ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಚಾತುರ್ಮಾಸ ಕಾರ್ಯಕ್ರಮ ಇಂದಿನಿಂದ ಪ್ರಾರಂಭವಾಗುತ್ತದೆ. ಈ ಪವಿತ್ರ ದಿನ ಇಲ್ಲಿಗೆ ಬರಬೇಕು. ಪೂಜ್ಯರ ವಿಗ್ರಹ ದರ್ಶನ ಮಾಡಲು ಬಂದಿದ್ದೆ. ಈ ಐತಿಹಾಸಿಕ ಮಠದಲ್ಲಿ ಅದ್ಭುತವಾದ ಕಲೆ ನೋಡಲು ಸಾಧ್ಯವಾಗುತ್ತದೆ. ಒಂದು ಸಾವಿರ ವರ್ಷಗಳ ಹಿಂದೆ ಕಲಾಕೃತಿಗಳು, ಕಲೆ ಈ ಮಠದಲ್ಲಿವೆ ಎಂದು ಎಂದು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.ತಾಲೂಕಿನ, ಶ್ರವಣಬೆಳಗೊಳದಲ್ಲಿ ಮಾತನಾಡಿದ ಅವರು, ಇಲ್ಲಿನ ಕಲೆಗಳನ್ನು, ಬಣ್ಣವನ್ನು ರಕ್ಷಿಸಬೇಕು ಎನ್ನುವುದು ಸರ್ಕಾರದ ಬಲವಾದ ಇಚ್ಛೆ. ಅದಕ್ಕೇನಾದರೂ ಖರ್ಚಾದರೂ ಪರ್ವಾಗಿಲ್ಲ. ಸ್ವಾಮೀಜಿಯವರು ಅವುಗಳನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ಕೊಟ್ಟರೆ ಅವನ್ನ ಪ್ರೊಟೆಕ್ಟೆಡ್ ಪೈಂಟ್ಸ್ ಅಂತ ಮಾಡಲು ನಾವು ಪ್ರಯತ್ನ ಮಾಡುತ್ತೇವೆ ಇಲ್ಲವಾದರೆ ಅವನ್ನು ಪ್ರೊಟೆಕ್ಟ್ ಹೇಗೆ ಮಾಡಬಹುದು ಎಂದು ಯೋಜನೆ ಮಾಡಿ, ಆ ಯೋಜನೆ ಅನುಷ್ಠಾನ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಈ ಕ್ಷೇತ್ರಕ್ಕೆ ಬಂದರೆ ಧನ್ಯತಾ ಭಾವ ಬರುತ್ತದೆ. ಬಾಹುಬಲಿ ದರ್ಶನ, ಮುನಿಗಳ ದರ್ಶನ, ತಾಯಿಯ ದರ್ಶನ ಮಾಡಿದ್ದೇನೆ. ಸಹಜವಾಗಿ ಶ್ರವಣಬೆಳಗೊಳದ ಐತಿಹಾಯ ಪ್ರತಿಮೆ, ಪುತ್ಥಳಿ, ವಿಗ್ರಹ, ಬಾಹುಬಲಿಯ ಅದ್ಭುತವಾದ, ಪವಿತ್ರವಾದ ಶಿಲೆಯ ಕಾರಣ ಜಗತ್ತಿನಲ್ಲೇ ಪ್ರಸಿದ್ಧವಾಗಿದೆ. ಶ್ರವಣಬೆಳಗೊಳದಿಂದ ಕರ್ನಾಟಕದ ಕೀರ್ತಿಯೂ ಹೆಚ್ಚಾಗಿದೆ. ವರ್ಣಚಿತ್ರಗಳನ್ನ ರಕ್ಷಣೆ ಮಾಡುವ ಕೆಲಸ ಈಗಾಗಲೇ ನೂರು ವರ್ಷಗಳಿಂದಲೇ ಪ್ರಾರಂಭ ಆಗಬಹುದಿತ್ತು. ಪರ್ವಾಗಿಲ್ಲ ನಾವು ಈಗ ಎಚ್ಚೆತ್ತುಕೊಂಡಿದ್ದೇವೆ. ಇವತ್ತಿನಿಂದ ಅದರ ರಕ್ಷಣೆ ಕೆಲಸದ ಬಗ್ಗೆ ನಾವು ನಮ್ಮ ಹೆಜ್ಜೆಗಳನ್ನು ಹಾಕುತ್ತೇವೆ. ಈ ವರ್ಣಚಿತ್ರಗಳು ಒಂದು ಸಾವಿರ ವರ್ಷಗಳ ಹಳೆಯದು. ಒಂದು ಸಾವಿರ ವರ್ಷಗಳ ಹಿಂದೆ ಉಪಯೋಗ ಮಾಡಿರುವ ಬಣ್ಣ ಎಂತಹ ಬಣ್ಣ ಇರಬೇಕು. ಈಗ ಬಣ್ಣ ಹಚ್ಚುತ್ತೇವೆ, ಹದಿನೈದು, ಇಪ್ಪತ್ತು, ಮೂವತ್ತು ವರ್ಷ, ನೂರು ವರ್ಷದ ಮೇಲೆ ಅಂಗೈ ಬಣ್ಣ ಅಂತಹದ್ದು ಏನೇನು ಇಲ್ಲ. ಅಂತಹದ್ದರೊಳಗೆ ಯಾವ ತರಹದ ಬಣ್ಣ ಉಪಯೋಗಿಸಿದ್ದಾರೆ ಎಂಬುದನ್ನು ಗಂಭೀರವಾಗಿ ಗಮನಿಸಬೇಕಿದೆ. ಅಂತಹ ಆಶ್ಚರ್ಯಕರವಾದ ವರ್ಣ ಚಿತ್ರವನ್ನು ಕಾಪಾಡಲು ಏನು ಬೇಕು ಅದಕ್ಕೆ ಸಹಕಾರ ಮಾಡುತ್ತೇವೆ. ಈಗಾಗಲೇ ಶಾಸಕರು ಹೇಳಿದ್ದಾರೆ, ಡಿ.ಸುಧಾರಕ್ ಅವರು ವಿಶೇಷವಾದ ಒತ್ತಾಯ ಮಾಡಿದ್ದಾರೆ. ಸರ್ಕಾರ ಸ್ವಾಮೀಜಿಯವರ ಜೊತೆ ಮಾತನಾಡಿ ಹೆಜ್ಜೆ ಇಡಲಿದ್ದೇವೆ ಎಂದರು.