖೆಯಿಂದ ರವಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಶಶಿಕಲಾ ಹಾಗೂ ಶಿವಕುಮಾರ್, ಖಜಾನೆ ಇಲಾಖೆಯಿಂದ ಬೀರಪ್ಪ, ಅರಣ್ಯ ಇಲಾಖೆಯಿಂದ ನಾಗರಾಜು, ಕಾರ್ಮಿಕ ಇಲಾಖೆಯಿಂದ ಹೇಮಚಂದ್ರ ಆಯ್ಕೆಯಾದರು.

ಕೃಷಿ ಇಲಾಖೆಯಿಂದ ರಾಮೇಗೌಡ ಹಾಗೂ ನಾಗೇಂದ್ರ, ಸಮಾಜ ಕಲ್ಯಾಣ ಇಲಾಖೆಯಿಂದ ಮಧುಕುಮಾರ್, ಸಹಕಾರ ಇಲಾಖೆಯಿಂದ ಪಾರ್ವತಮ್ಮ, ಪಶು ಪಾಲನೆ ಇಲಾಖೆಯಿಂದ ಡಾ.ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪ್ರದೀಪ್ ಕುಮಾರ್, ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಪುಷ್ಪವತಿ, ತಾಲೂಕು ಕಚೇರಿ ವತಿಯಿಂದ ಶ್ರೀಧರ್ ಹಾಗೂ ಪುಟ್ಟಸ್ವಾಮಿ, ತೋಟಗಾರಿಕೆ ಇಲಾಖೆಯಿಂದ ತಿಮ್ಮೇಗೌಡ, ವೆಂಕಟೇಶ್, ಅಬಕಾರಿ ಇಲಾಖೆಯಿಂದ ಯೋಗೇಶ್, ಆರೋಗ್ಯ ಇಲಾಖೆಯಿಂದ ಬೆನ್ನೂರ, ಲೋಕೇಶ್ ಕುಮಾರ್, ರಾಜು ಹಾಗೂ ಗಿರಿಜಾ, ಬಿಸಿಎಂ ಇಲಾಖೆಯಿಂದ ಜ್ಯೋತಿಪ್ರಕಾಶ್ ಹಾಗೂ ತಾಂತ್ರಿಕ ಶಿಕ್ಷಣ ಮಧು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಾಯಕ ಚುನಾವಣೆ ಅಧಿಕಾರಿಯಾಗಿ ಮಲ್ಲೇಶ್ ಕಾರ್ಯ ನಿರ್ವಹಿಸಿದ್ದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಶ್ರೀನಿವಾಸ್, ಕಾರ್ಯದರ್ಶಿ ತಿಮ್ಮೇಗೌಡ, ಜಿಲ್ಲಾ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಚೆನ್ನಕೃಷ್ಣಯ್ಯ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ ರಮೇಶ್, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮು, ಶಿಕ್ಷಕರಾದ ಶ್ರೀನಿವಾಸ ಚಾರಿ, ಕೃಷ್ಣಪ್ಪ, ಮಂಜುಳಾ, ವಾಣಿ ಸೇರಿದಂತೆ ಇತರರು ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಿದರು.

Share this article