ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‌ಗಳು ಪುಡಿಪುಡಿ

KannadaprabhaNewsNetwork |  
Published : Sep 22, 2026, 01:30 AM IST
ಕಿಡಿಗೇಡಿಗಳ ಅಟ್ಟಹಾಸಕ್ಕೆ ಸರ್ಕಾರಿ ಶಾಲೆಯ ಕಿಟಕಿ ಗ್ಲಾಸ್‌ಗಳು ಪುಡಿಪುಡಿ | Kannada Prabha

ಸಾರಾಂಶ

ತಾಲೂಕಿನ ಹೊಳವನಹಳ್ಳಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಯ ಕಿಟಕಿ ಗ್ಲಾಸ್‌ಗಳನ್ನ ಕಿಡಿಗೇಡಿಗಳ ಪುಡಿಪುಡಿ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

ಕನ್ನಡಫ್ರಭವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಯ ಕಿಟಕಿ ಗ್ಲಾಸ್‌ಗಳನ್ನ ಕಿಡಿಗೇಡಿಗಳ ಪುಡಿಪುಡಿ ಮಾಡಿರುವ ಘಟನೆ ತಡರಾತ್ರಿ ನಡೆದಿದೆ. ಯಾರೋ ದುಷ್ಕರ್ಮಿಗಳು ತಡರಾತ್ರಿ ಕಲ್ಲುತೂರಾಟ ಮಾಡಿ ನಾಲ್ಕು ಸಿಸಿ ಕ್ಯಾಮೆರಾಗಳು, ಶಾಲೆಯ ಕೊಠಡಿಯ ಕಿಟಿಕಿಗಳಿಗೆ ಕಲ್ಲು ತೂರಿದ್ದು ಪೋಲಿ ಹುಡುಗರ ದಂಡು ಶಾಲೆ ಒಳಗೆ ಆಗಮಿಸಿ ಶಾಲೆ ವಾತವರಣವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಶಾಲೆ ಉದ್ಘಾಟನೆ ಮಾಡಿದ್ದರು. ಶಾಲೆಯ ಹೊಸ ಕಟ್ಟಡದ ಕಿಟಕಿಗಳಿಗೆ ಕಲ್ಲುತೂರಾಟ ನಡೆಸಿರುವ ಕಾರಣ, ಗಾಜಿನ ಚೂರುಗಳು ತರಗತಿ ಕೊಠಡಿಗಳೊಗೆ ಬಿದ್ದಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ೩, ೪ ಮತ್ತು ೫ನೇ ತರಗತಿ ವಿದ್ಯಾರ್ಥಿಗಳನ್ನು ಹೊರಗೆ ಕೂರಿಸಿ ಶಿಕ್ಷಕರು ಪಾಠ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಶಾಲಾ ಅವಧಿ ಮುಗಿದ ಮೇಲೆ ಇಲ್ಲಿನ ಕೆಲವು ಪೋಲಿ ಹುಡುಗರ ತಂಡ ಆವರಣ ಬಳಗೆ ಬಂದು ಆಟ ಆಡುವ ನೆಪದಲ್ಲಿ ಮದ್ಯ ಸೇವನೆ, ಗಾಂಜಾ ಸೇವನೆ ಮಾಡುತ್ತಾರೆ. ಅನೇಕ ಬಾರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

ಈ ಕುರಿತು ಬಿಇಒ ಫೈರೋಜಾ ಬೇಗಂ ಮಾತನಾಡಿ ಹೊಳವನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.ಶಾಲೆಯ ಹೊಸ ಕಟ್ಟಡದ ಕಿಟಕಿ ಗ್ಲಾಸ್‌ಗಳು ಪುಡಿಪುಡಿಯಾಗಿದ್ದು, ಗಾಜಿನ ಚೂರುಗಳು ತರಗತಿ ಕೊಠಡಿಗಳೊಳಗೆ ಬಿದ್ದಿವೆ. ಇದರ ಜೊತೆಗೆ ಶಾಲೆಯಲ್ಲಿ ಅಳವಡಿಸಲಾಗಿದ್ದ ನಾಲ್ಕು ಸಿಸಿ ಕ್ಯಾಮೆರಾಗಳಿಗೂ ಕಲ್ಲು ತೂರಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡ್ಡಾಯ..ವೈಜ್ಞಾನಿಕ ಪ್ರಸ್ತಾವನೆ ಸಲ್ಲಿಕೆಯಲ್ಲಿ ರಾಜ್ಯ ಹಿಂದೆ: ಡಾ.ಧನಂಜಯ ಸರ್ಜಿ
ನವೀನ ಮಾದರಿಯ ಕೃಷಿ ಪದ್ಧತಿಯಿಂದ ಹೆಚ್ಚು ಲಾಭ: ಡಾ. ತುಷಾರ್ ಕಾಂತಿ ಬೆಹರಾ