ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಕ್ಕೆ ಜಿಪಂ ಸಿಇಒ ಭೇಟಿ

KannadaprabhaNewsNetwork |  
Published : Aug 14, 2024, 12:47 AM IST
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ವಿಜಯಪುರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ  ಭೇಟಿ ನೀಡಿ ಪರಿಶೀಲಿಸಿದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದಲ್ಲಿ ಒದಗಿಸುತ್ತಿರುವ ಆಪ್ತ ಸಮಾಲೋಚನೆ ಹಾಗೂ ಸಲಹೆಗಳ ಕುರಿತು ಅವರು ಖುದ್ದಾಗಿ ಪರಿಶೀಲಿಸಿ, ದಾಖಲಾಗಿರುವ ಪ್ರಕರಣಗಳ ಪ್ರತ್ಯೇಕ ಕಡತ, ದೂರವಾಣಿ ಕರೆಗಳ ವಹಿ, ಸಂದರ್ಶಕರ ವಹಿ, ಆಪ್ತ ಸಮಾಲೋಚನಾ ದಾಖಲಾತಿ, ಕೇಂದ್ರದ ಮಾಸಿಕ ಪ್ರಗತಿ ವರದಿ, ಪ್ರಕರಣಗಳ ದಾಖಲಾತಿ ಪುಸ್ತಕ, ಸಿಬ್ಬಂದಿ ಹಾಜರಾತಿ ಪುಸ್ತಕ ಹಲವಾರು ದಾಖಲೆಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದಲ್ಲಿ ಒದಗಿಸುತ್ತಿರುವ ಆಪ್ತ ಸಮಾಲೋಚನೆ ಹಾಗೂ ಸಲಹೆಗಳ ಕುರಿತು ಅವರು ಖುದ್ದಾಗಿ ಪರಿಶೀಲಿಸಿ, ದಾಖಲಾಗಿರುವ ಪ್ರಕರಣಗಳ ಪ್ರತ್ಯೇಕ ಕಡತ, ದೂರವಾಣಿ ಕರೆಗಳ ವಹಿ, ಸಂದರ್ಶಕರ ವಹಿ, ಆಪ್ತ ಸಮಾಲೋಚನಾ ದಾಖಲಾತಿ, ಕೇಂದ್ರದ ಮಾಸಿಕ ಪ್ರಗತಿ ವರದಿ, ಪ್ರಕರಣಗಳ ದಾಖಲಾತಿ ಪುಸ್ತಕ, ಸಿಬ್ಬಂದಿ ಹಾಜರಾತಿ ಪುಸ್ತಕ ಹಲವಾರು ದಾಖಲೆಗಳನ್ನು ಪರಿಶೀಲಿಸಿದರು.

ಕೇಂದ್ರದಲ್ಲಿ ಒದಗಿಸಲಾದ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಸಾಂತ್ವನ ಕೇಂದ್ರಕ್ಕೆ ವರದಿಯಾಗುವ ಪ್ರಕರಣಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಪಡಿಸಿ ಸಕಾಲದಲ್ಲಿ ಪರಿಹಾರ ಒದಗಿಸಬೇಕು. ಸಾಂತ್ವನ ಕೇಂದ್ರದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಸಾವಿತ್ರಿ ಗುಗ್ಗರಿ, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷ ವಿಶ್ವನಾಥ್ ಬೆನಕಟ್ಟಿ, ಆಪ್ತ ಸಮಾಲೋಚಕ ರಿಯಾನಬಿ ಎಸ್.ಕಡಕೋಳ, ಸಮಾಜ ಕಾರ್ಯಕರ್ತರಾದ ಖಾಜಮ್ಮ ಮರಾಠಿ, ಸ್ನೇಹ ಹಾಬರಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವಿತೀಯ ಪಿಯುಸಿ ಫಲಿತಾಂಶ: ಅಂಬಿಕಾ ಪದವಿ ಪೂರ್ವ ವಿದ್ಯಾಲಯಕ್ಕೆ ದ್ವಿತೀಯ ರ‍್ಯಾಂಕ್
ಕೊರಗರ ಕಟ್ಟುಕಟ್ಟಲೆಗಳು: ಆರಾಧನೆ ಮತ್ತು ಆಚರಣೆ ಪುಸ್ತಕ ಬಿಡುಗಡೆ