ಸರ್ಕಾರಿ ಶಾಲೆಗಳು ಮಾದರಿಯಾಗಿವೆ: ರಾಮಪ್ಪ

KannadaprabhaNewsNetwork |  
Published : Mar 07, 2024, 01:52 AM IST
ಪೋಟೋ (6 ಹೆಚ್‌ ಎಲ್‌ ಕೆ 1)ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಚಿಣ್ಣರ ಚಿತ್ತಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಸ್ಡಿಎಂಸಿ ಅಧ್ಯಕ್ಷ ರವಿಶಂಕರ್ ಉದ್ಘಾಟಿಸಿದರು.ಪೋಟೋ (6 ಹೆಚ್‌ ಎಲ್‌ ಕೆ 2)ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಚಿಣ್ಣರ ಚಿತ್ತಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ಆಕರ್ಷಕ ನೃತ್ಯ ಪ್ರದರ್ಶಿಸಿದರು.…………… | Kannada Prabha

ಸಾರಾಂಶ

ಸರ್ಕಾರಿ ಶಾಲೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಎರಡರಲ್ಲಿಯೂ ಎಲ್ಲಾ ಶಾಲೆಗೆ ಮಾದರಿಯಾಗಿದೆ.

ಹೊಳಲ್ಕೆರೆ: ತಾಲೂಕಿನ ಚೀರನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಚಿಣ್ಣರ ಚಿತ್ತಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಿದರು.

ಕಂಸಾಳೆ, ಅಸ್ಸಾಂನ ಬಿಹು ಜಾನಪದ ನೃತ್ಯ, ಲಂಬಾಣಿ, ಭಜರಂಗಿ, ಭರತನಾಟ್ಯ, ವಚನ ಗೀತೆ, ದೇಶಭಕ್ತಿ, ಭಾರತೀಯ ಸೇನೆಗೆ ಸಂಬಂಧಿಸಿದ ನೃತ್ಯ ಹಾಗೂ ರೂಪಕಗಳನ್ನು ಪ್ರದರ್ಶಿಸಲಾಯಿತು.

ಬಿಆರ್‌ಪಿ ರಾಮಪ್ಪ ಮಾತನಾಡಿ, ಚೀರನಹಳ್ಳಿಯ ಸರ್ಕಾರಿ ಶಾಲೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಎರಡರಲ್ಲಿಯೂ ಎಲ್ಲಾ ಶಾಲೆಗೆ ಮಾದರಿಯಾಗಿದೆ. ಗ್ರಾಮಸ್ಥರ ನೆರವಿನಿಂದ ಈ ಶಾಲೆ ಎತ್ತರಕ್ಕೆ ಬೆಳೆದಿದೆ. ಸರ್ಕಾರಿ ಶಾಲೆಗಳಲ್ಲೂ ಇಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಶಾಲೆಯ ಶಿಕ್ಷಕಿಯರ ಸಂಘಟಿತ ಪರಿಶ್ರಮವೇ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಹಿರಿಯರಾದ ಗುರುಮೂರ್ತಿ ಕಳೆದ ವರ್ಷ 5ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿ.ಮನೋಜ್‌ಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಉದ್ಯಮಿ ಅರೇನಹಳ್ಳಿ ತಿಪ್ಪಣ್ಣ, ಎಸ್ಡಿಎಂಸಿ ಅಧ್ಯಕ್ಷ ರವಿಶಂಕರ್, ಉದಯ ಶಂಕರ್, ಗ್ರಾಮದ ಮುಖಂಡರಾದ ದಯಾನಂದ್, ತಿಪ್ಪಣ್ಣ, ಚಂದ್ರಪ್ಪ, ನಾಗರಾಜು, ಗುಡುಗೌಡ್ರು ತಿಮ್ಮಣ್ಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಜಗದೀಶ್, ರಂಗಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಸಾವಿತ್ರಮ್ಮ, ಪ್ರಭಾಕರ್, ಹರೀಶ್, ವಿಜಯ ಕುಮಾರ್, ಸಿಆರ್ಪಿ ಭಾರತಿ, ಹನುಮೇಶ್, ರಾಘವೇಂದ್ರ, ಅಜ್ಜಯ್ಯ, ಭೈರೇಶ್, ಮುಖ್ಯ ಶಿಕ್ಷಕಿ ಎ.ಎಸ್.ನಳಿನಾ, ರಾಜೇಶ್ವರಿ, ಶಾರದಾ, ದ್ಯಾಮಕ್ಕ, ಸ್ವಪ್ನಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!