ಹೊನ್ನಾವರ: ರಾಜ್ಯ ಸರ್ಕಾರಿ ನೌಕರರ ನೂತನ ಪದಾಧಿಕಾರಿಗಳು ಹೆಚ್ಚಾಗಿ ಯುವ ನೌಕರರಾಗಿದ್ದಾರೆ. ಸಂಘಟನೆಯಿಂದ ಸರ್ಕಾರಿ ನೌಕರರ ಹಿತ ಕಾಯುವ ಕೆಲಸವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ತಿಳಿಸಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ನೌಕರರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಪದಗ್ರಹಣ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಆರ್.ಟಿ. ನಾಯ್ಕ ಅವರು ಶಿಕ್ಷಕರಾಗಿ, ನೌಕರರ ಸಂಘದ ಅಧ್ಯಕ್ಷರಾಗಿ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.ತಾಪಂ ಕಾರ್ಯನಿರ್ವಾಹಣಾ ಅಧಿಕಾರಿ ಚೇತನ್ ಕುಮಾರ್ ಮಾತನಾಡಿ, ಸರ್ಕಾರಿ ನೌಕರರ ಬೇಡಿಕೆ, ಆಶೋತ್ತರಗಳನ್ನು ಪೂರೈಸಲು ಸಂಘ ರಚನೆಯಾಗಿದೆ. ಕಟ್ಟಕಡೆಯ ನೌಕರರು ಸಂಘದ ಸದಸ್ಯರಿದ್ದಾರೆ. ಸಂಘ ಉತ್ತಮವಾಗಿ ಸೇವೆ ಸಲ್ಲಿಸಲಿ ಎಂದರು.
ಸಂಘದ ನಿರ್ದೇಶಕ ಎಂ.ಜಿ. ನಾಯ್ಕ, ಕಸಾಪ ತಾಲೂಕಾಧ್ಯಕ್ಷ ಎಸ್.ಎಚ್. ಗೌಡ, ನೌಕರರ ಸಂಘದ ಮಾಜಿ ತಾಲೂಕಾಧ್ಯಕ್ಷ ಆರ್.ಪಿ. ಭಟ್, ಸುರೇಶ್ ನಾಯ್ಕ ಮಾತನಾಡಿದರು.ಕಾರ್ಯಕ್ರಮವನ್ನು ತಹಸೀಲ್ದಾರ್ ರವಿರಾಜ ದೀಕ್ಷಿತ್ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು. ನೌಕರರ ಸಂಘದ ತಾಲೂಕಾಧ್ಯಕ್ಷ ಅಣ್ಣಪ್ಪ ಮುಕ್ರಿ ಅಧ್ಯಕ್ಷತೆ ವಹಿಸಿದ್ದರು. ಕುಮಟಾ ನೌಕರರ ಸಂಘದ ತಾಲೂಕಾಧ್ಯಕ್ಷ ವಿನಾಯಕ ಭಂಡಾರಿ, ರಘುನಾಥ ನಾಯ್ಕ, ಚಂದ್ರಶೇಖರ ಕಳಸ, ರಾಧಾಕೃಷ್ಣ ನಾಯ್ಕ, ವೈಭವಿ ಭಂಡಾರಿ ಇದ್ದರು. ಸತೀಶ ನಾಯ್ಕ ಸ್ವಾಗತಿಸಿ, ವಿಶ್ವನಾಥ ಗೌಡ ಕಾರ್ಯಕ್ರಮ ನಿರ್ವಹಿಸಿದರು. ನಾಗಪ್ಪ ಕೋಟೂರು ವಂದಿಸಿದರು. ತಾಲೂಕಿನ ವಿವಿಧ ಇಲಾಖೆಯ ನೌಕರರು ಪಾಲ್ಗೊಂಡಿದ್ದರು.ಅಂತರ್ ವಿವಿ ಸ್ಪರ್ಧೆಗೆ ಕಾರ್ತಿಕ ಹೆಗಡೆ ಆಯ್ಕೆ
ಸಿದ್ದಾಪುರ: ಸ್ಥಳೀಯ ಎಂಜಿಸಿ ಕಲಾ, ವಾಣಿಜ್ಯ ಮತ್ತು ಜಿಎಚ್‌ಡಿ ವಿಜ್ಞಾನ ಮಹಾವಿದ್ಯಾಲಯದ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿ ಕಾರ್ತಿಕ ಜಿ. ಹೆಗಡೆ ಅವರು ತಮಿಳುನಾಡಿನ ವೆಲ್ಲೂರಿನ ವೆಲ್ಲೂರ್ ಇನ್ಸ್‌ಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಡಿ. ೧೦ರಿಂದ ೧೪ರ ವರೆಗೆ ನಡೆಯುವ ಅಂತರ್ ವಿಶ್ವವಿದ್ಯಾಲಯದ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದಾರೆ.ಇವರ ಸಾಧನೆಗೆ ಶಿಕ್ಷಣ ಪ್ರಸಾರಕ ಸಮಿತಿಯ ಚೇರ್‌ಮನ್ ವಿನಾಯಕರಾವ್ ಜಿ. ಹೆಗಡೆ, ಪ್ರೆಸಿಡೆಂಟ್ ಡಾ. ಶಶಿಭೂಷಣ ಹೆಗಡೆ, ಮಹಾವಿದ್ಯಾಲಯದ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.