ಕನ್ನಡಪ್ರಭ ವಾರ್ತೆ ಬನ್ನೂರು
ಬನ್ನೂರು ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಚನ್ನಪ್ಪ ಮತ್ತು ಕಾರ್ಯದರ್ಶಿಯಾಗಿ ರಾಮಚಂದ್ರ ಆಯ್ಕೆಯಾದರು.ಪಟ್ಟಣದ ಮಾಕನಹಳ್ಳಿಯಲ್ಲಿರುವ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ರಾಜ್ಯಪಾಲ ಕೆ. ದೇವೇಗೌಡ ನೂತನ ಅಧ್ಯಕ್ಷ ಚನ್ನಪ್ಪ ಮತ್ತು ಕಾರ್ಯದರ್ಶಿ ರಾಮಚಂದ್ರ ತಂಡಕ್ಕೆ ಪದವಿ ಪ್ರಮಾಣ ವಚನ ಬೋಧಿಸಿದರು.
ನಂತರ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಹಲವಾರು ಸಮಾಜ ಸೇವಾ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು, ಗ್ರಾಮಾಂತರ ಪ್ರದೇಶ ಜನರನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಉಚಿತ ಆರೋಗ್ಯ ಶಿಬಿರ, ಕಣ್ಣಿನ ತಪಾಸಣಾ ಶಿಬಿರ, ಎಸ್ಎಸ್ಎಲ್ಸಿ ಮಕ್ಕಳಿಗೆ ಉಚಿತ ಕಾರ್ಯಾಗಾರ, ಕ್ಯಾನ್ಸರ್ ತಪಾಸಣಾ ಶಿಬಿರ, ಪರಿಸರ ಜಾಗೃತಿ ಶಿಬಿರದಂತ ಕಾರ್ಯಕ್ರಮವನ್ನು ಮಾಡುವ ಮೂಲಕ ನಿರಂತರವಾಗಿ ಸೇವೆಯಲ್ಲಿ ತೊಡಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಶಿಕ್ಷಣ ಸಂಸ್ಥೆಯ ಮೂಲಕ ಉತ್ತಮ ವಿದ್ಯಾರ್ಥಿಗಳನ್ನು ಬೆಳೆಸಿ ಸಮಾಜಕ್ಕೆ ನೀಡುತ್ತಿದೆ ಎಂದು ತಿಳಿಸಿದರು.ನೂತನ ಅಧ್ಯಕ್ಷ ಚನ್ನಪ್ಪ ಮಾತನಾಡಿ, ಎಲ್ಲರ ಸಹಕಾರದಿಂದ 2024-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿದ್ದು, ತಂಡದ ಸಹಕಾರದೊಂದಿಗೆ ಸಮಾಜಸೇವಾ ಕಾರ್ಯವನ್ನು ಮಾಡುವಂತಹ ಗುರಿ ಹೊಂದಿದ್ದು, ಎಲ್ಲರು ಸಹಕರಿಸುವಂತೆ ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಬಿ.ಎಸ್. ರವೀಂದ್ರಕುಮಾರ್, ವೈ.ಎಸ್. ರಾಮಸ್ವಾಮಿ ಮಾತನಾಡಿದರು.ಕುಡಿವ ನೀರಿನ ಟ್ಯಾಂಕ್ ಉದ್ಘಾಟನೆ ಮಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾಜಿ ಶಾಸಕ ಎಸ್. ಕೃಷ್ಣಪ್ಪ, ನೂತನ ಅಧ್ಯಕ್ಷ ಚನ್ನಪ್ಪ, ಕಾರ್ಯದರ್ಶಿ ಡಾ. ರಾಮಚಂದ್ರ, ಮಾಜಿ ಅಧ್ಯಕ್ಷ ಡಿ. ಪುಟ್ಟೇಗೌಡ, ಡಾ. ರವಿಕುಮಾರ್, ಬಿ.ಎಸ್. ರವೀಂದ್ರಕುಮಾರ್, ವೈ.ಕೆ. ರಮೇಶ್, ವೈ.ಎಸ್. ರಾಮಸ್ವಾಮಿ, ಬಿ. ಬಸುರಾಜು, ಎಸ್. ರಾಮಚಂದ್ರ, ಎಂ.ಡಿ. ಪುಟ್ಟಸ್ವಾಮಿ, ರಮೇಶ್, ಎಚ್.ಎಂ. ಸ್ವಾಮಿ, ಕೆ. ಗೋವಿಂದ, ಟಿ.ವಿ. ವೇಣುಗೋಪಾಲ್, ಎನ್.ಎನ್. ಅನಿಲ್‌ಕುಮಾರ್, ಬಿ.ಸಿ. ತಿಮ್ಮೇಗೌಡ, ಬಿ.ಕೆ. ಜಯರಾಮು, ಕೆ. ನಾಗರಾಜು, ಎಸ್. ನಾಗರಾಜು, ಎಂ. ಪ್ರದೀಪ್ ಕುಮಾರ್, ಕೆ.ಎಸ್. ಮಹೇಶ್ ಕುಮಾರ್, ಡಾ.ಎಸ್.ಕೆ. ವೀರಪ್ಪಗೌಡ, ಬಿ.ಎಲ್. ಶಿವಸ್ವಾಮಿ, ಬಿ. ಮಂಜುನಾಥ, ಕೆ. ನಾಗೇಂದ್ರ, ಎಂ. ಚಂದ್ರಶೇಖರ್ ಭಟ್, ವಸಂತ, ಉಷಾ, ಯಶೋಧ ಇದ್ದರು.