ಕನ್ನಡಪ್ರಭ ವಾರ್ತೆ ಉಡುಪಿ
ಶುಕ್ರವಾರ ಉಡುಪಿಯಲ್ಲಿ ಮಾತನಾಡಿದ ಅವರು, ತನ್ವೀರ್ ಸೇಠ್ ಅವರು ಶಾಸಕನಾಗಿರುವ ಕ್ಷೇತ್ರದಲ್ಲಿ 200 ರಿಂದ 300 ಅಲ್ಪಸಂಖ್ಯಾತರು ಪೋಲಿಸ್ ಅಧಿಕಾರಿಯ ಕಾರಿಗೆ ಕಲ್ಲೂ ತೂರಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಲ್ಲದೆ ಪೊಲೀಸ್ ಠಾಣೆಗೂ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದವರು ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದಾರೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಹಿಂದೂ ವಿರೋಧಿ ಮತ್ತು ಅಲ್ಪಸಂಖ್ಯಾತರನ್ನು ಓಲೈಸುವ ನೀತಿ ಅನುಸರಿಸುತ್ತಿರುವಾಗಲೇ ಪ್ರತಿನಿತ್ಯವೂ ಅಲ್ಪಸಂಖ್ಯಾತರು ನಮಗೆ ರಕ್ಷಣೆ ಕೊಡುವ ಸರ್ಕಾರ ಇದೆ ಎನ್ನುವ ಧೈರ್ಯದಿಂದ ಕಾನೂನು ವಿರೋಧಿ, ಸಂವಿಧಾನ ವಿರೋಧಿ ನಡೆಯನ್ನು ಮಾಡುತ್ತಿರುವ ಅನೇಕ ನಿದರ್ಶನ ನಮ್ಮ ಮುಂದಿದೆ. ಇದಕ್ಕೆ ನೇರವಾಗಿ ಸಿದ್ದರಾಮಯ್ಯ ಸರ್ಕಾರ ಹೊಣೆಯಾಗಿದೆ ಎಂದವರು ಹೇಳಿದ್ದಾರೆ.ಕೆಲವು ದಿನಗಳ ಹಿಂದೆ ಸಚಿವ ಜಮೀರ್ ಅಹಮ್ಮದ್ ಅವರ ಕ್ಷೇತ್ರದಲ್ಲಿ ದನದ ಕೆಚ್ಚಲು ಹಾಗು ಕಾಲನ್ನು ಕಡಿಯುವ ಮೂಲಕ ವಿಕೃತಿ ಮೆರೆದಿದ್ದರು. ಇಂತಹ ಅನೇಕ ಘಟನೆಗಳು ರಾಜ್ಯ ನಡೆಯುತ್ತಿದ್ದರೂ, ಕಠಿಣ ಕಾನೂನು ಕ್ರಮ ಜರುಗಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಗಾರೆ.