ಕನ್ನಡಪ್ರಭ ವಾರ್ತೆ, ತುಮಕೂರುಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆದಿರುವುದು ಮತಾಂತರಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ತಮ್ಮ ದೇ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆಯುತ್ತಿದ್ದಾರೆ. ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು ಎಂದ ರಾಜಣ್ಣ ಮತಾಂತರಕ್ಕೆ ನಾವೇ ಪ್ರೋತ್ಸಾಹ ಮಾಡಿದಂತಾಗುತ್ತದೆ ಎಂದರು. ಕೆಲವರು ಕ್ರಿಶ್ಚಿಯನ್ ಕಮ್ಯೂನಿಟಿಗೆ ಹೋಗುತ್ತಾರೆ. ಆದರೆ ಒರಿಜನಲ್ ಜಾತಿಯ ಬೆನಿಫಿಟ್ ತೆಗೆದುಕೊಳ್ಳುತ್ತಾರೆ. ನಾನು ನಾಯಕ ಸಮುದಾಯದವನು ಕ್ರಿಶ್ಚಿಯನ್ ಗೆ ಹೋದರೆ ನಾಯಕ ಜಾತಿಯ ಬೆನಿಫಿಟ್ ತೆಗೆದುಕೊಳ್ಳಬಾರದು ಎಂದರು. ಬಸವಣ್ಣನವರು ಲಿಂಗ ಕಟ್ಟಿಕೊಟ್ಟುವ ಮೊದಲು ಅವರ ಪೂರ್ವಜರು ಯಾವ ಜಾತಿಯಲ್ಲಿದ್ದರು ಅಂತಾ ಗೊತ್ತು. ಲಿಂಗ ಕಟ್ಟಿದ ಮೇಲೆ ಲಿಂಗಾಯತ ಆಗಿದ್ದಾರೆ ಎಂದರು. ವಿರಕ್ತಮಠ ಬಸವಣ್ಣನ ಅನುಯಾಯಿಗಳದ್ದು, ನಾವೇನಾದರೂ ಬೇರೆ ಮಾತನಾಡಿದರೆ ಏನು ಧರ್ಮದ ಬಗ್ಗೆ ಮಾತನಾಡುತ್ತಾರೆ ಅಂತಾರೆ. ಅದಕ್ಕೆ ನಾವೇನು ಹೇಳುವುದಿಲ್ಲ ಎಂದರು. ಒಂದು ಕಡೆ ಹಿಂದೂ ಬರಿಬೇಕು ಅಂತಾರೆ, ಇನ್ನೊಂದೆಡೆ ಹಿಂದೂ ಧರ್ಮ ಬರಿ ಬೇಡಿ ಅಂತಾರೆ. ಅಲ್ಲದೇ ನಮ್ಮದೇ ವೀರಶೈವ, ಲಿಂಗಾಯತ ಧರ್ಮ ಇದೆ ಅಂತಾರೆ. ಅದು ಅವರವರ ಅನಿಸಿಕೆಗಳು ಎಂದರು.