ಸರ್ಕಾರಿ ಶಿಕ್ಷಕರಿಗೆ ಒತ್ತಡ ರಹಿತ ವಾತಾವರಣ ಬೇಕಿದೆ: ಅಮಾನುಲ್ಲಾ

KannadaprabhaNewsNetwork |  
Published : Jul 15, 2025, 11:45 PM IST
೧೫ಶಿರಾ೩: ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹೊಸಪಾಳ್ಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ನಿವೃತ್ತ ಮುಖ್ಯ ಶಿಕ್ಷಕ ಅಮಾನುಲ್ಲಾ ಅವರಿಗೆ ಬಿಳ್ಕೊಡುಗೆ ನೀಡಲಾಯಿತು. | Kannada Prabha

ಸಾರಾಂಶ

ಶಾಲೆಗಳಲ್ಲಿ ಶಿಕ್ಷಕರಾದವರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮಹದಾಸೆ ಇಟ್ಟುಕೊಂಡು ಈ ವೃತ್ತಿಗೆ ಬಂದಿರುತ್ತಾರೆ. ಆದರೆ ಸರ್ಕಾರಿ ದಸ್ತವೇಜುಗಳ ನಿರ್ವಹಣೆ, ಸರ್ಕಾರಿ ಯೋಜನೆಗಳ ಜಾರಿ ಸೇರಿ ಹಲವು ಒತ್ತಡದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ನಾವು ಕಲಿಸಬೇಕಾದ ಹಲವು ವಿಷಯಗಳಲ್ಲಿ ಹಿನ್ನಡೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಶಿರಾ

ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸರ್ಕಾರದ ಯೋಜನೆಗಳ ಜಾರಿ, ಸರ್ವೇ, ಚುನಾವಣೆ, ಬಿಸಿಯೂಟದ ಕಾರ್ಯಕ್ರಮ ಸೇರಿದಂತೆ ಸರ್ಕಾರದ ಹತ್ತು- ಹಲವು ಕಾರ್ಯಕ್ರಮಗಳನ್ನು ಸಾಕಾರಗೊಳಿಸುವ ಒತ್ತಡವಿರುತ್ತದೆ. ಈ ಒತ್ತಡಗಳನ್ನು ಕಡಿಮೆ ಮಾಡಿದಲ್ಲಿ ಎಲ್ಲಾ ಶಿಕ್ಷಕರು ಸಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಬಹುದಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅಮಾನುಲ್ಲಾ ಹೇಳಿದರು.

ಅವರು ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹೊಸಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಶಾಲೆಗಳಲ್ಲಿ ಶಿಕ್ಷಕರಾದವರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮಹದಾಸೆ ಇಟ್ಟುಕೊಂಡು ಈ ವೃತ್ತಿಗೆ ಬಂದಿರುತ್ತಾರೆ. ಆದರೆ ಸರ್ಕಾರಿ ದಸ್ತವೇಜುಗಳ ನಿರ್ವಹಣೆ, ಸರ್ಕಾರಿ ಯೋಜನೆಗಳ ಜಾರಿ ಸೇರಿ ಹಲವು ಒತ್ತಡದ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಕ್ಕಳಿಗೆ ನಾವು ಕಲಿಸಬೇಕಾದ ಹಲವು ವಿಷಯಗಳಲ್ಲಿ ಹಿನ್ನಡೆಯಾಗುತ್ತಿದೆ. ಆದ್ದರಿಂದ ಸರ್ಕಾರವು ನಮ್ಮ ಶಿಕ್ಷಕರ ಒತ್ತಡಗಳನ್ನು ಕಡಿಮೆ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಆರ್ ಪಿ ರವಿಕುಮಾರ್ ದೇವರಾಯಪಟ್ಟಣ, ಬುಕ್ಕಾಪಟ್ಟಣ ಗ್ರಾಪಂ ಸದಸ್ಯ ಗುರುರಾಜ್, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀ ಲಕ್ಷ್ಮೀ, ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜೈನುಲಾಬ್ದೀನ್ ಖಾಜಿ, ಡಾ. ನಾಗಭೂಷಣ್, ಸಹ ಶಿಕ್ಷಕರಾದ ವಿಮಲಾ ಡಿ. ಆರ್., ಶ್ರೀನಿವಾಸ್, ವೆಂಕಟೇಶ್ ನಾಯ್ಕ , ಶಾರದ, ಮುದ್ದಣ್ಣ, ಮುಖಂಡರಾದ ಹೊಸ ಪಾಳ್ಯ ಸತ್ಯನಾರಾಯಣ, ವಿಜಯ ಲಿಂಗಪ್ಪ, ದಯಾನಂದ, ಚಂದ್ರಣ್ಣ, ಸಹಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಸೇರಿ ಹಲವರು ಹಾಜರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು