ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಜ್ಯಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Nov 28, 2025, 01:15 AM IST
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್. ಶಾಲಿನಿ, ಸಾಂಸ್ಕೃತಿಕ ಸ್ಪರ್ಧೆಯ ಅಂಗವಾಗಿ ವಿಜ್ಞಾನ ಮಾದರಿಯನ್ನು ಪ್ರಸ್ತುತಪಡಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. | Kannada Prabha

ಸಾರಾಂಶ

ಪ್ರಾಂಶುಪಾಲ ಪರಮಶಿವಪ್ಪ ಅವರು ಮಾಧ್ಯಮದೊಂದಿಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಒದಗಿಸಿದಾಗ ಮಾತ್ರ ಅವರಲ್ಲಿರುವ ಪ್ರತಿಭೆ ಅರಳಲು ಸಾಧ್ಯ. ನಮ್ಮ ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದವಿದ್ದು, ಸಮಾಜಕ್ಕೆ ಪ್ರತಿಭಾವಂತರನ್ನು ನೀಡುವಲ್ಲಿ ನಾವು ವಿಶೇಷ ಕಾಳಜಿ ವಹಿಸಿದ್ದೇವೆ. ಪೋಷಕರು ಮತ್ತು ಸಮುದಾಯದ ನಿರೀಕ್ಷೆಯಂತೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಮುಖ್ಯ ಉದ್ದೇಶ. ರಾಜ್ಯಮಟ್ಟದಲ್ಲಿ ಸ್ಪರ್ಧೆಗಿಳಿಯುತ್ತಿರುವ ನಮ್ಮ ವಿದ್ಯಾರ್ಥಿನಿಯ ಸಾಧನೆ ಕಾಲೇಜಿಗೆ ಹೆಮ್ಮೆ ತರಿಸಿದೆ ಎಂದು ಹೇಳಿದರು.

ಅರಸೀಕೆರೆ: ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್. ಶಾಲಿನಿ, ಸಾಂಸ್ಕೃತಿಕ ಸ್ಪರ್ಧೆಯ ಅಂಗವಾಗಿ ವಿಜ್ಞಾನ ಮಾದರಿಯನ್ನು ಪ್ರಸ್ತುತಪಡಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.ಈ ಸಾಧನೆಗೆ ಮಾರ್ಗದರ್ಶಕರಾಗಿದ್ದ ಗಣಿತ ಉಪನ್ಯಾಸಕ ಹಾಗೂ ಎನ್‌ಎಸ್‌ಎಸ್ ಅಧಿಕಾರಿ ಡಿ.ಬಿ. ಮೋಹನ್ ಕುಮಾರ್ ಜೊತೆಗೆ ವಿದ್ಯಾರ್ಥಿ ಅಶ್ವಿನಿ ಅವರಿಗೆ, ಕಾಲೇಜಿನ ಪ್ರಾಂಶುಪಾಲ ಪರಮಶಿವಪ್ಪ ಹಾಗೂ ಬೋಧಕ ವೃಂದ ಅಭಿನಂದನೆ ಸಲ್ಲಿಸಿದರು.ಪ್ರಾಂಶುಪಾಲ ಪರಮಶಿವಪ್ಪ ಅವರು ಮಾಧ್ಯಮದೊಂದಿಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಒದಗಿಸಿದಾಗ ಮಾತ್ರ ಅವರಲ್ಲಿರುವ ಪ್ರತಿಭೆ ಅರಳಲು ಸಾಧ್ಯ. ನಮ್ಮ ಕಾಲೇಜಿನಲ್ಲಿ ಉತ್ತಮ ಬೋಧಕ ವೃಂದವಿದ್ದು, ಸಮಾಜಕ್ಕೆ ಪ್ರತಿಭಾವಂತರನ್ನು ನೀಡುವಲ್ಲಿ ನಾವು ವಿಶೇಷ ಕಾಳಜಿ ವಹಿಸಿದ್ದೇವೆ. ಪೋಷಕರು ಮತ್ತು ಸಮುದಾಯದ ನಿರೀಕ್ಷೆಯಂತೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಮುಖ್ಯ ಉದ್ದೇಶ. ರಾಜ್ಯಮಟ್ಟದಲ್ಲಿ ಸ್ಪರ್ಧೆಗಿಳಿಯುತ್ತಿರುವ ನಮ್ಮ ವಿದ್ಯಾರ್ಥಿನಿಯ ಸಾಧನೆ ಕಾಲೇಜಿಗೆ ಹೆಮ್ಮೆ ತರಿಸಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌