ಹುಬ್ಬಳ್ಳಿ:
ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಠಾಣೆ ಮುಚ್ಚಿಬಿಡಿ:ಅಂಜಲಿ ಹತ್ಯೆ ಯಾವುದೋ ಕಾಡಿನಲ್ಲಿ ಆಗಿಲ್ಲ, ಜನನಿಭಿಡ ಪ್ರದೇಶವಾಗಿರುವ ನಗರದಲ್ಲಿ. ಅದೂ ಜನಸಾಮಾನ್ಯರು ಇರುವಂತಹ ಪ್ರದೇಶದಲ್ಲಿ ನಡೆದಿದೆ. ನೇಹಾ ಹತ್ಯೆಯಾಗಿ ಇನ್ನೂ ತಿಂಗಳು ಕಳೆದಿಲ್ಲ. ಅದೇ ರೀತಿಯಾಗಿ ಅಂಜಲಿ ಹತ್ಯೆಯಾಗಿದೆ. ಎರಡು ಘಟನೆಗಳಿಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆ ಹೊರಬೇಕು. ಇಲ್ಲಿ ಪೊಲೀಸ್ ಠಾಣೆ ಇದ್ದು ಏನು ಉಪಯೋಗ, ಕೂಡಲೇ ಅದನ್ನು ಮುಚ್ಚಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆದರಿಕೆ ಕುರಿತು ಠಾಣೆಗೆ ಹೋಗಿ ದೂರು ಕೊಟ್ಟರೂ ಏನು ಮಾಡದೇ ಇರುವ ಪೊಲೀಸರು ಏಕೆ ಬೇಕು?. ಸಾವಿರಾರು ಜನ ಪೊಲೀಸರು ಇದ್ದರೂ ಏನು ಉಪಯೋಗ? ನಿಮಗೆ ಏಕೆ ಸಂಬಳ ಕೊಡಬೇಕು? ಎಂದು ಪ್ರಶ್ನಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾರಿಕೆ ಉತ್ತರ ನೀಡುವುದನ್ನು ಕೈಬಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದರು.
ಈ ಕೂಡಲೇ ಸರ್ಕಾರ ಅಂಜಲಿ ಕುಟುಂಬಕ್ಕೆ ಒಂದು ಸರ್ಕಾರಿ ನೌಕರಿ ಕೊಡಬೇಕು, ಸ್ವಂತ ಮನೆ ಮಂಜೂರು ಮಾಡಬೇಕು, ಮನೆ ನಡೆಸಲು ₹ 50 ಲಕ್ಷ ಪರಿಹಾರ ನೀಡಬೇಕು. ನೇಹಾ ಕುಟುಂಬಕ್ಕೂ 24 ಗಂಟೆಯೊಳಗಾಗಿ ಸೂಕ್ತ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ರವಿಕುಮಾರ ಎಚ್ಚರಿಕೆ ನೀಡಿದರು.