ಸಮುದಾಯ ಸಹಕಾರದಿಂದ ಸರ್ಕಾರಿ ಶಾಲೆ ಪ್ರಗತಿ

KannadaprabhaNewsNetwork |  
Published : Jun 13, 2025, 05:00 AM IST
೧೨ತಾಂಬಾ೧ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ತಾಂಬಾ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ಕಾರ ಮಾತ್ರವಲ್ಲದೆ ಸಮುದಾಯ ಕೂಡ ಸಹಕಾರ ನೀಡಿದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎಂಬುದಕ್ಕೆ ತಾಂಬಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯೇ ಸಾಕ್ಷಿ. ಅರ್ಥಿಕವಾಗಿ ಹಿಂದುಳಿದಿರುವ ಬಡ ಮಕ್ಕಳನ್ನು ಪ್ರೋತ್ಸಾಹಿಸಬೇಕಾಗಿದೆ. ಓದಿಸುವ ಕೆಲಸಕ್ಕೆ ನಾವೆಲ್ಲರೂ ಮುಂದಾದರೆ ಖಂಡಿತವಾಗಿಯೂ ಅವರ ಬದುಕು ಹಸನಾಗುತ್ತದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಂಬಾ

ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ಕಾರ ಮಾತ್ರವಲ್ಲದೆ ಸಮುದಾಯ ಕೂಡ ಸಹಕಾರ ನೀಡಿದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎಂಬುದಕ್ಕೆ ತಾಂಬಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯೇ ಸಾಕ್ಷಿ. ಅರ್ಥಿಕವಾಗಿ ಹಿಂದುಳಿದಿರುವ ಬಡ ಮಕ್ಕಳನ್ನು ಪ್ರೋತ್ಸಾಹಿಸಬೇಕಾಗಿದೆ. ಓದಿಸುವ ಕೆಲಸಕ್ಕೆ ನಾವೆಲ್ಲರೂ ಮುಂದಾದರೆ ಖಂಡಿತವಾಗಿಯೂ ಅವರ ಬದುಕು ಹಸನಾಗುತ್ತದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು. ತಾಂಬಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಮೂರು ಕೋಣೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಿಕ್ಷಕರಾಗಬೇಕೆಂದರೆ ಅವರು ಎಲ್ಲಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹೆಮ್ಮರವಾಗಿ ಬೆಳೆಯಲು ಈ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಶಿಕ್ಷಕರ ಶ್ರಮವೇ ಕಾರಣ. ಅನೇಕ ಭಾಗಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳು ಇನ್ನು ಬೆಳವಣಿಗೆಯಾಗಬೇಕಾಗಿತ್ತು ಎಂದರು.ಮುಖ್ಯೋಪಾಧ್ಯಾಯ ಪಿ.ಕೆ.ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಪರಿಪೂರ್ಣತೆ ಮತ್ತು ಸುಸಂಸ್ಕೃತಿಯತ್ತ ತೆಗೆದುಕೊಂಡು ಹೋಗುವುದೇ ಶಿಕ್ಷಕರ ಕರ್ತವ್ಯ. ಗುರು-ಶಿಷ್ಯರ ಪವಿತ್ರ ಸಂಬಂಧವನ್ನು ಜಗತ್ತಿಗೆ ತೋರಿಸಿಕೊಟ್ಟ ದೇಶ ನಮ್ಮದು. ಮಗುವಿಗೆ ತಾಯಿ ಮೊದಲ ಜನ್ಮ ನೀಡಿದರೆ, ಉತ್ತಮ ಶಿಕ್ಷಣ ನೀಡಿತ್ಪ್ರಜೆಗಳನ್ನಾಗಿ ಮಾಡಿ ಅವರಿಗೆ ಎರಡನೇ ಜನ್ಮ ನೀಡುವವನು ಶಿಕ್ಷಕ. ಮಕ್ಕಳಿಗೆ ಶಿಕ್ಷಕನಾಗಿ, ತಂದೆಯಾಗಿ, ಹಿತೈಷಿಯಾಗಿ, ಮಾರ್ಗದರ್ಶಕನಾಗಿ ಅವರ ಭವಿಷ್ಯವನ್ನು ರೂಪಿಸುವುದು ಶಿಕ್ಷಕರ ಜವಾಬ್ದಾರಿ ಎಂದು ಹೇಳಿದರು.ವೇದಮೂರ್ತಿ ಮಲ್ಲಯ್ಯ ಸಾರಂಗಮಠ ಸಾನಿಧ್ಯವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಸಿದ್ದು ಹತ್ತಳ್ಳಿ ಅಧ್ಯಕ್ಷತೆ ವಹಿಸಿದರು. ಗ್ರಾಪಂ ಅಧ್ಯಕ್ಷ ಆಸ್ಮಾ ರಜಾಕ ಚಿಕ್ಕಗಸಿ ಜ್ಯೋತಿ ಬೆಳಗಿಸಿದರು. ಉಪಾಧ್ಯಕ್ಷ ರಾಮಚಂದ್ರ ದೊಡಮನಿ ಚಾಲನೆ ನೀಡಿದರು. ಅಪ್ಪಣ್ಣ ಕಲ್ಲೂರ, ಎಸ್‌ಡಿಎಂಸಿ ಉಪಾಧ್ಯಕ್ಷ ವಿಠ್ಠಲ ಹೋರ್ತಿ, ಶ್ರೀಧರ ನಡಗಡ್ಡಿ, ರಾಚ್ಚಪ್ಪ ಗಳೇದ, ಮಹ್ಮದ ಧಡೆದ, ಬಸವರಾಜ ಅವಟಿ, ಶಾಂತಪ್ಪ ಹಚನಾಳ, ಕಿರಣ ಕಿಣಗಿ, ವಿಶ್ವನಾಥ ಅವಟಿ, ಮಲ್ಲನಗೌಡ ಬಿರಾದಾರ, ಯಮನಪ್ಪ ಕನೋಜಿ, ಕೆಆರ್‌ಐಡಿಎಲ್ ಅಧಿಕಾರಿ ರಾಜಶೇಖರ ಮತ್ತು ಎಸ್‌ಡಿಎಂಸಿ ಸದಸ್ಯರು ಮತ್ತಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ