ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಸರ್ಕಾರಗಳ ಮೀನಾಮೇಷ: ಉಮೇಶ ಕೆ. ಮುದ್ನಾಳ

KannadaprabhaNewsNetwork | Published : Jan 10, 2024 1:45 AM

ಸಾರಾಂಶ

ಟೋಕ್ರೆ ಕೋಲಿ ಬಿಟ್ಟುಹೋದ ಪರ್ಯಾಯ ಪದಗಳಾದ ಕೋಲಿ, ಅಂಬಿಗ, ಬೆಸ್ತ ಸೇರಿ ಹಲವು ಪದಗಳನ್ನು ಎಸ್ಟಿಗೆ ಸೇರಿಸುವಲ್ಲಿ ಮೀನಾಮೇಷ ಎಣಿಸಲಾಗುತ್ತಿದೆ ಉಮೇಶ ಕೆ. ಮುದ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಇದೇ ಜ.21ರಂದು ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಜನಜಾಗೃತಿ ಅಭಿಯಾನ ಜಾಥಾ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಅಜಲಾಪುರ ಗ್ರಾಮದ ಪ್ರಮುಖ ರಸ್ತೆಯಲ್ಲಿ ನಡೆಯಿತು.

ಜಾಥಾ ನೇತೃತ್ವ ವಹಿಸಿದ್ದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ವಾತಂತ್ರ್ಯ ಸಿಕ್ಕನಂತರ ಇಲ್ಲಿಯವರೆಗೆ ಟೋಕ್ರೆ ಕೋಲಿ ಬಿಟ್ಟುಹೋದ ಪರ್ಯಾಯ ಪದಗಳಾದ ಕೋಲಿ, ಅಂಬಿಗ, ಬೆಸ್ತ ಸೇರಿ ಹಲವು ಪದಗಳನ್ನು ಎಸ್ಟಿಗೆ ಸೇರಿಸುವಲ್ಲಿ ಮೀನಾಮೇಷ ಎಣಿಸಲಾಗುತ್ತಿದೆ ಎಂದರು.

ಈ ಸಮಾಜವನ್ನು ಸುಮಾರು ವರ್ಷಗಳಿಂದ ದಿ. ವಿಠಲ್ ಹೇರೂರ ಸಾಕಷ್ಟು ಭಾರಿ ಹೋರಾಟ ಮಾಡಿದರೂ ಸಹ ಇದುವರೆಗೆ ಎಸ್ಟಿಗೆ ಸೇರಿಸುವಲ್ಲಿ ಸರ್ಕಾರಗಳು ವಿಫಲವಾಗಿರುವುದು ದುರದೃಷ್ಟಕರ ಸಂಗತಿ. ದೇಶದಲ್ಲಿ 16 ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಈ ಸಮಾಜ ಮತ್ತು 9 ರಾಜ್ಯದಲ್ಲಿ ಪರಿಶಿಷ್ಟ ಪಂಗಡದಲ್ಲಿದ್ದರೂ ಸಹ ಚುನಾಣೆ ಸಮಯದಲ್ಲಿ ಮತ ಪಡೆಯಲು ನಮ್ಮ ನಾಯಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆಗೆ ಭೂಮಿಪೂಜೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಮುಖಂಡರಾದ ವಿಶ್ವನಾಥ, ರಫೀಕ್ ಪಟೇಲ, ನರಸಿಂಹಲು, ಬಾಬು, ಅನಿಲ್, ಬನ್ನಪ್ಪ, ಸಾಬಣ್ಣ, ಶಂಕರ, ಭೀಮಶೆಪ್ಪ, ಸಿದ್ದಪ್ಪ, ಭೀಮಪ್ಪ, ಶಾಂತಪ್ಪ, ಈಶ್ವರ, ಶಂಕ್ರಪ್ಪ, ಶಿವರಾಜ, ಶೇಖರ, ತಿಪ್ಪಣ್ಣ, ಚಂದ್ರಪ್ಪ ಬಾಗ್ಲಿ, ಸೌರಪ್ಪ, ಮಲ್ಲಿಕಾಜಪ್ಪ, ಶಂಕ್ರಪ್ಪ, ರಾಮಚಂದ್ರ, ಹಣಮಂತ, ಶಿವರಜ ಶೇಖರಪ್ಪ, ನಿಂಗಪ್ಪ, ಬಾಲರಾಜ, ಭೀಮರಾಯ, ಬನ್ನಪ್ಪ, ಭೀಮಪ್ಪ, ಲಕ್ಷ್ಮಿಕಾಂತ, ಭೀಮರಾಯ, ಚಂದ್ರು, ಲೋಕೇಶ, ಶಿವು , ರಮೇಶ ಹಾಗೂ ಮಹಿಳೆಯರು ಇದ್ದರು.

Share this article