ಎಂಎಂಎಸ್‌ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಸಾಧನೆ

KannadaprabhaNewsNetwork | Published : Apr 10, 2025 1:00 AM

ಸಾರಾಂಶ

ವಿದ್ಯೆ ಯಾರ ಮನೆ ಸ್ವತ್ತಲ್ಲ ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಎಲ್ಲವು ಸಾಧ್ಯ ಎಂಬುದನ್ನ ಹಳ್ಳಿಯ ಹುಡುಗಿ ತೋರಿಸಿದ್ದಾಳೆ ಎಂದು ಹಿಂದುಳಿದ ವರ್ಗಗಳ ಮಾಜಿ ಸದಸ್ಯ ಯೋಗಾನಂದ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ವಿದ್ಯೆ ಯಾರ ಮನೆ ಸ್ವತ್ತಲ್ಲ ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಎಲ್ಲವು ಸಾಧ್ಯ ಎಂಬುದನ್ನ ಹಳ್ಳಿಯ ಹುಡುಗಿ ತೋರಿಸಿದ್ದಾಳೆ ಎಂದು ಹಿಂದುಳಿದ ವರ್ಗಗಳ ಮಾಜಿ ಸದಸ್ಯ ಯೋಗಾನಂದ ಕುಮಾರ್ ತಿಳಿಸಿದರು.

ತಾಲೂಕಿನ ತ್ಯಾಗಟೂರು ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಎನ್.ಶಾಲಿನಿ ಎಂಎಂಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಹಿನ್ನಲೆಯಲ್ಲಿ ಗ್ರಾಮದ ವತಿಯಿಂದ ಹಾಗೂ ಶಿಕ್ಷಣ ಇಲಾಖೆಯಿಂದ ಅಭಿನಂದನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಹಳ್ಳಿಯಲ್ಲಿ ಓದಿರುವ ವಿದ್ಯಾರ್ಥಿನಿ ರಾಜ್ಯ ಮಟ್ಟದಲ್ಲಿ ಆಯ್ಕೆ ಯಾಗಿರುವುದು ಅತ್ಯಂತ ಸಂತೋಷವನ್ನು ನೀಡಿದೆ. ಇಲ್ಲಿನ ಶಿಕ್ಷಕರು ಸಹ ಹೆಚ್ಚು ಶ್ರಮದಿಂದ ಮಕ್ಕಳನ್ನ ಓದಿಸಿ ಪರೀಕ್ಷೆಯಲ್ಲಿ ಉತ್ತಿರ್ಣ ಮಾಡಿಸಿರುವುದು ವಿಶೇಷ ಎನಿಸಿದೆ. ಇದೇ ರೀತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಎಲ್ಲಾ ರೀತಿಯ ಗುಣಮಟ್ಟವಿದ್ದು ಅದನ್ನು ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳು ಬಳಸಿ ಕೊಂಡರೆ ಖಂಡಿತವಾಗಿ ಯಶಸ್ಸು ಸಾಧನೆ ಮಾಡುವುದಕ್ಕೆ ಶಾಲಿನಿಉದಾಹರಣೆ ಯಾಗಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣ ಅಧಿಕಾರಿ ನಟರಾಜು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇಂತಹ ಹಲವು ಯೋಜನೆಗಳು ಶಾಲೆಗಳಲ್ಲಿ ಇವೆ ಈ ವಿದ್ಯಾರ್ಥಿಗೆ ನಾಲ್ಕು ವರ್ಷದಲ್ಲಿ 48000 ಸ್ಕಾಲರ್ ಶಿಪ್ ಬರುತ್ತದೆ ಇನ್ನೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಂದ ಆಯ್ಕೆಯಾಗುವ ಸಾಧ್ಯತೆ ಇದೇ ಮುಂದಿನ ದಿನದಲ್ಲಿ ನಿಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಮನವಿ ಮಾಡಿದರು.

ಮುಖ್ಯ ಶಿಕ್ಷಕ ಲೋಕೇಶ್ ಮಾತಾನಾಡಿ ಶಾಲೆಯ ಶಿಕ್ಷಕರಾದ ಉಮಾ ಮಹೇಶ್ ಮತ್ತು ನಮ್ಮೆಲ್ಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಾಕಷ್ಟು ರೀತಿಯಲ್ಲಿ ಪರೀಕ್ಷೆಯ ಜ್ಞಾನವನ್ನು ತುಂಬಿದ ಪರಿಣಾಮ ಈ ಸಾಧನೆ ಮಾಡಲು ಸಾಧ್ಯವಾಗಿದೆ ಮತ್ತಷ್ಟು ವಿದ್ಯಾರ್ಥಿಗಳು ನಮ್ಮ ಶಾಲೆಯಿಂದ ಈ ಪರೀಕ್ಷೆಯಲ್ಲಿ ಪಾಸಾಗುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಲಿನಿ ಹಾಗೂ ಅವರ ಶಿಕ್ಷಕರನ್ನು ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಓಂಕಾರ ಮೂರ್ತಿ, ವಿ ಎಸ್ ಎಸ್ ಎನ್ ಅಧ್ಯಕ್ಷ ಚಿದಾನಂದ, ಬಿ ಆರ್ ಸಿ ಮಧುಸೂದನ್, ಉಮಾ ಮಹೇಶ್, ಪರಮೇಶ್,ಓಂಕಾರ ಸ್ವಾಮಿ ಕೆಂಪಯ್ಯ ಪ್ರೌಢಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷ ರವೀಶ್,ದಯಾನಂದ್ ಲಕ್ಷ್ಮಣ್ ಸವಿತಾ ಶಂಭುಲಿಂಗಮೂರ್ತಿ ಉಪನ್ಯಾಸಕರು. ಸೇರಿದಂತೆ ಇತರರು ಇದ್ದರು.

Share this article