ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರಿ ಸೌಲಭ್ಯ ಪೂರಕ

KannadaprabhaNewsNetwork |  
Published : Jul 24, 2024, 12:33 AM IST
23ಎಚ್ಎಸ್ಎನ್7 : ಆಲೂರು ತಾಲೂಕಿನ ತಾಳೂರು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಶೂ-ಸಾಕ್ಸ್ ವಿತರಣೆ ಮಾಡಲಾಯಿತು. | Kannada Prabha

ಸಾರಾಂಶ

ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ-ಸಾಕ್ಸ್, ಕ್ಷೀರಭಾಗ್ಯ ಹಾಗೂ ಮಧ್ಯಾಹ್ನದ ಬಿಸಿಯೂಟ ಸೇರಿ ಮುಂತಾದ ಸರಕಾರದ ಮಹತ್ತರ ಸೌಲಭ್ಯಗಳು ಸದ್ಬಳಕೆಯಾದಾಗ ಮಾತ್ರ ಗ್ರಾಮೀಣ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ತಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬೆಳ್ಳಾವರ ಹೇಳಿದರು.

ಉಮೇಶ್ ಬೆಳ್ಳಾವರ ಅಭಿಮತ । ತಾಳೂರು ಶಾಲೆಯಲ್ಲಿ ಉಚಿತ ಶೂ-ಸಾಕ್ಸ್ ವಿತರಣೆ

ಕನ್ನಡಪ್ರಭ ವಾರ್ತೆ ಆಲೂರು

ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ-ಸಾಕ್ಸ್, ಕ್ಷೀರಭಾಗ್ಯ ಹಾಗೂ ಮಧ್ಯಾಹ್ನದ ಬಿಸಿಯೂಟ ಸೇರಿ ಮುಂತಾದ ಸರಕಾರದ ಮಹತ್ತರ ಸೌಲಭ್ಯಗಳು ಸದ್ಬಳಕೆಯಾದಾಗ ಮಾತ್ರ ಗ್ರಾಮೀಣ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯ ಎಂದು ತಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಬೆಳ್ಳಾವರ ಹೇಳಿದರು.

ತಾಲೂಕಿನ ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೪-೨೫ ನೇ ಸಾಲಿನ ಉಚಿತ ಶೂ-ಸಾಕ್ಸ್ ವಿತರಣೆ ಮಾಡಿ ಅವರು ಮಾತನಾಡಿದರು.

ತಾಳೂರು ಶಾಲೆಯ ಮಕ್ಕಳಿಗೆ ಸರಕಾರಿ ಸೌಲಭ್ಯಗಳ ಜೊತೆಜೊತೆಗೆ ಇಲ್ಲಿನ ಶಿಕ್ಷಕರ ಆಸಕ್ತಿಯಿಂದ ಅನೇಕ ಸಮಾಜ ಸೇವಕರ ಸಹಾಯದಿಂದ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ಒದಗಿಸುವುದರ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಶಾಲೆ ಪ್ರಾರಂಭೋತ್ಸವಕ್ಕೂ ಮುನ್ನ ಈ ಶಾಲೆಗೆ ನಮ್ಮ ಗ್ರಾಮ ಪಂಚಾಯಿತಿಯಿಂದ ಬಣ್ಣ ಬಳಿಸಲಾಗಿದೆ. ಈಗ ಶೌಚಾಲಯ ಮುಂಜಾರಾಗಿದ್ದು, ಸದ್ಯದಲ್ಲಿಯೇ ಕಾಮಗಾರಿ ಪ್ರಗತಿಗೊಳ್ಳಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಸಮುದಾಯದ ಪಾತ್ರ ಮಹತ್ತರವಾದುದು. ತಾಳೂರು ಶಾಲೆ ಸರಕಾರಿ ಯೋಜನೆಗಳ ಜೊತೆಗೆ ಸಮುದಾಯವನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದೆ. ಆದ್ದರಿಂದ ಇಲ್ಲಿನ ಶೈಕ್ಷಣಿಕ ಹಾಗೂ ಭೌತಿಕ ಪರಿಸರ ಉತ್ತಮವಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಟಿ.ಕೆ.ದಿನೇಶ್ ಮಾತನಾಡಿದರು.

ಮುಖ್ಯ ಶಿಕ್ಷಕ ಕೊಟ್ರೇಶ್.ಎಸ್. ಉಪ್ಪಾರ್, ಸಹ ಶಿಕ್ಷಕಿ ರವಿತ.ವಿ, ಅತಿಥಿ ಶಿಕ್ಷಕಿ ಎ.ಎಸ್.ರೇಖಾ ಹಾಗೂ ಮಕ್ಕಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!