ಮಾರ್ಷಲ್‌ಗಳ ವೇತನ ಹೆಚ್ಚಳಕ್ಕೆ ಸರ್ಕಾರ ನಕಾರ

KannadaprabhaNewsNetwork |  
Published : Feb 05, 2024, 01:49 AM IST
ಮಾರ್ಷಲ್‌ಗಳು | Kannada Prabha

ಸಾರಾಂಶ

ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್‌ಗಳ ಗುತ್ತಿಗೆ ಅವಧಿಯ ನವೀಕರಣಕ್ಕೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, ವೇತನ ಹೆಚ್ಚಳ ಪ್ರಸ್ತಾವನೆಯನ್ನು ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್‌ಗಳ ಗುತ್ತಿಗೆ ಅವಧಿಯ ನವೀಕರಣಕ್ಕೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, ವೇತನ ಹೆಚ್ಚಳ ಪ್ರಸ್ತಾವನೆಯನ್ನು ನಿರಾಕರಿಸಿದೆ.

ಬಿಬಿಎಂಪಿಯ ವಾರ್ಡಗಳಲ್ಲಿ ಘನತ್ಯಾಜ್ಯ ನಿರ್ವಹಣೆಗೆ 261 ವಾರ್ಡ್‌ ಮಾರ್ಷಲ್‌, ಭೂಭರ್ತಿ ಘಟಕದ ಭದ್ರತೆಗೆ 24, ಸಂಸ್ಕರಣಾ ಘಟಕಗಳಿಗೆ 49, ಕೆರೆಗಳಿಗೆ 44, ಮಾರುಕಟ್ಟೆಗೆ 35, ಕಂಟ್ರೋಲ್‌ ರೂಂಗೆ 32 ಹಾಗೂ ಕಾವಲು ಪಡೆಗೆ 40 ಸೇರಿದಂತೆ ಒಟ್ಟು 517 ಮಂದಿಯನ್ನು ನೇಮಕ ಮಾಡಿಕೊಂಡಿದೆ. ಮಾರ್ಷಲ್‌ ಗಳ ವೇತನ ಹಾಗೂ ಸಮವಸ್ತ್ರ, ಇಂಧನ ವೆಚ್ಚ ಹಾಗೂ ಮೊಬೈಲ್‌ ಭತ್ಯೆ ಸೇರಿದಂತೆ 19.65 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಇದೀಗ ಮಾರ್ಷಲ್‌ ಗಳ ಹೊರ ಗುತ್ತಿಗೆ ಅವಧಿಯನ್ನು ಒಂದು ವರ್ಷಕ್ಕೆ ನವೀಕರಣಕ್ಕೆ ಅನುನೋದನೆ ನೀಡಿದೆ.

ಮಾರ್ಷಲ್‌ಗಳ ಮಾಸಿಕ ವೇತನವನ್ನು 23,400 ರು.ನಿಂದ 25 ಸಾವಿರಕ್ಕೆ ಹೆಚ್ಚಿಸುವಂತೆ ಬಿಬಿಎಂಪಿಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಜತೆಗೆ ಮಾರ್ಷಲ್‌ಗಳಿಗೆ ನೀಡುವ ಗೌರವ ಧನ ಭರಿಸುವಂತೆ ಮನವಿ ಮಾಡಿತ್ತು. ಆದರೆ, ಗೌರವ ಧನವನ್ನು ರಾಜ್ಯ ಸರ್ಕಾರದಿಂದ ಭರಿಸುವುದಕ್ಕೆ ಅವಕಾಶ ಇರುವುದಿಲ್ಲ. ಬಿಬಿಎಂಪಿಯ ಅನುದಾನದಲ್ಲಿಯೇ ಭರಿಸುವಂತೆ ಸೂಚಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ