ದೇಗುಲ ಅಭಿವೃದ್ಧಿಗೆ ಸರ್ಕಾರದಿಂದ ಸೌಲಭ್ಯ ಒದಗಿಸಲು ಕ್ರಮ

KannadaprabhaNewsNetwork |  
Published : Sep 06, 2025, 01:00 AM IST
ಹರದನಹಳ್ಳಿ ದಿವ್ಯಲಿಂಗೇಶ್ವರದೇವಾಲಯ ರಾಜಗೋಪುರ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ. | Kannada Prabha

ಸಾರಾಂಶ

ತಾಲೂಕಿನ ಇತಿಹಾಸ ಪ್ರಸಿದ್ದ ಹರದನಹಳ್ಳಿ ಗ್ರಾಮದ ದಿವ್ಯಲಿಂಗೇಶ್ವರ ದೇವಾಲಯದ ರಾಜಗೋಪುರ ನಿರ್ಮಾಣ ಕಾಮಗಾರಿಗೆ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಶುಕ್ರವಾರ ದೇವಾಲಯದ ಆವರಣದಲ್ಲಿ ಗುದ್ದಲಿಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರತಾಲೂಕಿನ ಇತಿಹಾಸ ಪ್ರಸಿದ್ದ ಹರದನಹಳ್ಳಿ ಗ್ರಾಮದ ದಿವ್ಯಲಿಂಗೇಶ್ವರ ದೇವಾಲಯದ ರಾಜಗೋಪುರ ನಿರ್ಮಾಣ ಕಾಮಗಾರಿಗೆ ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಶುಕ್ರವಾರ ದೇವಾಲಯದ ಆವರಣದಲ್ಲಿ ಗುದ್ದಲಿಪೂಜೆ ನೆರವೇರಿಸಿದರು.ನಂತರ ಅವರು ಮಾತನಾಡಿ, ಇತಿಹಾಸಪ್ರಸಿದ್ದ ಹರದನಹಳ್ಳಿ ಗ್ರಾಮದ ದಿವ್ಯಲಿಂಗೇಶ್ವರ ದೇವಾಲಯ ಚೋಳರ ಆಡಳಿತಾವಧಿಯಲ್ಲಿ ನಿರ್ಮಾಣವಾಗಿತ್ತು. ಕಳೆದ ೧೫ ವರ್ಷಗಳ ಹಿಂದೆ ರಾಜಗೋಪುರ ಮಳೆಯ ಪರಿಣಾಮ ನೆಲಕ್ಕುರುಳಿತ್ತು.

ರಾಜಗೋಪುರ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆ ಕೆಲಸ ಈವರೆಗೂ ಆಗಲಿಲ್ಲ. ೨೦೧೩ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರವಿದ್ದ ಅವಧಿಯಿಂದಲೂ ಪ್ರಸ್ತಾವನೆ ಸಲ್ಲಿಸುತ್ತ ಬರಲಾಗಿತ್ತು. ಸಿದ್ದರಾಮಯ್ಯ ಅವರು ನಮ್ಮ ಮನವಿಗೆ ಸ್ಪಂದಿಸಿ, ವಿಶೇಷ ಅಭಿವೃದ್ಧಿ ಯೋಜನೆಯಡಿ ರಾಜಗೋಪುರ ನಿರ್ಮಾಣಕ್ಕೆ ₹೩.೬೨ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ. ಕಾಮಗಾರಿ ಮುಗಿದ ನಂತರ ದೇವಾಲಯದ ಆವರಣವನ್ನು ದುರಸ್ತಿಪಡಿಸಲು ಭಕ್ತಾದಿಗಳು ತಮ್ಮ ಕೈಲಾದ ನೆರವು ನೀಡಬೇಕು, ದೇವಾಲಯದ ಅಭಿವೃದ್ಧಿಗೆ ತಾವು ಕೂಡಾ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ದಿವ್ಯಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಶಿವರಾಂ, ಪ್ರಧಾನ ಕಾರ್ಯದರ್ಶಿಹಾಗೂ ಗಡಿಯಜಮಾನ ಜಯಸ್ವಾಮಿ, ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಖಜಾಂಚಿ ರವಿಕುಮಾರ್, ವಾಸುದೇವಮೂರ್ತಿ, ಗ್ರಾಪಂ ಅಧ್ಯಕ್ಷ ಮಂಜುನಾಥ್, ಜಿಪಂ ಮಾಜಿಸದಸ್ಯರಾದ ಕಾವೇರಿಶಿವಕುಮಾರ್‌, ರಮೇಶ್, ತಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಪಿ.ಕುಮಾರ್‌ನಾಯಕ್, ಹರದನಹಳ್ಳಿಬಂಡಿಗೆರೆ ಗ್ರಾಮದ ರಂಗಸ್ವಾಮಿನಾಯಕ, ಬಂಗಾರಶೆಟ್ಟಿ, ಮಹದೇವಯ್ಯ, ವೆಂಕಟೇಶ್, ರಾಮಚಂದ್ರ, ಬಸವರಾಜು, ಚಾಮರಾಜನಗರದ ಲಕ್ಷ್ಮೀನರಸಿಂಹ, ತಮಿಳುನಾಡಿನ ಧರ್ಮಲಿಂಗಂ, ವೇಲುಸ್ವಾಮಿ, ಆರ್ಮುಗಂ. ಚೆಲುವರಾಜು, ಜಡೆಯಪ್ಪ, ಶಂಕರ್,ಗಣೇಶ್,ಚಿಕ್ಕರಾಜು, ನಟರಾಜು,ಪಿಡಿಓಮಹೇಶ್ವರಿ, ಹರದನಹಳ್ಳಿಬಂಡಿಗೆರೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು ಸಮಿತಿ ಸದಸ್ಯರು,ದೇವಾಲಯದ ಅರ್ಚಕರು, ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ
ಹಸೆಮಣೆ ಏರಬೇಕಿದ್ದ ಬಾಲ್ಯದ ಗೆಳತಿಯರು ಬೆಂಕಿಯಲ್ಲಿ ಭಸ್ಮ!