ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಹಿಂದೆ ೧೯೮೮ರಲ್ಲಿ ಲೋಕಲ್ ಪ್ಲ್ಯಾನಿಂಗ್ ಏರಿಯಾದಡಿ (ಎಲ್‌ಪಿಎ) ಒಟ್ಟು ೪೬ ಹಳ್ಳಿಗಳನ್ನು ಒಳಗೊಂಡಂತೆ ೪೦೨ ಚ.ಕಿಮೀ ವ್ಯಾಪ್ತಿಯ ಗಡಿ ಗುರುತಿಸಲಾಗಿತ್ತು. ಇದಾದ ಬಳಿಕ ಪ್ರಸ್ತುತ ವರ್ಷ ೪೬ ಹಳ್ಳಿಗಳನ್ನು ಸೇರ್ಪಡೆ ಮಾಡಿ ಎಲ್.ಪಿ.ಎ. ವ್ಯಾಪ್ತಿ ಹೆಚ್ಚಿಸಲಾಗಿದೆ. ಅದರಲ್ಲಿ ಹುಬ್ಬಳ್ಳಿ ತಾಲೂಕು ೧೩, ಕಲಘಟಗಿ ತಾಲೂಕು- ೬, ಧಾರವಾಡ ತಾಲೂಕಿನ ೨೭ ಹಳ್ಳಿಗಳನ್ನು ಹುಡಾ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾಗಿದೆ ಎಂದರು.
೪೬ ಹಳ್ಳಿಗಳ ಸೇರ್ಪಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅವಳಿ ನಗರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಪೂರಕವಾಗಿದೆ. ಜಿಪಂ ಸಿಇಒ, ಹುಡಾ, ಪಿಡಿಒ ಹಾಗೂ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ಮಾಡಿ ಅಲ್ಲಿನ ಬೇಡಿಕೆಗಳನ್ನು ಪರಿಗಣಿಸಿ, ಉತ್ತಮ ಯೋಜನೆ ಸಿದ್ಧಪಡಿಸಲಾಗುವುದು. ಅಲ್ಲದೇ ಹೊಸದಾಗಿ ಸೇರ್ಪಡೆಯಾಗುವ ಎಲ್ಲ ಹಳ್ಳಿಗಳಿಗೂ ರಿಂಗ್ ರೋಡ್ ಕಲ್ಪಿಸಲಾಗುವುದು. ಎಲ್ಲ ಹಳ್ಳಿಗಳಲ್ಲಿ ರಸ್ತೆ, ಮೂಲಕ ಸೌಕರ್ಯ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ ಮಾತನಾಡಿ, ಹುಡಾ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ನೀಡಿರುವುದು ಖುಷಿಯ ಸಂಗತಿ. ಹೊಸ ವಿನ್ಯಾಸಗಳನ್ನು ಉತ್ತಮ ಹಾಗೂ ಯೋಜನಾ ಬದ್ಧವಾಗಿ ರೂಪಿಸಲಾಗುವುದು ಎಂದ ಅವರು, ಹು-ಡಾದಿಂದ ಎಲ್.ಪಿ.ಎ. ಅನುಸಾರವಾಗಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ನಗರ ಯೋಜನೆ ರೂಪಿಸಲಾಗುವುದು. ಧಾರವಾಡ, ಹುಬ್ಬಳ್ಳಿ, ಕುಂದಗೋಳ ವ್ಯಾಪ್ತಿಯಲ್ಲಿ ೫೦೦ ಎಕರೆ ಎಲ್.ಪಿ.ಎ. ಅಡಿಯಲ್ಲಿ ಅಭಿವೃದ್ಧಿ ಮಾಡುವ ಚಿಂತನೆ ಇದೆ. ಕೆಲವೊಂದು ಮಹಾನಗರ ವ್ಯಾಪ್ತಿಯಲ್ಲಿನ ಸರ್ವೆ ನಂಬರ್‌ಗಳು ಪಾಲಿಕೆ ಮತ್ತು ಹುಡಾ ವ್ಯಾಪ್ತಿಗೆ ಹೊಂದಾಣಿಕೆಯಾಗುತ್ತಿಲ್ಲ. ಅಂತಹ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ಪಾಲಿಕೆಯ ಸಹಯೋಗದಲ್ಲಿ ಅವುಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಹುಡಾ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುನೀತಾ ಹುಲಕಟ್ಟಿ, ಮಹಾಂತೇಶ ಪೂಜಾರ, ಬಡಿಗೇರ, ಹುಡಾ ಅಧಿಕಾರಿಗಳಾದ ಬಸವರಾಜ ದೇವಗಿರಿ, ಮ್ಯಾನೇಜರ್ ಮಂಜುನಾಥ ಗೂಳಪ್ಪನವರ ಇದ್ದರು.
ಹುಬ್ಬಳ್ಳಿ ತಾಲೂಕು:
ಕಲಘಟಗಿ ತಾಲೂಕು:
ಧಾರವಾಡ ತಾಲೂಕು:
ನಾನು ಅಧಿಕಾರ ವಹಿಸಿಕೊಂಡ ಮೇಲೆ ಹುಡಾ ವ್ಯಾಪ್ತಿಯಲ್ಲಿ ಅನಧಿಕೃತ ಲೇಔಟ್ ನಿರ್ಮಾಣ ತಡೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಅದರಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೂ ಹೊಸ ಅಕ್ರಮ ಲೇಔಟ್‌ಗಳು ತಲೆ ಎತ್ತದಂತೆ ಕ್ರಮವಹಿಸಲಾಗಿದೆ. ಅನಧಿಕೃತ ಲೇಔಟ್ ತಡೆಗೆ ಸರ್ಕಾರವು ಕಟ್ಟುನಿಟ್ಟಿನ ಕಾನೂನು ರೂಪಿಸಿದ್ದು, ಅದನ್ನು ಕಾರ್ಯರೂಪಕ್ಕೆ ತರಲಾಗುವುದು.