ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಚೊಟ್ಟನಹಳ್ಳಿಯ 23 ಎಕರೆ ಸರ್ಕಾರಿ ಭೂಮಿಯಲ್ಲಿ 20 ಕುಂಟೆ ಜಮೀನನ್ನು ಚೊಟ್ಟನಹಳ್ಳಿ ಗ್ರಾಪಂಗೆ ತ್ಯಾಜ್ಯ ವಿಲೇವಾರಿಗೆ ಮೀಸಲಾಗಿತ್ತು. ಉಳಿದ ಜಮೀನನ್ನು ಒಂದೇ ಕುಟುಂಬಕ್ಕೆ ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಜೆಡಿಎಸ್‌ನಿಂದ ಒತ್ತಾಯಿಸುತ್ತೇವೆ ಎಂದರು.
ಕ್ಷೇತ್ರದಲ್ಲಿ ಜೆಡಿಎಸ್ ಆಸ್ತಿತ್ವವನ್ನು ಕುಂದಿಸುವ ಉದ್ದೇಶದಿಂದ ಜೆಡಿಎಸ್ ಟೌನ್ ಅಧ್ಯಕ್ಷ ಪ್ರಭು ಮೇಲೆ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ, ಸುಳ್ಳು ಆರೋಪ ಮಾಡಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.ಜೆಡಿಎಸ್ ಟೌನ್ ಘಟಕದ ಅಧ್ಯಕ್ಷ ಪ್ರಭು ಮಾತನಾಡಿ, ಸರ್ಕಾರಿ ಭೂ ಅಕ್ರಮ ಖಾತೆ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ನನ್ನ ಹೆಸರು ಬಳಸಿರುವುದಕ್ಕೆ ಖಂಡಿಸುತ್ತೇನೆ. ಅಕ್ರಮ ಭೂಮಿ ಪರಭಾರೆಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಎಂದರು.
ಖಾತೆ ಮಾಡಿಕೊಡಲು ಕಂದಾಯ ಇಲಾಖೆಗೆ ಯಾವುದೇ ಅರ್ಜಿ ಹಾಕಿಲ್ಲ. ಪ್ರಭು ಎಂಬ ಹೆಸರಿನವರು ನಮ್ಮ ಬಡಾವಣೆಯಲ್ಲಿ ಹಲವು ಮಂದಿ ಇದ್ದಾರೆ. ಆರೋಪದ ಬಗ್ಗೆ ಸೂಕ್ತ ದಾಖಲೆ ನೀಡಬೇಕು. ಇಲ್ಲದಿದ್ದರೆ ವಕೀಲರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದರು.
ಈ ವೇಳೆ ಪುರಸಭೆ ಸದಸ್ಯರಾದ ಎಂ.ಟಿ.ಪ್ರಶಾಂತ್, ಸಿದ್ದರಾಜು, ಟಿ.ನಂದಕುಮಾರ್, ನಾಗೇಶ್, ಮುಖಂಡರಾದ ಬೂವಳ್ಳಿ ಸದಾನಂದ್, ಶ್ರೀಧರ್, ಕಾಂತರಾಜು, ಮೊಹಬುಬ್ ಪಾಷಾ, ಆನಂದ್, ಕಂಬರಾಜು, ಸಿದ್ದಾಚಾರಿ, ಕಿಟ್ಟಿ ಇದ್ದರು.